ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DMK Controversy: ಶೈವ, ವೈಷ್ಣವ ಅಂದ್ರೆ ಇದಂತೆ ಅರ್ಥ!....ಅವಾಚ್ಯ ಶಬ್ದಗಳ ಮೂಲಕ ನಾಲಿಗೆ ಹರಿಬಿಟ್ಟ ಸಚಿವ

DMK Controversy: ವಿವಾದಾತ್ಮಕ ಹೇಳಿಕೆ ನೀಡಿದ ತಮಿಳುನಾಡಿನ ಡಿಎಂಕೆ ಹಿರಿಯ ನಾಯಕ ಮತ್ತು ಸಚಿವ ಕೆ. ಪೊನ್ಮುಡಿ ಅವರನ್ನು ಡಿಎಂಕೆ ಹುದ್ದೆಯಿಂದ ಶುಕ್ರವಾರ ವಜಾಗೊಳಿಸಿದೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಹಿಳೆಯರು, ಶೈವರು ಮತ್ತು ವೈಷ್ಣವರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೆ. ಪೊನ್ಮುಡಿ ಬಳಿಕ ಭಾರಿ ವಿವಾದಕ್ಕೆ ಗುರಿಯಾಗಿದ್ದಾರೆ. ಬಳಿಕ ಪೊನ್ಮುಡಿ ಅವರನ್ನು ಪಕ್ಷದ ಹುದ್ದೆಯಿಂದಲೇ ತೆಗೆದುಹಾಕಲಾಯಿತು.

ಶೈವ, ವೈಷ್ಣವ ಮತಗಳ ಬಗ್ಗೆ ಅವಹೇಳನ- ನಾಲಿಗೆ ಹರಿಬಿಟ್ಟ ಸಚಿವ

ಚೆನ್ನೈ: ಶೈವ ಮತ್ತು ವೈಷ್ಣವ ಧರ್ಮಗಳ ಬಗ್ಗೆ ವಿವಾದಾತ್ಮಕ ಹೇಳಿಕೆ (DMK Controversy) ನೀಡಿ ತಮಿಳುನಾಡಿನ (Tamilnadu) ಡಿಎಂಕೆ (DMK) ಹಿರಿಯ ನಾಯಕ ಮತ್ತು ಸಚಿವರೊಬ್ಬರು ತಮ್ಮ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದಾರೆ. ಭಾರೀ ವಿವಾದಕ್ಕೀಡಾಗುತ್ತಿದ್ದಂತೆ ಸಚಿವ ಕೆ. ಪೊನ್ಮುಡಿ (K.Ponmudy) ಅವರನ್ನು ಡಿಎಂಕೆ ಹುದ್ದೆಯಿಂದ ಶುಕ್ರವಾರ ವಜಾಗೊಳಿಸಿದ್ದಾರೆ. ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಹಿಳೆಯರು, ಶೈವರು ಮತ್ತು ವೈಷ್ಣವರು ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಕೆ. ಪೊನ್ಮುಡಿ ಬಳಿಕ ಭಾರಿ ವಿವಾದಕ್ಕೆ ಗುರಿಯಾದರು. ಅವರ ಹೇಳಿಕೆಗೆ ಪಕ್ಷದ ಕನಿಮೋಳಿ ಮತ್ತು ಬಿಜೆಪಿ ನಾಯಕ ಕೆ. ಅಣ್ಣಾಮಲೈ ವಿರೋಧಿಸಿದ್ದು, ಬಳಿಕ ಪೊನ್ಮುಡಿ ಅವರನ್ನು ಪಕ್ಷದ ಹುದ್ದೆಯಿಂದಲೇ ತೆಗೆದುಹಾಕಲಾಯಿತು. ಈ ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಣೆಯನ್ನು ಹೊರಡಿಸಿದ್ದಾರೆ.

ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸಚಿವ ಕೆ. ಪೊನ್ಮುಡಿ ಅವರನ್ನು ತೆಗೆದುಹಾಕಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಘೋಷಣೆಯಲ್ಲಿ ತಿಳಿಸಿದ್ದು, ಈ ಕ್ರಮಕ್ಕೆ ಯಾವುದೇ ಕಾರಣಗಳನ್ನು ಅವರು ನೀಡಿಲ್ಲ. ಪೊನ್ಮುಡಿ ಅವರ ಬದಲಿಗೆ ರಾಜ್ಯಸಭಾ ಸದಸ್ಯ ತಿರುಚಿ ಶಿವ ಅವರ ಹೆಸರನ್ನು ಸೂಚಿಸಿರುವ ಸ್ಟಾಲಿನ್, ಪಕ್ಷದ ನಿಯಮಗಳ ಪ್ರಕಾರ ಶಿವ ಅವರನ್ನು ಅವರ ಪ್ರಚಾರ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.



ಪೊನ್ಮುಡಿ ಹೇಳಿದ್ದೇನು?

ಏಪ್ರಿಲ್ 6 ರಂದು ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಚಿವ ಕೆ. ಪೊನ್ಮುಡಿ, ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಪೊನ್ಮುಡಿ ಅವರು ಪುರುಷ ಮತ್ತು ಲೈಂಗಿಕ ಕಾರ್ಯಕರ್ತೆಯರ ನಡುವೆ ನಡೆದ ಅಸಭ್ಯ ಸಂಭಾಷಣೆಯನ್ನು ಶೈವ ಮತ್ತು ವೈಷ್ಣವ ಮತಗಳ ಉದಾಹರಣೆ ನೀಡಿ ಹೇಳಿದ್ದಾರೆ. ಈ ಹೇಳಿಕೆ ಬಿಜೆಪಿ, ಬಲಪಂಥೀಯರು ಮಾತ್ರವಲ್ಲದೇ ಸ್ವಪಕ್ಷ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ.

ಇದನ್ನೂ ಓದಿ: Narendra Modi: ದೇಶವನ್ನೇ ಬೆಚ್ಚಿ ಬೀಳಿಸಿದ ಗ್ಯಾಂಗ್‌ರೇಪ್‌ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪ್ರಧಾನಿ ಮೋದಿ ಆದೇಶ

ಪೊನ್ಮುಡಿ ಹೇಳಿಕೆಗೆ ಅನೇಕ ರಾಜಕೀಯ ನಾಯಕರು ಟೀಕಿಸಿದ್ದಾರೆ. ಅವರ ಪಕ್ಷದ ಕನಿಮೋಳಿ ಮತ್ತು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸೇರಿದಂತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವ ಪೊನ್ಮುಡಿ ಅವರ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದು ಹೇಳಿರುವ ಕನಿಮೋಳಿ, ಅವರು ಯಾವುದೇ ಕಾರಣಕ್ಕಾಗಿ ಈ ರೀತಿ ಮಾತನಾಡಿದ್ದರೂ ಅಂತಹ ಅಸಭ್ಯ ಪದಗಳು ಖಂಡನೀಯ ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.



ತಮಿಳುನಾಡು ಬಿಜೆಪಿ ಘಟಕದ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಅವರು ತಮ್ಮ ಪೋಸ್ಟ್ ನಲ್ಲಿ ಸಚಿವ ಪೊನ್ಮುಡಿ ಮುಂದುವರಿಯುವುದು ನಾಚಿಕೆಗೇಡಿನ ಸಂಗತಿ. ಸಿಎಂ ಸ್ಟಾಲಿನ್ ಅವರು ಪೊನ್ಮುಡಿ ಬಂಧನಕ್ಕೆ ಆದೇಶಿಸುತ್ತೀರಾ ಎಂದು ಪ್ರಶ್ನಿಸಿದ್ದು, ಅವರು ತಮ್ಮ ಹೇಳಿಕೆಗಳ ಮೂಲಕ ತಮಿಳುನಾಡಿನ ಮಹಿಳೆಯರನ್ನು ನಿಂದಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.



ಪೊನ್ಮುಡಿ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಕೆ. ಅಣ್ಣಾಮಲೈ, ಡಿಎಂಕೆಯನ್ನು ತರಾಟೆಗೆ ತೆಗೆದುಕೊಂಡರು. ಇದು ಪಕ್ಷದ ರಾಜಕೀಯ ಭಾಷಣದ ಮಾನದಂಡವೇ ಎಂದು ಪ್ರಶ್ನಿಸಿದರು.

ಈ ಸಚಿವರಷ್ಟೇ ಅಲ್ಲ, ಇಡೀ ಡಿಎಂಕೆ ವ್ಯವಸ್ಥೆಯೇ ಅಸಭ್ಯವಾಗಿದೆ. ಇಂತಹ ಅವಮಾನಕರ ಗುಂಪನ್ನು ಮುನ್ನಡೆಸಿದ್ದಕ್ಕಾಗಿ ಸ್ಟಾಲಿನ್ ನಾಚಿಕೆಯಿಂದ ತಲೆ ತಗ್ಗಿಸಿ ಎಂದು ತಿಳಿಸಿದ್ದಾರೆ. ನಟಿ ಮತ್ತು ಬಿಜೆಪಿ ನಾಯಕಿ ಖುಷ್ಬು ಸುಂದರ್ ಅವರು ಎಕ್ಸ್ ನಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಟ್ಯಾಗ್ ಮಾಡಿ, ನಿಮಗೆ ಎಂದಾದರೂ ಅವರನ್ನು ಅವರ ಕುರ್ಚಿ ಮತ್ತು ಸ್ಥಾನದಿಂದ ಹೊರಹಾಕಲು ಧೈರ್ಯ ಬರುತ್ತದೆಯೇ? ಅಥವಾ ನೀವು ಮತ್ತು ನಿಮ್ಮ ಪಕ್ಷವು ಮಹಿಳೆಯರು ಮತ್ತು ಹಿಂದೂ ಧರ್ಮವನ್ನು ಅವಮಾನಿಸುವಲ್ಲಿ ಆನಂದ ಪಡುತ್ತಿದ್ದಾರ ಎಂದು ಕೇಳಿದ್ದಾರೆ.



ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಇದನ್ನು ಡಿಎಂಕೆ ಹಿಂದೂ ಧರ್ಮದ ಮೇಲಿನ ದಾಳಿಯ ಮುಂದುವರಿಕೆ ಎಂದು ಹೇಳಿದ್ದಾರೆ. ಡಿಎಂಕೆ, ಕಾಂಗ್ರೆಸ್, ಟಿಎಂಸಿ ಅಥವಾ ಆರ್‌ಜೆಡಿ, ಐಎನ್‌ಡಿಐ ಮೈತ್ರಿಕೂಟದ ಸದಸ್ಯರು ಸಿದ್ಧಾಂತದಿಂದಲ್ಲ ಹಿಂದೂ ನಂಬಿಕೆಗಳ ಬಗ್ಗೆ ತಿರಸ್ಕಾರದಿಂದ ಒಂದಾಗಿದ್ದಾರೆಂದು ತೋರುತ್ತದೆ ಎಂದು ಮಾಳವಿಯಾ ತಿಳಿಸಿದ್ದಾರೆ.