ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಕೆಶಿ-ವಿಜಯ್ ದೆಹಲಿ ಭೇಟಿ: 'ಮೇಕೆದಾಟು ಸಿನಿಮಾವಲ್ಲ' ಎಂದು ಸಿಎಂ ವಿರುದ್ಧ ಡಿಎಂಕೆ ವಾಗ್ದಾಳಿ

ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಆತ್ಮೀಯವಾಗಿ ಕಾಣಿಸಿಕೊಂಡ ಬೆನ್ನಲ್ಲೇ, ತಮಿಳುನಾಡಿನಲ್ಲಿ ಮೇಕೆದಾಟು ಜಲವಿವಾದದ ರಾಜಕೀಯ ಕಾವು ತೀವ್ರಗೊಂಡಿದೆ.

ಸಂಗ್ರಹ ಚಿತ್ರ

ನವದೆಹಲಿ: ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಹಾಗೂ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (CM Vijay) ಅವರು ಆತ್ಮೀಯವಾಗಿ ಕಾಣಿಸಿಕೊಂಡ ಬೆನ್ನಲ್ಲೇ, ತಮಿಳುನಾಡಿನಲ್ಲಿ ಮೇಕೆದಾಟು ಜಲವಿವಾದದ ರಾಜಕೀಯ ಕಾವು ತೀವ್ರಗೊಂಡಿದೆ. ಮೇಕೆದಾಟು ಯೋಜನೆಯಂತಹ ಗಂಭೀರ ವಿಚಾರವನ್ನು ಮುಖ್ಯಮಂತ್ರಿ ವಿಜಯ್ ಅವರು "ಫಿಲ್ಮಿ ಸ್ಟೈಲ್" (ಸಿನಿಮಾ ಶೈಲಿಯಲ್ಲಿ) ನಿಭಾಯಿಸುತ್ತಿದ್ದಾರೆ ಎಂದು ವಿರೋಧ ಪಕ್ಷ ಡಿಎಂಕೆ ಕಿಡಿಕಾರಿದೆ.

ಮೇಕೆದಾಟು ಎನ್ನುವುದು ಕೋಟ್ಯಂತರ ತಮಿಳು ಜನರ ಜೀವನೋಪಾಯದ ಪ್ರಶ್ನೆಯಾಗಿದೆಯೇ ಹೊರತು ಇದು ಸಿನಿಮಾವಲ್ಲ. ಸಿನಿಮಾಗಳಲ್ಲಿ ಏಕಾಂಗಿ ಪ್ರದರ್ಶನ (ಸೋಲೋ ಪರ್ಫಾರ್ಮೆನ್ಸ್) ನೀಡಬಹುದು, ಆದರೆ ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು" ಎಂದು ಎಚ್ಚರಿಸಲಾಗಿದೆ. ಕೇವಲ ಸಿನಿಮಾ ಡೈಲಾಗ್‌ಗಳನ್ನು ಹೊಡೆಯುತ್ತಾ ಕಳೆದ ಆರು ತಿಂಗಳ ಸಮಯವನ್ನು ವಿಜಯ್ ವ್ಯರ್ಥ ಮಾಡಿದ್ದಾರೆ ಎಂದೂ ಡಿಎಂಕೆ ಆರೋಪಿಸಿದೆ.

ದೆಹಲಿ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ವಿಜಯ್ ನಗುತ್ತಾ ಮಾತುಕತೆ ನಡೆಸಿರುವುದನ್ನು ಪ್ರಶ್ನಿಸಿರುವ ಡಿಎಂಕೆ ವಕ್ತಾರ ಟಿ.ಕೆ.ಎಸ್. ಇಳಂಗೋವನ್, "ವಿಜಯ್ ಅವರಿಗೆ ಕಾವೇರಿ ಮತ್ತು ಮೇಕೆದಾಟು ಸಮಸ್ಯೆಯ ಗಂಭೀರತೆಯೇ ಅರ್ಥವಾಗಿಲ್ಲ" ಎಂದು ಟೀಕಿಸಿದ್ದಾರೆ. ಈ ವಿಚಾರವಾಗಿ ತಕ್ಷಣವೇ ಸರ್ವಪಕ್ಷ ಸಭೆ ಕರೆಯುವಂತೆ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ದೆಹಲಿ ಭೇಟಿಯ ವೇಳೆ ಕಾಂಗ್ರೆಸ್ ನಾಯಕರ ಮುಂದೆ ಮೇಕೆದಾಟು ಯೋಜನೆಯನ್ನು ವಿರೋಧಿಸಿ ಮಾತನಾಡದೆ ವಿಜಯ್ ತಮಿಳುನಾಡಿನ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಎಐಎಡಿಎಂಕೆ ಕೂಡ ಆರೋಪಿಸಿದೆ.

ಮೇಕೆದಾಟು ಅಣೆಕಟ್ಟು ವಿವಾದ: ಡಿಕೆ ಶಿವಕುಮಾರ್‌ ವಿರುದ್ಧ ತಮಿಳುನಾಡು ಕಾಂಗ್ರೆಸ್ ಸಂಸದ ಕಿಡಿ; 'ಒಂದು ಇಟ್ಟಿಗೆಯನ್ನೂ ಹಾಕಲು ಬಿಡುವುದಿಲ್ಲ' ಎಂದು ಎಚ್ಚರಿಕೆ

ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ತಮಿಳುನಾಡು ರಾಜಕೀಯ ಪಕ್ಷಗಳ ಈ ವಿರೋಧಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತಾವು ಮತ್ತು ವಿಜಯ್ ಉತ್ತಮ ಸ್ನೇಹಿತರು ಎಂದು ಹೇಳಿದ್ದಾರೆ. "ಮೇಕೆದಾಟು ಯೋಜನೆಯನ್ನು ತಮಿಳುನಾಡು ರಾಜಕೀಯ ಪಕ್ಷಗಳು ಏಕೆ ವಿರೋಧಿಸುತ್ತಿವೆ ಎಂಬುದೇ ತಿಳಿಯುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರು ಬಿಡಲು ಕರ್ನಾಟಕ ಬದ್ಧವಾಗಿದೆ ಮತ್ತು ಅದನ್ನು ತಪ್ಪದೇ ಪಾಲಿಸುತ್ತಿದೆ" ಎಂದು ಹೇಳಿದ್ದಾರೆ.

Vishakha Bhat Heggar

View all posts by this author