Viral Video: ಬ್ಯಾಂಕ್ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್, ಮುಂದೇನಾಯ್ತು?
Money theft in Bank: ನೀವು ಬ್ಯಾಂಕ್‌ನಲ್ಲಿ ಹಣ ಸುರಕ್ಷಿತ ಎಂದು ಭಾವಿಸುತ್ತಿದ್ದೀರಾ? ಬ್ಯಾಂಕ್‍ನಲ್ಲಿ ನಿಮ್ಮ ದುಡ್ಡನ್ನು ಇಡುವಾಗ ಸ್ವಲ್ಪ ಯೋಚಿಸಿ. ಕ್ಯಾಶಿಯರ್ ಒಬ್ಬ ಗ್ರಾಹಕರ ಹಣವನ್ನು ಕದ್ದು ಸಿಕ್ಕಿಬಿದ್ದಿದ್ದಾನೆ. ಉತ್ತರ ಪ್ರದೇಶದ ಮಹೋಬಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್ ಆಗಿದೆ.
ಸಾಂದರ್ಭಿಕ ಚಿತ್ರ -
ಲಖನೌ: ಜನರು ತಮ್ಮ ಹಣವನ್ನು ಸುರಕ್ಷಿತವಾಗಿಡಲು ಬ್ಯಾಂಕುಗಳಲ್ಲಿ ಠೇವಣಿ ಇಡುತ್ತಾರೆ. ಆದರೆ, ಬ್ಯಾಂಕ್‍ನಲ್ಲಿದ್ದವರೇ ಕಳ್ಳರಾದರೇ ಏನು ಮಾಡುವುದು? ಉತ್ತರ ಪ್ರದೇಶದ (Uttar Pradesh) ಮಹೋಬಾದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಇದರ ವಿಡಿಯೊ ವೈರಲ್ (viral video) ಆಗಿದೆ. ಈ ಘಟನೆಯು ಗ್ರಾಹಕರ ಹಣದ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ಮಹೋಬಾದ ಜಿಲ್ಲಾ ಸಹಕಾರಿ ಬ್ಯಾಂಕಿನ ಕ್ಯಾಶಿಯರ್ ಒಬ್ಬ ಗ್ರಾಹಕರ ನೋಟುಗಳನ್ನು ಕದ್ದು, ನಂತರ ಆ ಬಂಡಲ್‌ನಲ್ಲಿ ಕಡಿಮೆ ನೋಟುಗಳಿವೆ ಎಂದು ಹೇಳಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ಕ್ಯಾಷಿಯರ್ ಪಕ್ಕಕ್ಕೆ ಸರಿದು ಕೆಲವು ಕರೆನ್ಸಿ ನೋಟುಗಳನ್ನು ಮರೆಮಾಡಿ ಉಳಿದ ನೋಟುಗಳನ್ನು ನಗದು ಎಣಿಸುವ ಯಂತ್ರಕ್ಕೆ ಹಾಕುವುದನ್ನು ದೃಶ್ಯದಲ್ಲಿ ತೋರಿಸಲಾಗಿದೆ.
ಮದ್ಯದಂಗಡಿಗೆ ನುಗ್ಗಿ ಬಾಟಲಿ ಪುಡಿ ಪುಡಿ ಮಾಡಿದ ನಾರಿಮಣಿಗಳು; ವಿಡಿಯೋ ವೈರಲ್
ಕ್ಯಾಷಿಯರ್ ಅನ್ನು ಮೋಹಿತ್ ಖರೆ ಎಂದು ಗುರುತಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದ ನಂತರ ಆತನನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಮೋಹಿತ್‍ನನ್ನು ವಜಾಗೊಳಿಸಲು ಶಿಫಾರಸು ಮಾಡುವ ವರದಿಯನ್ನು ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತಿದೆ. ಘಟನೆ ಯಾವಾಗ ನಡೆಯಿತು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ.
ವಿಡಿಯೊ ಇಲ್ಲಿದೆ:
यूपी – जिला महोबा के डिस्ट्रिक्ट कॉपरेटिव बैंक में कैशियर मोहित
— News Watch India (@NewsWatch_Ind) December 18, 2025
खरे ने एक ग्राहक के नोट चुरा लिए और फिर गड्डी में नोट कम होने
बता दिए।
CCTV से सच्चाई सामने आई। कैशियर सस्पेंड हुआ।
टर्मिनेशन के लिए हेडक्वार्टर को रिपोर्ट भेजी जा रही है।#UPNews pic.twitter.com/4FiSuXkOEu
ರೋಹಿಂಗ್ಯಾ ವ್ಯಕ್ತಿಯ ಹತ್ಯೆ
ಭಾರತದ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ರೋಹಿಂಗ್ಯಾ ನಿರಾಶ್ರಿತರು ವಾಸಿಸುತ್ತಿದ್ದಾರೆ. ಈ ರೋಹಿಂಗ್ಯಾಗಳು ಮ್ಯಾನ್ಮಾರ್ ನಿವಾಸಿಗಳಾಗಿದ್ದು, ಅಲ್ಲಿನ ಸೇನೆಯ ದಬ್ಬಾಳಿಕೆಯನ್ನು ಎದುರಿಸಿದ ನಂತರ ಬಾಂಗ್ಲಾದೇಶ, ಭಾರತ ಮತ್ತು ಇತರ ಹಲವು ಸ್ಥಳಗಳಲ್ಲಿ ಆಶ್ರಯ ಪಡೆದಿದ್ದಾರೆ. ಈಗ, ತೆಲಂಗಾಣದ ರಾಜಧಾನಿ ಹೈದರಾಬಾದ್‌ನಲ್ಲಿ ರೋಹಿಂಗ್ಯಾ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಆತನನ್ನು 19 ಬಾರಿ ಇರಿದು ಹತ್ಯೆ ಮಾಡಲಾಯಿತು. ಮಾಹಿತಿಯ ಪ್ರಕಾರ, ಈ ಕೊಲೆಯ ಅಪರಾಧಿಯೂ ರೋಹಿಂಗ್ಯಾನೇ ಆಗಿದ್ದಾನೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಹೈದರಾಬಾದ್‌ನಲ್ಲಿ 19 ವರ್ಷದ ರೋಹಿಂಗ್ಯಾ ವ್ಯಕ್ತಿಯನ್ನು ಮತ್ತೊಬ್ಬ ರೋಹಿಂಗ್ಯಾ ವ್ಯಕ್ತಿ ಇರಿದು ಕೊಂದಿದ್ದಾನೆ. ಪೊಲೀಸರು ಗುರುವಾರ ಕೊಲೆ ವರದಿ ಮಾಡಿದ್ದಾರೆ. ಡಿಸೆಂಬರ್ 17 ರಂದು ತಡರಾತ್ರಿ ಬಾಲಾಪುರದ ರೋಹಿಂಗ್ಯಾ ಶಿಬಿರದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಗೆ 19 ಬಾರಿ ಇರಿದಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪೊಲೀಸರು ಶಂಕಿತನನ್ನು ವಶಕ್ಕೆ ಪಡೆದಿದ್ದಾರೆ.
ಗುರುವಾರ ಪೊಲೀಸರು ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆಯ ಸಮಯದಲ್ಲಿ, ಇಬ್ಬರೂ ಮದ್ಯದ ಅಮಲಿನಲ್ಲಿದ್ದರು. ಈ ವೇಳೆ ಯಾವುದೋ ವಿಷಯಕ್ಕೆ ಪರಸ್ಪರ ಜಗಳವಾಡಿದ್ದರು. ಒಬ್ಬಾತ ಮತ್ತೊಬ್ಬನಿಗೆ ಚಾಕುವಿನಿಂದ ಹಲವಾರು ಬಾರಿ ಇರಿದಿದ್ದಾನೆ. ಇದರಿಂದಾಗಿ ಅವನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯ ಆಧಾರದ ಮೇಲೆ, ಮೃತನ ದೇಹದ ವಿವಿಧ ಭಾಗಗಳಲ್ಲಿ 19 ಇರಿತದ ಗಾಯಗಳಾಗಿದ್ದವು ಎಂದು ಪೊಲೀಸರು ವರದಿ ಮಾಡಿದ್ದಾರೆ. ಪ್ರಕರಣದಲ್ಲಿ ಶಂಕಿತನನ್ನು ಬಂಧಿಸಲಾಗಿದ್ದು, ಅವನು ಅಪ್ರಾಪ್ತ ವಯಸ್ಕನೇ ಎಂಬ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ.