ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಾನ್ಯತೆಯೇ ಇಲ್ಲದ 6 ಪಕ್ಷಗಳಿಗೆ 1700 ಕೋಟಿ ರುಪಾಯಿ ದೇಣಿಗೆ !

ಬಿಜೆಪಿ ಇಡೀ ದೇಶದಲ್ಲಿ ಗರಿಷ್ಠ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷ, ಕೇಂದ್ರದಲ್ಲೂ ಅಧಿಕಾರ ದಲ್ಲಿರುವುದರಿಂದ ಅದಕ್ಕೆ ದೇಣಿಗೆ ಹರಿದುಬರುವುದು ಸಹಜ. 2023-24ರಲ್ಲಿ ಅದಕ್ಕೆ 2243.95 ಕೋಟಿ ರು. ಆದರೆ ಅಪರಿಚಿತ ಪಕ್ಷಗ ದೇಣಿಗೆಯ ಕುರಿತು ಅನುಮಾನ ವುಂಟಾಗಿದೆ ಎಂದು ತನಿಖಾ ವರದಿ ಯೊಂದು ತಿಳಿಸಿದೆ. ಅದರಲ್ಲೂ, ಈ 6 ಪಕ್ಷಗಳು ಇಡೀ 2024ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದು ಕೇವಲ 15 ಅಭ್ಯರ್ಥಿ ಮಾತ್ರ.

2023-24ರಲ್ಲಿ ಗುಜರಾತ್‌ನ 6 ಪಕ್ಷಗಳಿಗೆ ಹಣದ ಹೊನಲು, ಕಾಂಗ್ರೆಸ್ ಸೇರಿ 5 ರಾಷ್ಟ್ರೀಯ ಪಕ್ಷಗಳಿಗೆ ಸಿಕ್ಕಿದ್ದು ಬರೀ 1400 ಕೋಟಿ ರು.

ದೆಹಲಿ: ಚುನಾವಣಾ ಕಣದಲ್ಲಿ ಹೆಸರಿಲ್ಲ, ಬಹುತೇಕ ಅಭ್ಯರ್ಥಿಗಳೇ ಕಣದಲ್ಲಿಲ್ಲ, ಪ್ರಚಾರದ ಸದ್ದುಗದ್ದಲವಿಲ್ಲ, ಕಚೇರಿಗಳಿಗೆ ಬೀಗ ಜಡಿದಿದೆ. ಆದರೂ ಆ ಪಕ್ಷಗಳ ಖಾತೆಗೆ ಹರಿದುಬಂದ ಹಣ ಬರೋಬ್ಬರಿ ಸಾವಿರಾರು ಕೋಟಿ ರುಪಾಯಿ. ಬಿಜೆಪಿಯನ್ನು ಹೊರತುಪಡಿಸಿದರೆ, 2023-24ರಲ್ಲಿ ಕಾಂಗ್ರೆಸ್, ಆಪ್, ಬಿಎಸ್‌ಪಿ, ಸಿಪಿಎಂ, ಎನ್‌ಪಿಪಿಗಳ ವಾರ್ಷಿಕ ದೇಣಿಗೆ 1480.43 ಕೋಟಿ ರು. ಇದೇ ಅವಧಿಯಲ್ಲಿ ಗುಜರಾತ್ ಮೂಲದ 6 ಪಕ್ಷಗಳಿಗೆ ಬಂದಿರುವುದು 1700.78 ಕೋಟಿ ರು. ಅಂದರೆ ರಾಷ್ಟ್ರೀಯ ಪಕ್ಷಗಳಿಗೆ ಸಿಕ್ಕಿರುವುದಕ್ಕಿಂತ 200 ಕೋಟಿ ರು. ಅಧಿಕ ಹಣ. ಈ ಮಾಹಿತಿಯನ್ನು ಎಡಿಆರ್ (ಅಸೋಸಿ ಯೇಶನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್) ಬಹಿರಂಗ ಪಡಿಸಿದ್ದು, ಆತಂಕ ಮೂಡಿಸಿದೆ.

ಬಿಜೆಪಿ ಇಡೀ ದೇಶದಲ್ಲಿ ಗರಿಷ್ಠ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷ, ಕೇಂದ್ರದಲ್ಲೂ ಅಧಿ ಕಾರದಲ್ಲಿರುವುದರಿಂದ ಅದಕ್ಕೆ ದೇಣಿಗೆ ಹರಿದುಬರುವುದು ಸಹಜ. 2023-24ರಲ್ಲಿ ಅದಕ್ಕೆ 2243.95 ಕೋಟಿ ರು. ಆದರೆ ಅಪರಿಚಿತ ಪಕ್ಷಗ ದೇಣಿಗೆಯ ಕುರಿತು ಅನುಮಾನ ವುಂಟಾಗಿದೆ ಎಂದು ತನಿಖಾ ವರದಿಯೊಂದು ತಿಳಿಸಿದೆ. ಅದರಲ್ಲೂ, ಈ 6 ಪಕ್ಷಗಳು ಇಡೀ 2024ರ ಲೋಕಸಭಾ ಚುನಾವಣೆ ಯಲ್ಲಿ ಕಣಕ್ಕಿಳಿಸಿದ್ದು ಕೇವಲ 15 ಅಭ್ಯರ್ಥಿ ಮಾತ್ರ.

ಇದನ್ನೂ ಓದಿ: RTI Act: ಕಳೆದ 155 ದಿನಗಳಲ್ಲಿ 24 ಸಾವಿರ ಅರ್ಜಿಗಳ ವಿಲೇವಾರಿ : ಆರ್‌ಟಿಐ ಅರ್ಜಿ ಇತ್ಯರ್ಥ: ರಾಜ್ಯಕ್ಕೆ ಮೊದಲ ಸ್ಥಾನ

6 ನಿಗೂಢ ಪಕ್ಷಗಳು ಯಾವುವು?: ಗುಜರಾತ್ ಮೂಲದ ಹೆಸರೇ ಕೇಳಿರದ ಪಕ್ಷ ಆಮ್ ಜನಮತ್ ಪಾರ್ಟಿ. ಇದೊಂದಕ್ಕೇ ಸಿಕ್ಕಿದ್ದು 620 ಕೋಟಿ ರುಪಾಯಿ. ಆದರೆ ಈ ಪಕ್ಷವು 2024ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದು ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ. ಜೊತೆಗೆ, ಸತ್ಯವಾದಿ ರಕ್ಷಕ್ ಪಾರ್ಟಿ 330.55 ಕೋಟಿ ರುಪಾಯಿ ಪಡೆದು ಎರಡನೇ ಸ್ಥಾನದಲ್ಲಿದೆ. ಸ್ವತಂತ್ರತಾ ಅಭಿವ್ಯಕ್ತಿ ಪಾರ್ಟಿ 219.69 ಕೋಟಿರ ರು., ನ್ಯೂ ಇಂಡಿಯಾ ಯುನೈಟೆಡ್ ಪಾರ್ಟಿ 200.69 ಕೋಟಿ, ಭಾರತೀಯ ನ್ಯಾಷನಲ್ ಜನತಾದಳ 191.61 ಕೋಟಿ ರು. ಮತ್ತು ಗರೀಬ್ ಕಲ್ಯಾಣ್ ಪಾರ್ಟಿ 138 ಕೋಟಿ ರು.. ದೇಣಿಗೆ ಸಂಗ್ರಹಿಸಿವೆ. ಈ ಪಕ್ಷಗಳ ಅಧಿಕೃತ ಕಚೇರಿಯೇ ಇಲ್ಲ ಎನ್ನಲಾಗಿದೆ.

2800 ಮಾನ್ಯತೆಯಿಲ್ಲದ ಪಕ್ಷ: ಆರ್ಥಿಕ ಮಾಹಿತಿಗಳೇ ಇಲ್ಲ ಚುನಾವಣೆ ಆಯೋಗದಲ್ಲಿ ಗುರ್ತಿಸಿ ಕೊಂಡಿದ್ದರೂ ಪಕ್ಷಗಳೆಂಬ ಮಾನ್ಯತೆ ಹೊಂದಿಲ್ಲದ 2800 ರಾಜಕೀಯ ಪಕ್ಷಗಳು ದೇಶದಲ್ಲಿವೆ. ಈ ಪೈಕಿ ಶೇ.73ರಷ್ಟು ಪಕ್ಷಗಳು ತಮ್ಮ ಹಣಕಾಸಿನ ಲೆಕ್ಕಪತ್ರಗಳನ್ನೇ ಪ್ರಕಟಿಸಿಲ್ಲ ಎಂದು ಎಡಿಆರ್ ಹೇಳಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಅಕ್ರಮ ಹಣ ಸಾಗಣೆ ಶಂಕೆ!

ಭಾರತದ ಆದಾಯ ತೆರಿಗೆ ಕಾನೂನಿನ ಪ್ರಕಾರ ರಾಜಕೀಯ ಪಕ್ಷಗಳ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ. ಹಾಗೆಯೇ, ವ್ಯಕ್ತಿಗಳು ಪಕ್ಷಗಳಿಗೆ ದೇಣಿಗೆ ನೀಡಿದರೆ ತೆರಿಗೆ ವಿನಾಯಿತಿ ಪಡೆಯಬಹುದು. ಹಾಗಾಗಿ, ತೆರಿಗೆದಾರರು ಈ ಪಕ್ಷಗಳಿಗೆ ದೇಣಿಗೆ ನೀಡಿದಂತೆ ರಶೀದಿ ಪಡೆದು ತೆರಿಗೆ ವಿನಾಯಿತಿ ಪಡೆಯುತ್ತಾರೆ. ಈ ಮಾರ್ಗ ವನ್ನು ಬಳಸಿಕೊಂಡು ಕಪ್ಪುಹಣವನ್ನು ಬಿಳಿ ಹಣವಾಗಿ ಪರಿವರ್ತಿ ಸುವ ಶಂಕೆ ಇದೆ.