ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಂಚ ರಾಜ್ಯಗಳ ಆಡಳಿತ ಯಾರ ಕೈಗೆ? ನಾಳೆ ಭವಿಷ್ಯ ನಿರ್ಧಾರ

ಪಂಚ ರಾಜ್ಯಗಳ ಆಡಳಿತ ಅಧಿಕಾರ ಯಾರ ಕೈಗೆ ಎಂಬುದು ಸೋಮವಾರ ನಿರ್ಧಾರವಾಗಲಿದೆ. ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿಯ ವಿಧಾನ ಸಭಾ ಚುನಾವಣಾ ಫಲಿತಾಂಶ ನಾಳೆ ಘೋಷಣೆಯಾಗಲಿದೆ. ಮತ ಎಣಿಕೆ ಯಾವಾಗ ಆರಂಭವಾಗುತ್ತದೆ, ಫಲಿತಾಂಶ ಎಲ್ಲಿ ವೀಕ್ಷಣೆ ಮಾಡಬೇಕು ಎಂಬುದರ ಕುರಿತು ಸಂಪೂರ್ಣ ವಿವರ.

ಸಂಗ್ರಹ ಚಿತ್ರ

ಬೆಂಗಳೂರು: ಕೇರಳ (Kerala), ಪಶ್ಚಿಮ ಬಂಗಾಳ (west bengal), ಅಸ್ಸಾಂ (assam), ತಮಿಳುನಾಡು (tamil nadu), ಪುದುಚೇರಿಯ (puducherry) ವಿಧಾನ ಸಭಾ ಚುನಾವಣೆ (Assembly election) 2026ರ ಫಲಿತಾಂಶ (election results 2026) ಸೋಮವಾರ ಘೋಷಣೆಯಾಗಲಿದೆ. ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಂದರೆ ಸಂಜೆಯೊಳಗೆ ಫಲಿತಾಂಶ ಸ್ಪಷ್ಟವಾಗುವ ಸಾಧ್ಯತೆ ಇದೆ. ಚುನಾವಣಾ ಆಯೋಗ (Election Commission of India) ಮೇಲ್ವಿಚಾರಣೆಯಲ್ಲಿ ಮತ ಎಣಿಕೆ ಕಾರ್ಯಗಳನ್ನು ನಡೆಸಲಾಗುತ್ತದೆ. ಮೊದಲು ಅಂಚೆ ಮತ ಪತ್ರಗಳು ಬಳಿಕ ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಸಂಗ್ರಹವಾಗಿರುವ ಮತಗಳ ಎಣಿಕೆ ಕಾರ್ಯವನ್ನು ನಡೆಸಲಾಗುತ್ತದೆ.

ಹೇಗೆ ನಡೆಯುತ್ತದೆ ಮತ ಎಣಿಕೆ?

ನಿಗದಿತ ಮತ ಎಣಿಕೆ ಕೇಂದ್ರಗಳಲ್ಲಿ ಮೊದಲಿಗೆ ಸೇವಾ ಮತದಾರರು, ಚುನಾವಣಾ ಸಿಬ್ಬಂದಿ ಮತ್ತು ಅಂಗವಿಕಲರು ಚಲಾಯಿಸಿರುವ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ ದಾಖಲಿಸಲಾಗುತ್ತದೆ. ಇದಾದ ಸುಮಾರು 30 ನಿಮಿಷಗಳ ಬಳಿಕ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳಲ್ಲಿ ಫಲಿತಾಂಶ ಗುಂಡಿಯನ್ನು ಒತ್ತಿ ಪ್ರತಿ ಅಭ್ಯರ್ಥಿ ಸ್ವೀಕರಿಸಿದ ಒಟ್ಟು ಮತಗಳನ್ನು ತೋರಿಸಿ ಅಧಿಕೃತವಾಗಿ ದಾಖಲಿಸಲಾಗುತ್ತದೆ.

ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶ ನಾಳೆ ಘೋಷಣೆ: ಫಾಲ್ಟಾ ಕ್ಷೇತ್ರಕ್ಕಿಲ್ಲ ನಾಯಕನ ಆಯ್ಕೆ

ಫಲಿತಾಂಶ ಪರಿಶೀಲನೆ ಮಾಡುವುದೆಲ್ಲಿ?

ಪಂಚ ರಾಜ್ಯಗಳ ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ eci.gov.in ಅಲ್ಲಿ ನೋಡಬಹುದು. ವಿವರವಾದ ವರದಿ ಮತ್ತು ವಿಶ್ಲೇಷಣೆಗಾಗಿ ಲೈವ್‌ಮಿಂಟ್‌ ವೇದಿಕೆಗಳಲ್ಲಿ ಪರಿಶೀಲನೆ ನಡೆಸಬಹುದಾಗಿದೆ.

ಕೊನೆಯ ಕ್ಷಣದ ಸಮೀಕ್ಷೆ ಏನು ಹೇಳಿದೆ?

ಚುನಾವಣಾ ಫಲಿತಾಂಶ ಘೋಷಣೆಗೂ ಮುನ್ನ ಬಿಡುಗಡೆಯಾಗಿರುವ ಹೊಸ ಸಮೀಕ್ಷೆಯ ಪ್ರಕಾರ ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ, ತಮಿಳುನಾಡಿನಲ್ಲಿ ದ್ರಾವಿಡ ಮುನ್ನೇತ್ರ ಕಳಗಂ ಅಧಿಕಾರಕ್ಕೇರುವ ಮುನ್ಸೂಚನೆ ನೀಡಿದೆ.

ಟುಡೇಸ್ ಚಾಣಕ್ಯ ಸಮೀಕ್ಷೆಯ ಪ್ರಕಾರ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಸುಮಾರು 69 ಸ್ಥಾನಗಳು ಮತ್ತು ಆಡಳಿತಾರೂಢ ಎಲ್‌ಡಿಎಫ್‌ಗೆ 64 ಸ್ಥಾನಗಳು ಸಿಗುವ ನಿರೀಕ್ಷೆ ಇದ್ದು, ಇದು ಪ್ರಬಲ ಪೈಪೋಟಿಯನ್ನು ತೋರಿಸಿದೆ.

ಪಶ್ಚಿಮ ಬಂಗಾಳ

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎಣಿಕೆ ಕೇಂದ್ರಗಳ ಸಂಖ್ಯೆಯನ್ನು ಚುನಾವಣಾ ಆಯೋಗವು 87 ರಿಂದ 77ಕ್ಕೆ ಇಳಿಸುವ ಸಾಧ್ಯತೆಯಿದೆ. ಇದಕ್ಕೆ ಯಾವುದೇ ಕಾರಣವನ್ನು ನೀಡಲಾಗಿಲ್ಲ. ಆದರೆ ಈ ಕ್ರಮಕ್ಕೆ ತೃಣಮೂಲ ಕಾಂಗ್ರೆಸ್ ಆಕ್ಷೇಪ ಮಾಡಿದೆ.

ಈ ಬಗ್ಗೆ ಮೊದಲೇ ಸೂಚನೆ ನೀಡಿದ್ದ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ಮನೋಜ್ ಕುಮಾರ್ ಅಗರ್ವಾಲ್, ರಾಜ್ಯದ 294 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕೇಂದ್ರಗಳ ಸಂಖ್ಯೆಯನ್ನು 108 ರಿಂದ 87ಕ್ಕೆ ಇಳಿಸಲಾಗುವುದು. ಅಗತ್ಯವಿದ್ದರೆ ಇದನ್ನು ಮತ್ತಷ್ಟು ಕಡಿಮೆ ಮಾಡುವುದಾಗಿ ತಿಳಿಸಿದ್ದರು.

ತಮಿಳುನಾಡು

ಮತ ಎಣಿಕೆಯ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಹೆಚ್ಚು ಜಾಗರೂಕರಾಗಿರಬೇಕು ಎಂದು ಪಿಎಂಕೆ ನಾಯಕಿ ಡಾ. ಅನ್ಬುಮಣಿ ರಾಮದಾಸ್ ತಿಳಿಸಿದ್ದಾರೆ. ಟುಡೇಸ್ ಚಾಣಕ್ಯ ಸಮೀಕ್ಷೆಯು ತಮಿಳುನಾಡಿನಲ್ಲಿ ಡಿಎಂಕೆ ಮತ್ತೆ ಅಧಿಕಾರಕ್ಕೆ ಬರುವುದಾಗಿ ಹೇಳಿದ್ದರೂ ಕೂಡ ನಟ-ರಾಜಕಾರಣಿ ವಿಜಯ್ ಅವರ ಟಿವಿಕೆ ಅದ್ಭುತ ಪ್ರದರ್ಶನ ತೋರಲಿದೆ ಎಂದು ಹೇಳಿದೆ.

ಕೇರಳ

ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಕೇರಳದಲ್ಲಿ ಗೆಲುವು ಸಾಧಿಸಲಿದೆ ಎಂದು ಶಶಿ ತರೂರ್ ಗುರುವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈತ್ರಿಕೂಟವು 140 ವಿಧಾನಸಭಾ ಸ್ಥಾನಗಳಲ್ಲಿ 75 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ. ಕಳೆದ ಒಂದು ದಶಕದಿಂದ ರಾಜ್ಯದಲ್ಲಿ ಅಧಿಕಾರದಿಂದ ಹೊರಗುಳಿದಿರುವ ಯುಡಿಎಫ್‌ಗೆ ಗೆಲುವು ಸಾಧಿಸುವ ನಿರೀಕ್ಷೆಯಿರುವ ನಿರ್ಗಮನ ಸಮೀಕ್ಷೆಗಳಿಂದ ತನಗೆ ಆಶ್ಚರ್ಯವಾಗಿಲ್ಲ ಎಂದು ಅವರು ತಿಳಿಸಿದರು.

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆ: ದೇಶದಲ್ಲೂ ಶೀಘ್ರದಲ್ಲೇ ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ದರ ಹೆಚ್ಚಳ ಸಾಧ್ಯತೆ

ಅಸ್ಸಾಂ, ಪುದುಚೇರಿ

ಅಸ್ಸಾಂ, ಪುದುಚೇರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಾಗಿ ಸಮೀಕ್ಷೆ ಹೇಳಿದೆ. ಏಪ್ರಿಲ್ 9 ರಂದು ಅಸ್ಸಾಂ, ಕೇರಳ ಮತ್ತು ಪುದುಚೇರಿ ಹಾಗೂ ಏಪ್ರಿಲ್ 23ರಂದು ತಮಿಳುನಾಡಿನಲ್ಲಿ ಚುನಾವಣೆ ನಡೆದಿತ್ತು. ಅಸ್ಸಾಂ ಮತ್ತು ಪುದುಚೇರಿಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದರೆ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಪಡೆಯುವ ಪ್ರಯತ್ನದಲ್ಲಿದೆ.

ವಿದ್ಯಾ ಇರ್ವತ್ತೂರು

View all posts by this author