ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sadhvi Pragya Singh: 'ಅವಮಾನ ಸಹಿಸಿಕೊಂಡೆ'; ಮಾಲೆಗಾಂವ್‌ ತೀರ್ಪಿನ ಸಂದರ್ಭದಲ್ಲಿ ಭಾವುಕರಾದ ಪ್ರಜ್ಞಾ ಸಿಂಗ್‌

ಮಹಾರಾಷ್ಟ್ರದ ಮಾಲೆಗಾಂವ್‌ ಸ್ಫೋಟ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದ್ದು, ಎಲ್ಲಾ ಏಳು ಆರೋಪಿಗಳು ಖುಲಾಸೆಗೊಂಡಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಗುರುವಾರ ಪ್ರಕರಣದ ತೀರ್ಪು ಪ್ರಕಟಿಸಿದೆ. ಪ್ರಗ್ನಾ ಠಾಕೂರ್‌, ಕರ್ನಲ್‌ ಲೆಫ್ಟಿಂನೆಂಟ್‌ ಪ್ರಸಾದ್‌ ಪುರೋಹಿತ್‌ ಸೇರಿದಂತೆ ಒಟ್ಟು ಏಳು ಜನರನ್ನು ನಿರ್ದೋಷಿಗಳೆಂದು ಕೋರ್ಟ್‌ ಹೇಳಿದೆ.

ನ್ಯಾಯಾಲಯದಲ್ಲಿ ಭಾವುಕರಾದ ಪ್ರಜ್ಞಾ ಸಿಂಗ್‌ ; ಹೇಳಿದ್ದೇನು?

Vishakha Bhat Vishakha Bhat Jul 31, 2025 1:25 PM

ಮುಂಬೈ: ಮಹಾರಾಷ್ಟ್ರದ ಮಾಲೆಗಾಂವ್‌ ಸ್ಫೋಟ ಪ್ರಕರಣದ ತೀರ್ಪು ಇಂದು ಹೊರ ಬಿದ್ದಿದ್ದು, ಎಲ್ಲಾ ಏಳು ಆರೋಪಿಗಳು ಖುಲಾಸೆಗೊಂಡಿದ್ದಾರೆ. ರಾಷ್ಟ್ರೀಯ (Sadhvi Pragya Singh) ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಗುರುವಾರ ಪ್ರಕರಣದ ತೀರ್ಪು ಪ್ರಕಟಿಸಿದೆ. ಪ್ರಜ್ಞಾ ಸಿಂಗ್‌ ಠಾಕೂರ್‌, ಕರ್ನಲ್‌ ಲೆಫ್ಟಿಂನೆಂಟ್‌ ಪ್ರಸಾದ್‌ ಪುರೋಹಿತ್‌ ಸೇರಿದಂತೆ ಒಟ್ಟು ಏಳು ಜನರನ್ನು ನಿರ್ದೋಷಿಗಳೆಂದು ಕೋರ್ಟ್‌ ಹೇಳಿದೆ. ತೀರ್ಪು ಹೊರ ಬಿದ್ದ ಬಳಿಕ ಪ್ರಕರಣದ ಪ್ರಮುಖ ಆರೋಪಿ ಎಂದೆನಿಸಿಕೊಂಡಿದ್ದ ಪ್ರಗ್ನಾ ಠಾಕೂರ್‌ ಕೋರ್ಟ್‌ನಲ್ಲಿ ಭಾವುಕರಾದರು. ಈ ಕುರಿತು ಅವರು ಮಾತನಾಡಿದ್ದಾರೆ.

ನಾನು ವರ್ಷಗಳ ಅವಮಾನವನ್ನು ಸಹಿಸಿಕೊಂಡಿದ್ದೇನೆ. ಎಷ್ಟೋ ಕಷ್ಟಗಳನ್ನು ಅನುಭವಿಸಿದೆ. ನಿರಪರಾಧಿಯಾಗಿದ್ದರೂ, ನನ್ನ ಮೇಲೆ ಅಪರಾಧಿ ಪ್ರಜ್ಞೆಯ ಕಳಂಕವನ್ನು ಹೇರಲಾಯಿತು ಎಂದು ಅವರು ಕಣ್ಣೀರು ಹಾಕಿದ್ದಾರೆ. ಇಂದು ಸತ್ಯ ಎಲ್ಲರೆದುರು ಅನಾವರಣವಾಗಿದೆ. ಇದು ಕೇಸರಿ ಧ್ವಜಕ್ಕೆ ಸಿಕ್ಕ ಜಯ, ಹಿಂದುತ್ವಕ್ಕೆ ಸಿಕ್ಕ ಜಯ ಎಂದು ಅವರು ಹೇಳಿದ್ದಾರೆ.

ಎನ್ಐಎ ನ್ಯಾಯಾಲಯದಲ್ಲಿ ನ್ಯಾಯಾಧೀಶರನ್ನುದ್ದೇಶಿಸಿ ಮಾತನಾಡಿದ ಪ್ರಜ್ಞಾ ಸಿಂಗ್‌ ಠಾಕೂರ್‌, ತನಿಖೆಗೆ ಕರೆಸಿಕೊಳ್ಳುವವರಿಗೆ ಅದರ ಹಿಂದೆ ಒಂದು ಆಧಾರವಿರಬೇಕು ಎಂದು ನಾನು ಮೊದಲಿನಿಂದಲೂ ಹೇಳುತ್ತಿದ್ದೆ. ಅವರು ನನ್ನನ್ನು ತನಿಖೆಗೆ ಕರೆದರು ಮತ್ತು ಬಂಧಿಸಿ ಚಿತ್ರಹಿಂಸೆ ನೀಡಿದರು. ಇದು ನನ್ನ ಇಡೀ ಜೀವನವನ್ನು ಹಾಳುಮಾಡಿತು. ನಾನು ಒಬ್ಬ ಋಷಿಯ ಜೀವನವನ್ನು ನಡೆಸುತ್ತಿದ್ದೆ, ಆದರೆ ನನ್ನ ಮೇಲೆ ಆರೋಪ ಹೊರಿಸಲಾಯಿತು, ಮತ್ತು ಯಾರೂ ನಮ್ಮ ಪಕ್ಕದಲ್ಲಿ ಸ್ವಇಚ್ಛೆಯಿಂದ ನಿಲ್ಲುತ್ತಿರಲಿಲ್ಲ. ನಾನು ಸನ್ಯಾಸಿಯಾಗಿರುವುದರಿಂದ ನಾನು ಜೀವಂತವಾಗಿದ್ದೇನೆ ಎಂದು ಹೇಳಿದ್ದಾರೆ. ಇಂದು, ಭಗವಂತ ಗೆದ್ದಿದ್ದಾರೆ, ಮತ್ತು ಹಿಂದುತ್ವ ಗೆದ್ದಿದೆ, ಮತ್ತು ದೇವರು ತಪ್ಪಿತಸ್ಥರನ್ನು ಶಿಕ್ಷಿಸುತ್ತಾನೆ ಎಂದು ಹೇಳಿದರು.

ಈ ಸುದ್ದಿಯನ್ನೂ ಓದಿ: Anti-national graffiti: ಭಾರತವನ್ನು ಸ್ಫೋಟಿಸುತ್ತೇನೆ; ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ದೇಶ ವಿರೋಧಿ ಗೋಡೆ ಬರಹ!

ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ ಇದ್ದ ನ್ಯಾಯಪೀಠ, ಕೇವಲ ಅನುಮಾನದ ಮೇರೆಗೆ ಪ್ರಕರಣವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಹೇಳಿದರು ಮತ್ತು ಆರೋಪಿಗಳ ವಿರುದ್ಧದ ಆರೋಪ ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ. ಸಮಾಜದ ವಿರುದ್ಧ ಗಂಭೀರ ಘಟನೆ ನಡೆದಿದೆ. ಆದರೆ ನ್ಯಾಯಾಲಯವು ಕೇವಲ ನೈತಿಕ ಆಧಾರದ ಮೇಲೆ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಮಾಜಿ ಸಂಸದೆ ಸಾಧ್ವಿ ಪ್ರಜ್ಞಾ, ಮೇಜರ್ (ನಿವೃತ್ತ) ರಮೇಶ್ ಉಪಾಧ್ಯಾಯ, ಸುಧಾಕರ್ ಚತುರ್ವೇದಿ, ಅಜಯ್ ರಾಹಿರ್ಕರ್ , ಸುಧಾಂಕರ್ ಧರ್ ದ್ವಿವೇದಿ (ಶಂಕರಾಚಾರ್ಯ) ಮತ್ತು ಸಮೀರ್ ಕುಲಕರ್ಣಿ ಸೇರಿದಂತೆ ಒಟ್ಟು 7 ಮಂದಿ ಆರೋಪಿಗಳಾಗಿದ್ದರು. ಇದೀಗ ಆರೋಪಿಗಳನ್ನು ನಿರಪರಾಧಿಗಳು ಎಂದು ತೀರ್ಪು ನೀಡಲಾಗಿದೆ.