ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rahul Gandhi: "3 ವರ್ಷದಿಂದ ರಾಹುಲ್‌ ಭೇಟಿಯಾಗಿ ಅಲೆಯುತ್ತಿದ್ದೇನೆ"; ಕಾಂಗ್ರೆಸ್‌ ಅವನತಿ ಕುರಿತು ಸೋನಿಯಾಗೆ ಪತ್ರ ಬರೆದ ಮಾಜಿ MLA

ಒಡಿಶಾ ಕಾಂಗ್ರೆಸ್ ನಾಯಕರೊಬ್ಬರು ರಾಹುಲ್‌ ಗಾಂಧಿ ಅವರ ಮೇಲೆ ಗಂಭೀರ ಆರೋಪ ಮಾಡಿದ್ದು, ಸೋನಿಯಾ ಗಾಂಧಿಯವರಿಗೆ ಪತ್ರ ಬರೆಯುವ ಮೂಲಕ ದೂರನ್ನು ನೀಡಿದ್ದಾರೆ. ಪತ್ರದಲ್ಲಿ, ಪಕ್ಷದ ಸಂಘಟನಾತ್ಮಕ ಕುಸಿತ ಮತ್ತು ನಾಯಕತ್ವದ ವೈಫಲ್ಯಗಳ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಸಾಂಧರ್ಬಿಕ ಚಿತ್ರ

ನವದೆಹಲಿ: ಒಡಿಶಾ ಕಾಂಗ್ರೆಸ್ ನಾಯಕರೊಬ್ಬರು ರಾಹುಲ್‌ ಗಾಂಧಿ (Rahul Gandhi) ಅವರ ಮೇಲೆ ಗಂಭೀರ ಆರೋಪ ಮಾಡಿದ್ದು, ಸೋನಿಯಾ ಗಾಂಧಿಯವರಿಗೆ (Sonia Gandhi) ಪತ್ರ ಬರೆಯುವ ಮೂಲಕ (Odisha MLA) ದೂರನ್ನು ನೀಡಿದ್ದಾರೆ. ಪತ್ರದಲ್ಲಿ, ಪಕ್ಷದ ಸಂಘಟನಾತ್ಮಕ ಕುಸಿತ ಮತ್ತು ನಾಯಕತ್ವದ ವೈಫಲ್ಯಗಳ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ, ರಾಹುಲ್ ಗಾಂಧಿಯವರ ಲೋಪ ದೋಷಗಳನ್ನು ಎತ್ತಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಪಕ್ಷ ಸಂಘಟನೆಯ ಮಾಡುವ ಕುರಿತು ಹೊಸ ನಾಯಕತ್ವದ ಕುರಿತು ಉಲ್ಲೇಖಿಸಿದ್ದಾರೆ.

ಶಾಸಕನಾಗಿದ್ದರೂ, ಸುಮಾರು ಮೂರು ವರ್ಷಗಳ ಕಾಲ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಎಂದು ಭಾರವಾದ ಹೃದಯದಿಂದ ಹೇಳಿಕೊಳ್ಳುತ್ತೇನೆ. ಇದು ವೈಯಕ್ತಿಕ ಅಸಮಾಧಾನವಲ್ಲ, ಬದಲಾಗಿ ಭಾರತದಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಅನುಭವಿಸುತ್ತಿರುವ ಪರಿಸ್ಥಿತಿ ಎಂದು ಹೇಳಿದ್ದಾರೆ. ಬರಾಬತಿ-ಕಟಕ್‌ನ ಮಾಜಿ ಶಾಸಕ ಮೊಹಮ್ಮದ್ ಮೋಕಿಮ್ ಈ ಆರೋಪವನ್ನು ಮಾಡಿದ್ದಾರೆ. ಬಿಹಾರ, ದೆಹಲಿ, ಹರಿಯಾಣ, ಮಹಾರಾಷ್ಟ್ರ ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಪಕ್ಷದ ಕಳಪೆ ಪ್ರದರ್ಶನಕ್ಕೆ ಆಂತರಿಕ ಸಮಸ್ಯೆಗಳು ಕಾರಣ ಎಂದು ತಿಳಿಸಿದ್ದಾರೆ.

ವೈರಲ್‌ ವಿಡಿಯೋ



ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ ಕಾರ್ಯಕರ್ತರನ್ನು ಸರಿಯಾಗಿ ನೋಡಿಕೊಳ್ಳಲಾಗುತ್ತಿತ್ತು. ಆದರೆ ಇದೀಗ ಯುವ ಸಮೂಹ ಕಾಂಗ್ರೆಸ್‌ನಿಂದ ಹಿಂದೆ ಸರಿಯುತ್ತಿದೆ. ಕಾಂಗ್ರೆಸ್ ನಾಯಕತ್ವ ಮತ್ತು ಅದರ ತಳಮಟ್ಟದ ಕಾರ್ಯಕರ್ತರು ಹಾಗೂ ಭಾರತದ ಯುವಕರ ನಡುವೆ ಹೆಚ್ಚುತ್ತಿರುವ ಸಂಪರ್ಕ ಕಡಿತವನ್ನು ಮೋಕ್ವಿಮ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

priyank Khrage: ರಾಹುಲ್‌ ಗಾಂಧಿ ಭೇಟಿಯಾಗಿ ಬಂದ ಪ್ರಿಯಾಂಕ್‌ ಖರ್ಗೆ, ʼ50:50' ಒಪ್ಪಂದ ಆಗಿಲ್ಲ ಎಂದ ಕೆಜೆ ಜಾರ್ಜ್

ಬಿಹಾರ, ದೆಹಲಿ, ಹರಿಯಾಣ, ಮಹಾರಾಷ್ಟ್ರ ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಪಕ್ಷದ ಕಳಪೆ ಪ್ರದರ್ಶನಕ್ಕೆ ಆಂತರಿಕ ಸಮಸ್ಯೆಗಳು ಕಾರಣ ಎಂದು ಅವರು ಹೇಳಿದ್ದಾರೆ. ಪಕ್ಷದ ತಳಮಟ್ಟದ ಸದಸ್ಯರು ಅನುಭವಿಸುತ್ತಿರುವ ಪರಕೀಯತೆಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು, "ಇಂದು, ಬೂತ್ ಕಾರ್ಯಕರ್ತರು, ಬ್ಲಾಕ್ ಅಧ್ಯಕ್ಷರು, ಜಿಲ್ಲಾ ಮಟ್ಟದ ನಾಯಕರು - ಅವರು ನಿಜವಾಗಿಯೂ ಪಕ್ಷದ ಬೆನ್ನೆಲುಬಾಗಿದ್ದಾರೆ. ಆದರೆ ಅವರನ್ನು ನಿರ್ಲಕ್ಷಿಸಲಾಗುತ್ತಿದೆ. ತಪ್ಪು ನಿರ್ಧಾರಗಳ ಸರಣಿ, ದಾರಿ ತಪ್ಪಿದ ನಾಯಕತ್ವದ ಆಯ್ಕೆಗಳು ಮತ್ತು ತಪ್ಪು ಕೈಯಲ್ಲಿ ಜವಾಬ್ದಾರಿಯ ನಿರಂತರ ಕೇಂದ್ರೀಕರಣವು ಪಕ್ಷವನ್ನು ಒಳಗಿನಿಂದ ದುರ್ಬಲಗೊಳಿಸಿದೆ. ಈ ದೋಷಗಳನ್ನು ಸರಿಪಡಿಸುವ ಬದಲು, ನಾವು ಅವುಗಳನ್ನು ಪುನರಾವರ್ತಿಸುತ್ತಿರುವಂತೆ ತೋರುತ್ತಿದೆ ಮತ್ತು ಅದರ ಪರಿಣಾಮಗಳು ಈಗ ಇಡೀ ರಾಷ್ಟ್ರಕ್ಕೆ ಗೋಚರಿಸುತ್ತಿವೆ ಎಂದು ಅವರು ಹೇಳಿದ್ದಾರೆ.