ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬಹುನಿರೀಕ್ಷಿತ ಎಕ್ಸಿಟ್‌ ಪೋಲ್‌ ರಿಸಲ್ಟ್‌ ಔಟ್‌; ಯಾರಿಗೆ ಯಾವ ರಾಜ್ಯ? ಮುಂದುವರಿಯಲಿದೆ ಎನ್‌ಡಿಎ ಮ್ಯಾಜಿಕ್: ಪಶ್ಚಿಮ ಬಂಗಾಳದಲ್ಲಿ ದೀದಿ ಸರ್ಕಾರ ಅಂತ್ಯ

Exit poll Results 2026: ರಾಷ್ಟ್ರ ರಾಜಕೀಯದಲ್ಲಿ ಹೊಸ ಭಾಷ್ಯ ಬರೆಯುವ ಸಾಮರ್ಥ್ಯ ಹೊಂದಿರುವ ಕೇರಳಂ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಎಕ್ಸಿಟ್‌ ಪೋಲ್‌ ರಿಸಲ್ಟ್‌ ಹೊರ ಬಿದ್ದಿದೆ. ಹಾಗಾದರೆ ಯಾವ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ? ಬದಲಾವಣೆಯ ಪರ್ವ ಯಾವ ರಾಜ್ಯದಲ್ಲೆಲ್ಲ ಕಂಡುಬರಲಿದೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಹುನಿರೀಕ್ಷಿತ ಎಕ್ಸಿಟ್‌ ಪೋಲ್‌ ರಿಸಲ್ಟ್‌ ಔಟ್‌; ಯಾರಿಗೆ ಯಾವ ರಾಜ್ಯ?

ಪಿಣರಾಯಿ ವಿಜಯನ್‌, ಎಂ.ಕೆ. ಸ್ಟಾಲಿನ್‌, ರಂಗಸ್ವಾಮಿ, ಹಿಂತ ಬಿಸ್ವ ಶರ್ಮ, ಮಮತಾ ಬ್ಯಾನರ್ಜಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Apr 29, 2026 6:41 PM

ದೆಹಲಿ, ಏ. 29: ತಿಂಗಳಿಂದ ನಡೆದ ವಿಧಾನಸಭಾ ಚುನಾವಣಾ ಪರ್ವ ಇಂದು ಅಂತ್ಯಗೊಂಡಿದೆ. ಪಶ್ಚಿಮ ಬಂಗಾಳದಲ್ಲಿ ನಡೆದ 2ನೇ ಮತ್ತು ಕೊನೆಯ ಹಂತದ ಮತದಾನದೊಂದಿಗೆ ಏಪ್ರಿಲ್‌ 9ರಂದು ಆರಂಭಗೊಂಡ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ಎಕ್ಸಿಟ್‌ ಪೋಲ್‌ ರಿಸಲ್ಟ್‌ ಹೊರ ಬಿದ್ದಿದೆ (Exit poll Results 2026). ಕೇರಳಂ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕ ಸೇರಿ ವಿವಿಧೆಡೆ ನಡೆದ ಉಪ ಚುನಾವಣೆಯಲ್ಲಿ ಯಾರಿಗೆ ವಿಜಯಲಕ್ಷ್ಮೀ ಒಲಿಯಬಹುದೆಂಬ ಅಸ್ಪಷ್ಟ ಸೂಚನೆ ಸಿಕ್ಕಿದೆ. ಹಾಗಾದರೆ ಎಕ್ಸಿಟ್‌ ಪೋಲ್‌ ಏನು ಹೇಳುತ್ತೆ? ಇಲ್ಲಿದೆ ವಿವರ.

ಬಹುತೇಕ ಸಮೀಕ್ಷೆಗಳು ಪಶ್ಚಿಮ ಬಂಗಾಳ ಮತ್ತು ಕೇರಳಂನಲ್ಲಿ ಬಿಜೆಪಿ ತನ್ನ ಬಲವನ್ನು ವರ್ಧಿಸಲಿದೆ ಎಂದು ಹೇಳಿವೆ. ಇನ್ನು ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲಿದೆ. ಇಲ್ಲಿ ಎನ್‌ಡಿಎಗೆ 88-100 ಸೀಟ್‌ ದೊರೆಯಲಿದ್ದು, ಕಾಂಗ್ರೆಸ್‌ ಮೈತ್ರಿಕೂಟ 24-36 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 165 ಸ್ಥಾನ ಗಳಿಸಲಿದೆ. ಆ ಮೂಲಕ ಮಮತಾ ಬ್ಯಾನರ್ಜಿ ಅವರ ಸುದೀರ್ಘ ಅವಧಿಯ ಆಡಳಿತ ಕೊನೆಗೊಳ್ಳಲಿದೆ. ತಮಿಳುನಾಡಿನಲ್ಲಿ ಡಿಎಂಕೆ 145-160 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಲಿದೆ. ಪುದುಚೇರಿಯಲ್ಲಿ ಎನ್‌ಆರ್‌ಸಿಗೆ 16-20, ಕಾಂಗ್ರೆಸ್‌ಗೆ 6-8, ಟಿವಿಕೆಗೆ 2-4 ಸೀಟ್‌ ಸಿಗಲಿದೆ. ಇನ್ನು ಕೇರಳಂನಲ್ಲಿ 10 ವರ್ಷಗಳ ಎಲ್‌ಡಿಎಫ್‌ ಆಡಳಿತ ಕೊನೆಗೊಳ್ಳಲಿದ್ದು, ಯುಡಿಎಫ್‌ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ತಿಳಿಸಿವೆ.

ಪಶ್ಚಿಮ ಬಂಗಾಳ ಚುನಾವಣೆ: ನಾಡಿಯಾದಲ್ಲಿ ಬಿಜೆಪಿ ಬೂತ್ ಏಜೆಂಟ್ ಮೇಲೆ ದಾಳಿ

ಇಲ್ಲಿದೆ ಎಕ್ಸಿಟ್‌ ಪೋಲ್‌ ರಿಪೋರ್ಟ್‌

ಕೇರಳಂನಲ್ಲಿ ಯುಡಿಎಫ್‌ಗೆ ಅಧಿಕಾರ: ಇನ್ನು ಕೇರಳಂನಲ್ಲಿ ಅಧಿಕಾರ ಬದಲಾಗಲಿದ್ದು, ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಿದೆ. 10 ವರ್ಷಗಳಿಂದ ಅಧಿಕಾರದಲ್ಲಿರುವ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್‌ ಅಧಿಕಾರದಿಂದ ಕೆಳಗಿಳಿಯಲಿದೆ. ಇನ್ನು ಬಿಜೆಪಿ ನೇತೃತ್ವದ ಎನ್‌ಡಿಎಗೆ ಕನಿಷ್ಠ 3 ಸ್ಥಾನಗಳಲ್ಲಿ ಜಯ ಸಿಗಲಿದೆ.

ಅಸ್ಸಾಂನಲ್ಲಿ ಮತ್ತೆ ಬಿಜೆಪಿಗೆ ಸೈ ಎಂದ ಮತದಾರರು: ಅಸ್ಸಾಂನಲ್ಲಿ ಬಿಜೆಪಿಗೆ ಮತ್ತೊಮ್ಮೆ ಮತದಾರರು ಆಶೀರ್ವದಿಸಿರುವ ಸೂಚನೆ ಸಿಕ್ಕಿದೆ. ಬಿಜೆಪಿ, ಎಜಿಪಿ, ಬಿಪಿಎಫ್‌ ನೇತೃತ್ವದ ಮೈತ್ರಿಕೂಟ 88ರಿಂದ 100 ಸೀಟ್‌ವರೆಗೆ ಗೆಲ್ಲುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್‌ ನೇತೃತ್ವದ ಮೂತ್ರಿಕೂಟ 24 ರಿಂದ 36 ಸ್ಥಾನಗಳಿಗೆ ಸೀಮಿತವಾಗಲಿದೆ.

ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ಸರ್ಕಾರ: ಇನ್ನು ತಮಿಳುನಾಡಿನಲ್ಲಿ ಮತ್ತೆ ಡಿಎಂಕೆ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಇಲ್ಲಿ ಡಿಎಂಕೆ 145-160, ಎನ್‌ಡಿಎ 50-65 ಗಳಿಸಲಿದೆ ಎಂದಿವೆ ಸಮೀಕ್ಷೆಗಳು.

ಪಶ್ಚಿಮ ಬಂಗಾಳದಲ್ಲಿ ದೀದಿ ಆಡಳಿತಕ್ಕೆ ಬ್ರೇಕ್‌: ಇನ್ನು ಅತೀ ದೊಡ್ಡ ರಾಜ್ಯಗಳಲ್ಲಿ ಒಂದಾದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಆಡಳಿತದಿಂದ ಕೆಳಗಿಳಿಯಲಿದ್ದು, ಎನ್‌ಡಿಎ ಅಧಿಕಾರದ ಗದ್ದುಗೆಗೆ ಏರಲಿದೆ.

ಪುದುಚೇರಿಗೆ ಎನ್‌ಡಿಎ: ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಎನ್‌ಡಿಎ ಅಧಿಕಾರಕ್ಕೇರಲಿದೆ. ಆ ಮೂಲಕ ಸತತ 2ನೇ ಬಾರಿಗೆ ಸರ್ಕಾರ ರಚಿಸಲಿದೆ.