ಅಮರಾವತಿ, ಫೆ. 28: ಆಂಧ್ರ ಪ್ರದೇಶದ (Andhra Pradesh) ಕಾಕಿನಾಡ ಜಿಲ್ಲೆಯ ಪಟಾಕಿ ಘಟಕದಲ್ಲಿ ಶನಿವಾರ (ಫೆಬ್ರವರಿ 28) ಸ್ಫೋಟ ಸಂಭವಿಸಿದ್ದು (Explosion at a firecracker), 18 ಜನರು ಮೃತಪಟ್ಟಿದ್ದಾರೆ. ದುರ್ಘಟನೆಯಲ್ಲಿ ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಗೃಹ ಸಚಿವೆ ವಂಗಲಪುಡಿ ಅನಿತಾ ತಿಳಿಸಿದ್ದಾರೆ. ಸಮರ್ಲಕೋಟ ಮಂಡಲದ ವೆಟ್ಲಕ್‌ಪಲೆಂ ಗ್ರಾಮದಲ್ಲಿ ಸಂಭವಿಸಿದ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ದೇಹಗಳು ಹತ್ತಿರದ ಭತ್ತದ ಗದ್ದೆಗಳಿಗೆ ಎಸೆಯಲ್ಪಟ್ಟಿವೆ.
ಪಟಾಕಿ ಸ್ಫೋಟದಲ್ಲಿ ಇಲ್ಲಿಯವರೆಗೆ, 18 ಜನರು ಸಾವಿಗೀಡಾಗಿದ್ದು, ಆರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಸಂಬಂಧ ಪರಿಶೀಲನೆಗಾಗಿ ಘಟನಾ ಸ್ಥಳಕ್ಕೆ ಹೋಗುತ್ತಿದ್ದೇನೆ ಎಂದು ಸಚಿವೆ ಅನಿತಾ ತಿಳಿಸಿದ್ದಾರೆ. ಶೇ. 90ರಿಂದ 100ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿರುವ ಏಳು ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಾಕಿನಾಡ ಸರ್ಕಾರಿ ಜನರಲ್ ಆಸ್ಪತ್ರೆಯ ಸೂಪರಿಂಟೆಂಡೆಂಟ್ ತಿಳಿಸಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಚಂದ್ರಬಾಬು ನಾಯ್ಡು ಅವರ ಎಕ್ಸ್ ಪೋಸ್ಟ್:
ಸೂರ್ಯ ಪಟಾಕಿ ಕಾರ್ಖಾನೆಯಲ್ಲಿ ಕಾರ್ಮಿಕರು ಪ್ರಾಣ ಕಳೆದುಕೊಂಡ ಬಗ್ಗೆ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ʼʼಕಾಕಿನಾಡ ಜಿಲ್ಲೆಯ ವೆಟ್ಲಪಲೆಂ ಗ್ರಾಮದಲ್ಲಿ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಸ್ಫೋಟ ನನಗೆ ನಿಜಕ್ಕೂ ನೋವುಂಟು ಮಾಡಿದೆʼʼ ಎಂದು ನಾಯ್ಡು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾಲಕನ ಬಾಯಲ್ಲೇ ಸ್ಫೋಟಗೊಂಡ ಮೊಬೈಲ್ ಬ್ಯಾಟರಿ; ಭಯಾನಕ ವಿಡಿಯೋ ವೈರಲ್
ಹಚ್ಚ ಹಸಿರಿನ ಭತ್ತದ ಗದ್ದೆಗಳ ನಡುವೆ ಭಯಾನಕ ದೃಶ್ಯವೊಂದು ಕಂಡುಬಂದಿದೆ. ಸ್ಥಳೀಯರು ಚೀಲಗಳಲ್ಲಿ ಶವಗಳನ್ನು ಸ್ಥಳಾಂತರಿಸಿದ್ದಾರೆ. ಸ್ಫೋಟದ ಸ್ಥಳದಿಂದ ಬೆಂಕಿ ಮತ್ತು ಹೊಗೆ ಹೊರಹೊಮ್ಮಿದ್ದು, ಗಾಯಾಳುಗಳನ್ನು ರಕ್ಷಿಸಲು ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದೆ.
ʼʼಅಪಘಾತದ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಮತ್ತು ಸಂತ್ರಸ್ತರಿಗೆ ತಕ್ಷಣದ ಸಹಾಯವನ್ನು ನೀಡುವಂತೆ ನಿರ್ದೇಶಿಸಿದ್ದೇನೆʼʼ ಎಂದು ಸಿಎಂ ನಾಯ್ಡು ಹೇಳಿದರು. ʼʼನಾವು ರಕ್ಷಣಾ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಹಾಯ ಮಾಡುತ್ತೇವೆʼʼ ಎಂದು ಅವರು ಹೇಳಿದರು.
ಸ್ಫೋಟ ಸಂಭವಿಸಿದಾಗ ಪಟಾಕಿ ಘಟಕದಲ್ಲಿ ಸುಮಾರು 20 ಜನರು ಕೆಲಸ ಮಾಡುತ್ತಿದ್ದರು. ಅಪಘಾತ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಮತ್ತು ಸಚಿವರು ಭೇಟಿ ನೀಡುವಂತೆ ನಾಯ್ಡು ನಿರ್ದೇಶನ ನೀಡಿದರು. ಹತ್ತಿರದ ಕೃಷಿ ಹೊಲಗಳಿಗೆ ಎಸೆಯಲ್ಪಟ್ಟ ದೇಹದ ಭಾಗಗಳನ್ನು ಪತ್ತೆಹಚ್ಚಲು ಪೊಲೀಸರು ಡ್ರೋನ್‌ಗಳನ್ನು ನಿಯೋಜಿಸಿದ್ದಾರೆ.