ನವದೆಹಲಿ: ಮೆಟಾದ ಸರ್ವರ್ (Meta) ಸಮಸ್ಯೆಯಾಗಿದ್ದು, ಫೇಸ್‌ಬುಕ್ (Facebook) ಮತ್ತು ಇನ್‌ಸ್ಟಾಗ್ರಾಮ್ (Instagram) ಬಳಕೆದಾರರು ಪರೆದಾಡಿದ್ದಾರೆ. ಅಪ್ಲಿಕೇಶನ್‌ಗಳು ಸರಿಯಾಗಿ ಲೋಡ್ ಆಗುತ್ತಿಲ್ಲ ಅಥವಾ ಫೀಡ್‌ಗಳನ್ನು ರಿಫ್ರೆಶ್ ಮಾಡಲು ವಿಫಲವಾಗುತ್ತಿವೆ ಎಂದು ಸಾವಿರಾರು ಬಳಕೆದಾರರು ದೂರಿದ್ದಾರೆ. ಇದರಿಂದಾಗಿ ಅನೇಕರು ಸೇವೆಗಳನ್ನು ಎಂದಿನಂತೆ ಬಳಸಲು ಸಾಧ್ಯವಾಗುತ್ತಿಲ್ಲ. ಸಂಜೆ 7 ಗಂಟೆಯ ಸುಮಾರಿಗೆ ಈ ಸಮಸ್ಯೆ ಪ್ರಾರಂಭವಾಗಿದ್ದು ಈಗಲೂ ಮುಂದುವರಿದಿದೆ.
ಕೇವಲ ಭಾರತ ಮಾತ್ರವಲ್ಲದೇ ಹಲವು ದೇಶಗಳಲ್ಲಿ ಇದೇ ರೀತಿಯ ಸಮಸ್ಯೆ ಕಾಣಿಸಿಕೊಂಡಿದೆ. ಅನೇಕ ಬಳಕೆದಾರರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹಲವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕೆಲವರು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಫೀಡ್‌ಗಳು ಲೋಡ್ ಆಗುತ್ತಿಲ್ಲ ಎಂದು ಹೇಳಿದರೆ, ಇತರರು ಅಪ್ಲಿಕೇಶನ್‌ಗಳು ವಿಷಯವನ್ನು ರಿಫ್ರೆಶ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಹಲವಾರು ಬಳಕೆದಾರರು ಲಾಗಿನ್-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಥವಾ ಕೆಲವು ವೈಶಿಷ್ಟ್ಯಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.
ಮೆಟಾ ಕಂಪನಿಯು ಈ ಸ್ಥಗಿತಕ್ಕೆ ಕಾರಣವೇನು ಎಂಬುದನ್ನು ಮೆಟಾ ಈ ವರೆಗೂ ಅಧಿಕೃತವಾಗಿ ತಿಳಿಸಿಲ್ಲ. ಡೌನ್‌ಡಿಟೆಕ್ಟರ್ ಡೇಟಾವು ಫೇಸ್‌ಬುಕ್‌ಗೆ ಸಂಬಂಧಿಸಿದ 100,000 ಕ್ಕೂ ಹೆಚ್ಚು ವರದಿಗಳನ್ನು ತೋರಿಸಿದೆ. ಇನ್‌ಸ್ಟಾಗ್ರಾಮ್‌ಗೂ ಇದೇ ರೀತಿಯ ದೂರುಗಳು ಕಂಡುಬಂದಿವೆ. ತಾಂತ್ರಿಕ ದೋಷದ ಕುರಿತು ಮೆಟಾ ಸಂಸ್ಥೆಯ ತಾಂತ್ರಿಕ ತಂಡಕ್ಕೆ ಈಗಾಗಲೇ ಮಾಹಿತಿ ತಲುಪಿದ್ದು, ಸರ್ವರ್‌ಗಳನ್ನು ಮರುಸ್ಥಾಪಿಸುವ (Restore) ಕೆಲಸ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಎಲ್ಲಾ ಸೇವೆಗಳು ಯಥಾಸ್ಥಿತಿಗೆ ಮರಳಲಿವೆ ಎಂದು ಮೂಲಗಳು ತಿಳಿಸಿವೆ. ಭದ್ರತಾ ದೋಷವೇ ಅಥವಾ ಸರ್ವರ್ ಓವರ್‌ಲೋಡ್ ಕಾರಣವೇ ಎಂಬುದು ಇನ್ನು ಅಧಿಕೃತವಾಗಿ ತಿಳಿದುಬಂದಿಲ್ಲ.
ಎಐ ಆಧರಿತ ಡೇಟಾ ಸೆಂಟರ್ ಅಭಿವೃದ್ಧಿಪಡಿಸಲು ರಿಲಯನ್ಸ್-ಮೆಟಾ ಪಾಲುದಾರಿಕೆ
ಮೆಟಾದಲ್ಲಿ ಭಾರಿ ಉದ್ಯೋಗ ಕಡಿತ!
ಮೆಟಾ ಕಂಪನಿ ಸುಮಾರು 8 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲು ಮುಂದಾಗಿದೆ ಎಂಬ ವರದಿಗಳು ಹೊರಬಿದ್ದಿದೆ. ಮೆಟಾದ ಒಟ್ಟು 78 ಸಾವಿರ ಸಿಬ್ಬಂದಿಯಲ್ಲಿ ಸುಮಾರು ಶೇ.10ರಷ್ಟು ಜನರಿಗೆ ಗೇಟ್‌ಪಾಸ್ ನೀಡಲಾಗುತ್ತಿದೆ. ಕಂಪನಿಯ ಪುನರ್‌ವ್ಯವಸ್ಥೆ ಹಾಗೂ ವೆಚ್ಚ ಕಡಿತದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈಗಾಗಲೇ ನಡೆಯಬೇಕಿದ್ದ ಸುಮಾರು 6 ಸಾವಿರ ಹೊಸ ನೇಮಕಾತಿಗಳನ್ನು ಸ್ಥಗಿತಗೊಳಿಸಲು ಮೆಟಾ ತೀರ್ಮಾನಿಸಿದೆ.