ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭೀಕರ ರಸ್ತೆ ಅಪಘಾತದಲ್ಲಿ ಕೊನೆಯುಸಿರೆಳೆದ ಮಲಯಾಳಂ ನಟ ಸಂತೋಷ್ ನಾಯರ್

Santhosh K Nair: ಮಲಯಾಳಂನ ಹಿರಿಯ ನಟ ಸಂತೋಷ್ ಕೆ. ನಾಯರ್ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದರು‌. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಮಲಯಾಳಂ ನಟ- ಸಂತೋಷ್ ಕೆ. ನಾಯರ್ (ಸಂಗ್ರಹ ಚಿತ್ರ)

ತಿರುವನಂತಪುರಂ, ಮೇ 5: ಮಲಯಾಳಂನ ಹಿರಿಯ ನಟ ಸಂತೋಷ್ ಕೆ. ನಾಯರ್ (Santhosh K Nair) ಮೇ 5ರಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆ ದಾಖಲಿಸಿದರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅಪಘಾತದ ವೇಳೆ ಅವರೊಂದಿಗೆ ಪ್ರಯಾಣಿಸುತ್ತಿದ್ದ ಅವರ ಪತ್ನಿ ರಾಜಲಕ್ಷ್ಮೀ ಗಾಯಗೊಂಡಿದ್ದು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜಲಕ್ಷ್ಮೀ ಜತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಪತ್ತನಂತ್ತಿಟ್ಟ ಜಿಲ್ಲೆಯ ಅಡೂ‌ರ್ ಸಮೀಪ ನಿಯಂತ್ರಣ ತಪ್ಪಿ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಇನ್ನು ಅಪಘಾತ ಆದ ತಕ್ಷಣ ಸಂತೋಷ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ನಟ ಸಂತೋಷ್ ಅವರ ಸಾವು ಮಲಯಾಳಂ ಚಿತ್ರರಂಗದ ಪ್ರಮುಖರು ಆಘಾತ ವ್ಯಕ್ತಪಡಿಸಿದ್ದಾರೆ.

ಮಲಯಾಳಂ ನಟ ಸಂತೋಷ್‌ ನಿಧನ:



ಸಂತೋಷ್ ನಾಯರ್ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ಜತೆ ವಿಶೇಷ ಆತ್ಮೀಯತೆ ಹೊಂದಿದ್ದರು. ಸುಮಾರು ನಾಲ್ಕು ದಶಕಗಳ ಸಿನಿಮಾರಂಗದಲ್ಲಿ ಯಶಸ್ವಿ ನಟರಾಗಿದ್ದ ಇವರು ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ‌. 1982ರಲ್ಲಿ ತೆರೆಕಂಡ ‘ಇದು ನಂಗಳುಡೆ ಕಥಾ’ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಖಳನಾಯಕ ಹಾಗೂ ಹಾಸ್ಯ ನಟನಾಗಿ ಸಿನಿ ಪರದೆಯಲ್ಲಿ ಮಿಂಚಿದ್ದು ಪ್ರೇಕ್ಷಕರನ್ನು ನಗಿಸುವ ಮೂಲಕವೇ ಗಮನ ಸೆಳೆದವರು. 'ಇರುವತಂ ನೂಟಾಂಡು' ಚಿತ್ರದ ಲಾರೆನ್ಸ್ ಪಾತ್ರ ಹೆಚ್ಚು ಖ್ಯಾತಿ ತಂದು ಕೊಟ್ಟಿತ್ತು.ಬೆಳ್ಳಿಪರದೆ ಮಾತ್ರವಲ್ಲದೆ ಕಿರುತೆರೆಯಲ್ಲೂ ಬಹಳ ಹೆಸರು ಮಾಡಿದ್ದರು.

ಖ್ಯಾತ ಗಾಯಕಿ ಆಶಾ ಭೋಸ್ಲೆ ನಿಧನಕ್ಕೆ ಬಾಲಿವುಡ್‌ ತಾರೆಯರು ಸಂತಾಪ

ಸಂತೋಷ್ ಅಭಿನಯದ ಕೊನೆಯ ಚಿತ್ರ ‘ಭರತನಾಟ್ಯಂ 2 ಮೋಹಿನಿಯಾಟ್ಟಂ’ ಸಿನಿಮಾ ಏಪ್ರಿಲ್ 10ರಂದು ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಂಡಿತು. ಚಿತ್ರವು 2024ರ ‘ಭರತನಾಟ್ಯಂ’ ಸಿನಿಮಾದ ಮುಂದುವರಿದ ಭಾಗ.