ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಈ ಬಾರಿ ಭಾನುವಾರ ಬಜೆಟ್‌ ಮಂಡನೆ ಮಾಡ್ತಾರಾ ಸಚಿವೆ ನಿರ್ಮಲಾ ಸೀತಾರಾಮನ್?

ಕಳೆದ 9 ವರ್ಷಗಳಿಂದ ಪಾಲಿಸಿಕೊಂಡು ಬಂದ ಸಂಸತ್ತಿನ ಸಂಪ್ರದಾಯವೊಂದು ಈ ಬಾರಿ ಮುರಿಯಲಾಗುತ್ತದೆಯೇ ಎನ್ನುವ ಪ್ರಶ್ನೆಯೊಂದು ಈಗ ಎದ್ದಿದೆ. ಯಾಕೆಂದರೆ ಈ ಬಾರಿಯ ಬಜೆಟ್ ಮಂಡನೆ ದಿನ ಭಾನುವಾರ ಬರಲಿದೆ. ಸಾಮಾನ್ಯವಾಗಿ ಭಾನುವಾರವನ್ನು ರಾಜಾ ದಿನವಾಗಿ ಪರಿಗಣಿಸಲಾಗಿದೆ. ಒಂದು ವೇಳೆ ಈ ದಿನ ಬಜೆಟ್ ಮಂಡನೆಯಾಗಲಿ ಅಥವಾ ಆಗದೇ ಇರಲಿ ಅದು ದಾಖಲೆಯಾಗಿ ಉಳಿಯಲಿದೆ.

(ಸಂಗ್ರಹ ಚಿತ್ರ)

ನವದೆಹಲಿ: ಹೊಸ ವರ್ಷದ (New year) ಆರಂಭದೊಂದಿಗೆ ಹೊಸ ಕುತೂಹಲವೊಂದು ನವದೆಹಲಿಯತ್ತ ದೃಷ್ಟಿ ಇಡುವಂತೆ ಮಾಡಿದೆ. ಅದುವೇ ಬಜೆಟ್ ಮಂಡನೆಯ (Union Budget 2026) ದಿನ. ಕಳೆದ 9 ವರ್ಷಗಳಿಂದ ಪಾಲಿಸಿಕೊಂಡು ಬಂದ ಸಂಸತ್ತಿನ (Parliment) ಸಂಪ್ರದಾಯವೊಂದು ಈ ಬಾರಿ ಮುರಿಯುತ್ತದೆಯೇ ಎನ್ನುವ ಪ್ರಶ್ನೆಯೊಂದು ಈಗ ಎಲ್ಲರ ಮನದಲ್ಲಿ ಎದ್ದಿದೆ. ಯಾಕೆಂದರೆ ಈ ಬಾರಿಯ ಬಜೆಟ್ ಮಂಡನೆ (Union Budget) ದಿನ ಭಾನುವಾರ ಬರಲಿದೆ. ಸಾಮಾನ್ಯವಾಗಿ ಭಾನುವಾರವನ್ನು ರಾಜಾ ದಿನವಾಗಿ ಪರಿಗಣಿಸಲಾಗಿದೆ. ಒಂದು ವೇಳೆ ಈ ದಿನ ಬಜೆಟ್ ಮಂಡನೆಯಾಗಲಿ ಅಥವಾ ಆಗದೇ ಇರಲಿ ಅದೊಂದು ದಾಖಲೆಯಾಗಲಿದೆ.

2026ರ ಫೆಬ್ರವರಿ 1 ಭಾನುವಾರವಾಗಿದೆ. ಇದು ಬಜೆಟ್ ಮಂಡನೆಯ ದಿನವಾಗಿರುವುದರಿಂದ ಈ ಕುರಿತು ಪರಿಶೀಲನೆ ಕಾರ್ಯಗಳು ನಡೆಯುತ್ತಿವೆ. ಸಂಸದೀಯ ಸಂಪ್ರದಾಯ ಭಾನುವಾರ ಬಜೆಟ್ ಮಂಡಿಸಬಹುದು ಎಂದು ಸೂಚಿಸಿದ್ದರೂ ಅಂತಿಮ ನಿರ್ಧಾರವು ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಮೇಲಿದೆ. ಇದು ಹಣಕಾಸು ವರ್ಷದ ಆರಂಭವಾದ ಏಪ್ರಿಲ್ 1ರೊಳಗೆ ಬಜೆಟ್ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ.

Year Ender 2025: ಮತ್ತೆ ಬೆಸೆದ ಸಂಬಂಧ; ಭಾರತದತ್ತ ಸ್ನೇಹ ಹಸ್ತ ಚಾಚಿದ ಚೀನಾ

ಕಳೆದ ಒಂಬತ್ತು ವರ್ಷಗಳಿಂದ ಪ್ರತಿ ವರ್ಷ ಈ ದಿನ ಹಣಕಾಸು ಸಚಿವರು ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಿದ್ದಾರೆ. ಇದು 2017 ರಿಂದ ಮುಂದುವರಿದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇದಕ್ಕೂ ಮೊದಲು ಫೆಬ್ರವರಿ ಕೊನೆಯ ದಿನ ಬಜೆಟ್ ಮಂಡಿಸಲಾಗುತ್ತಿತ್ತು. ಆದರೆ ಈ ವರ್ಷ ಫೆಬ್ರವರಿ 1 ಭಾನುವಾರವಾಗಿದೆ. ಹೀಗಾಗಿ ಕೇಂದ್ರ ಬಜೆಟ್ 2026 ಅನ್ನು ಈ ದಿನ ಮಂಡಿಸಲಾಗುತ್ತದೆಯೇ ಅಥವಾ ಮರುದಿನ ಅಂದರೆ ಫೆಬ್ರವರಿ 2ರಂದು ನಡೆಸಲಾಗುವುದೇ ಎನ್ನುವ ಕುತೂಹಲವಿದೆ.

2020ರ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಮತ್ತು 2012ರ ಮೇ 13ರಂದು ಸಂಸತ್ತಿನ ಮೊದಲ ಅಧಿವೇಶನದ 60ನೇ ವರ್ಷಾಚರಣೆಯ ಸಂದರ್ಭದಲ್ಲಿ ಭಾನುವಾರ ಸಂಸತ್ತಿನ ಅಧಿವೇಶನ ನಡೆದಿದೆ. ಹೀಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಬಹುದು ಎನ್ನುತ್ತದೆ ಒಂದು ವರದಿ. ಸಂಸದೀಯ ಸಂಪ್ರದಾಯಗಳನ್ನು ಅನುಸರಿಸಿದರೆ ಹಣಕಾಸು ಸಚಿವರು 2026-27 ರ ಸಾಮಾನ್ಯ ಬಜೆಟ್ ಅನ್ನು ಭಾನುವಾರವೇ ಮಂಡಿಸುತ್ತಾರೆ ಎಂದು ಪಿಟಿಐ ತಿಳಿಸಿದೆ.

ರೈಲ್ವೆ ಹಳಿಗಳ ಮೇಲೆ ಮಲಗಿ ರೀಲ್ಸ್ ಶೂಟ್ ಮಾಡಿದ ಯುವಕ: ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಈ ಕುರಿತು ಪ್ರತಿಕ್ರಿಯಿಸಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಈ ಕುರಿತು ಸೂಕ್ತ ಸಮಯದಲ್ಲಿ ನಿರ್ಣಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author