ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deoghar temple: ದಿಯೋಘರ್ ದೇವಸ್ಥಾನಕ್ಕೆ ಬಲವಂತದ ಪ್ರವೇಶ; ಬಿಜೆಪಿ ನಾಯಕರ ಮೇಲೆ FIR ದಾಖಲು

ದಿಯೋಘರ್‌ನ ಬಾಬಾ ಬೈದ್ಯನಾಥ ದೇವಾಲಯದ ಗರ್ಭಗುಡಿಗೆ ಬಲವಂತವಾಗಿ ಪ್ರವೇಶಿಸಿ, ಸಾವಿರಾರು ಭಕ್ತರಲ್ಲಿ ಭಯ ಮತ್ತು ಭೀತಿಯನ್ನು ಉಂಟುಮಾಡಿದ ಆರೋಪದ ಮೇಲೆ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ , ಮನೋಜ್ ತಿವಾರಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ರಾಂಚಿ: ದಿಯೋಘರ್‌ನ ಬಾಬಾ ಬೈದ್ಯನಾಥ ದೇವಾಲಯದ ಗರ್ಭಗುಡಿಗೆ (Deoghar temple) ಬಲವಂತವಾಗಿ ಪ್ರವೇಶಿಸಿ, ಸಾವಿರಾರು ಭಕ್ತರಲ್ಲಿ ಭಯ ಮತ್ತು ಭೀತಿಯನ್ನು ಉಂಟುಮಾಡಿದ ಆರೋಪದ ಮೇಲೆ ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ , ಮನೋಜ್ ತಿವಾರಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಶ್ರಾವಣ ಮಾಸದಲ್ಲಿ ಗಣ್ಯರ ಪ್ರವೇಶಕ್ಕೆ ನಿರ್ಭಂದವಿದ್ದರೂ, ದೇವಾಲಯಕ್ಕೆ ಬಿಜೆಪಿ ನಾಯಕರು ನಿಯಮವನ್ನು ಉಲ್ಲಂಘಿಸಿ ಪ್ರವೇಶಿಸಿದ್ದಾರೆ. ಅವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಜಾರ್ಖಂಡ್‌ ಪೊಲೀಸರು ತಿಳಿಸಿದ್ದಾರೆ. ಆಗಸ್ಟ್ 7 ರಂದು ದೇವಾಲಯದ ಅರ್ಚಕ ಕಾರ್ತಿಕ್ ನಾಥ್ ಠಾಕೂರ್ ನೀಡಿದ ದೂರಿನ ಮೇರೆಗೆ ಭಾರತೀಯ ನ್ಯಾಯ ಸಂಹಿತಾದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.



ವಿಐಪಿ ಪ್ರವೇಶದ ಮೇಲೆ ನಿರ್ಬಂಧವಿದ್ದರೂ, ದುಬೆ ಮತ್ತು ಮನೋಜ್ ತಿವಾರಿ "ಆಗಸ್ಟ್ 2 ರಂದು ರಾತ್ರಿ 8.45 ರಿಂದ ರಾತ್ರಿ 9 ಗಂಟೆಯ ನಡುವೆ ಬಲವಂತವಾಗಿ ಒಳಗಿನ ದೇಗುಲಕ್ಕೆ ಪ್ರವೇಶಿಸಿದ್ದಾರೆ" ಎಂದು ಅರ್ಚಕರು ದೂರಿನಲ್ಲಿ ಆರೋಪಿಸಿದ್ದಾರೆ. ದೇವಾಲಯದ ಒಳಗಿನ ದೇಗುಲಕ್ಕೆ ಪ್ರವೇಶಿಸಿ, ಧಾರ್ಮಿಕ ಸಂಪ್ರದಾಯ ಮತ್ತು ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಮತ್ತು ಭದ್ರತಾ ಕಾರಣಗಳಿಗಾಗಿ ನಿಯೋಜಿಸಲಾದ ಪೊಲೀಸರೊಂದಿಗೆ ಜಗಳವಾಡುವ ಮೂಲಕ ಸರ್ಕಾರಿ ಕೆಲಸದಲ್ಲಿ ಅಡೆತಡೆಗಳನ್ನುಂಟುಮಾಡಿದ್ದಕ್ಕಾಗಿ ನಿಶಿಕಾಂತ್ ದುಬೆ, ಮನೋಜ್ ತಿವಾರಿ, ಕಾನ್ಶಿಕಾನಾಥ್ ದುಬೆ, ಶೇಷಾದ್ರಿ ದುಬೆ ಮತ್ತು ಇತರರ ವಿರುದ್ಧ ಬಾಬಾ ಬೈದ್ಯನಾಥ ಮಂದಿರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Delhi Poster War: ದಿಲ್ಲಿಯಲ್ಲಿ ಶುರುವಾಯ್ತು ಪೋಸ್ಟರ್‌ ವಾರ್‌! ʻಪುಷ್ಪʼ ಸ್ಟೈಲ್‌ನಲ್ಲಿ ಆಪ್‌-ಬಿಜೆಪಿ ನಾಯಕರು ಪೋಸ್‌!

ಕಾಂಚಾ ಜಲ ಪೂಜೆ' ಆಚರಣೆ ನಡೆಯುತ್ತಿರುವಾಗ ಇಬ್ಬರು ಸಂಸದರು ದೇವಾಲಯದ ಒಳಗಿನ ಕೋಣೆಗೆ ಪ್ರವೇಶಿಸಿದರು, ಇದು ಪ್ರಾರ್ಥನೆಯ ಸಮಯದಲ್ಲಿ ಅಡ್ಡಿಪಡಿಸಿತು ಎಂದು ಆರೋಪಿಸಲಾಗಿದೆ. 'ಶ್ರಾವಣ' ಮಾಸದಲ್ಲಿ, ಸಾವಿರಾರು 'ಕನ್ವಾರಿಯರು' ಬಿಹಾರದ ಸುಲ್ತಾನಗಂಜ್‌ನಿಂದ ಜಾರ್ಖಂಡ್‌ನ ದಿಯೋಘರ್‌ಗೆ 105 ಕಿ.ಮೀ. ತೀರ್ಥಯಾತ್ರೆ ಕೈಗೊಂಡು, 12 'ಜ್ಯೋತಿರ್ಲಿಂಗ'ಗಳಲ್ಲಿ ಒಂದಾದ ಬಾಬಾ ಬೈದ್ಯನಾಥ ಧಾಮ ದೇವಾಲಯದಲ್ಲಿ ಪವಿತ್ರ ಗಂಗಾ ಜಲವನ್ನು ಅರ್ಪಿಸುತ್ತಾರೆ. ಈ ವರ್ಷ ಸುಮಾರು 55 ಲಕ್ಷ 'ಕನ್ವಾರಿಯರು' ಇಲ್ಲಿಯವರೆಗೆ ದೇವಾಲಯದಲ್ಲಿ ಪವಿತ್ರ ಜಲವನ್ನು ಅರ್ಪಿಸಿದ್ದಾರೆ.