ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಶ್ಚಿಮ ಬಂಗಾಳದಲ್ಲಿ 5 ರುಪಾಯಿಗೆ ಮೀನೂಟ: ಭರ್ಜರಿ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ

Fish meal for Rs 5: ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳಿಯರ ಪ್ರಮುಖ ಆಹಾರಗಳಾದ ಮೀನು, ಮಾಂಸ ಮತ್ತು ಮೊಟ್ಟೆಗಳನ್ನು ನಿಷೇಧಿಸುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಇದೀಗ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ 5 ರುಪಾಯಿಗೆ ಮೀನೂಟ ಒದಗಿಸುವ ಯೋಜನೆಯನ್ನು ಘೋಷಿಸಿದೆ.

ಸಾಂದರ್ಭಿಕ ಚಿತ್ರ

ಕೋಲ್ಕತ್ತಾ, ಮೇ 26: ಪಶ್ಚಿಮ ಬಂಗಾಳಾದ್ಯಂತ ರಾಜ್ಯ ಸರ್ಕಾರ ನಡೆಸುವ ಕ್ಯಾಂಟೀನ್‌ಗಳಲ್ಲಿ 5 ರುಪಾಯಿಗೆ ಮೀನೂಟ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಘೋಷಿಸಿದ್ದಾರೆ. ಕಲ್ಯಾಣಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಿಎಂ, ಪಶ್ಚಿಮ ಬಂಗಾಳದಾದ್ಯಂತ (West Bengal) ಮೀಸಲಾದ 400 ಕ್ಯಾಂಟೀನ್‌ಗಳಲ್ಲಿ ಈ ಸಬ್ಸಿಡಿ ಊಟವನ್ನು ಒದಗಿಸಲಾಗುವುದು ಎಂದು ಹೇಳಿದರು.

2026 ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಬಂಗಾಳಿಯರ ಪ್ರಮುಖ ಆಹಾರಗಳಾದ ಮೀನು, ಮಾಂಸ ಮತ್ತು ಮೊಟ್ಟೆಗಳನ್ನು ನಿಷೇಧಿಸುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿತ್ತು. ಅದನ್ನು ಸಂಪೂರ್ಣ ಸುಳ್ಳಾಗಿಸಿ ಇದೀಗ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈ ಹೊಸ ಘೋಷಣೆಯನ್ನು ಮಾಡಿದೆ.

ಪಶ್ಚಿಮ ಬಂಗಾಳದಲ್ಲಿ 5 ರುಪಾಯಿಗೆ ಮೀನೂಟ:



ಏಪ್ರಿಲ್‌ನಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬಂಗಾಳದ ಆಹಾರ ಪದ್ಧತಿಯ ಬಗ್ಗೆ ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿದ್ದರು. ಬಂಗಾಳದ ಜನರು ಮೀನು ಮತ್ತು ಅನ್ನವನ್ನು ತಿನ್ನುತ್ತಾರೆ. ನೀವು (ಬಿಜೆಪಿ) ಬಂಗಾಳದ ಜನರಿಗೆ ಮೀನು ತಿನ್ನಬಾರದು, ಮಾಂಸ ತಿನ್ನಬಾರದು, ಮೊಟ್ಟೆ ತಿನ್ನಬಾರದು ಎಂದು ಹೇಳುತ್ತಿದ್ದೀರಿ. ನೀವು ಅಧಿಕಾರಕ್ಕೆ ಬಂದರೆ ಅವರು ಏನು ತಿನ್ನುತ್ತಾರೆ? ಎಂದು ಪ್ರಶ್ನಿಸಿದ್ದರು.

ಮಮತಾ ಬ್ಯಾನರ್ಜಿ ಆಡಳಿತದಲ್ಲಿ ನಿರ್ಲಕ್ಷಿಸಲ್ಪಟ್ಟ ಮಹಿಳಾ ಪೊಲೀಸ್‌ ಅಧಿಕಾರಿಗೆ ಉನ್ನತ ಜವಾಬ್ದಾರಿ ನೀಡಿದ ಸುವೇಂದು ಅಧಿಕಾರಿ

ಆದರೆ ಬಿಜೆಪಿ ಈ ಆರೋಪಗಳನ್ನು ನಿರಾಕರಿಸಿತ್ತು. ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಅಂತಹ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿತ್ತು. ಅನುರಾಗ್ ಠಾಕೂರ್ ಸೇರಿ ಹಲವು ಬಿಜೆಪಿ ನಾಯಕರು ಮಾಚ್-ಬಾತ್ ಹಬ್ಬಗಳಲ್ಲಿ ಸಾರ್ವಜನಿಕವಾಗಿ ಭಾಗವಹಿಸಿದ್ದರು. ಬಂಗಾಳಿ ಸಂಸ್ಕೃತಿಯೊಂದಿಗಿನ ತಮ್ಮ ಬಾಂಧವ್ಯವನ್ನು ತೋರ್ಪಡಿಸುವ ಸಲುವಾಗಿ ನಾಮಪತ್ರ ಸಲ್ಲಿಕೆ ರ‍್ಯಾಲಿಗಳಲ್ಲಿ ಮೀನುಗಳನ್ನು ಕೊಂಡೊಯ್ದಿದ್ದರು.

ʼʼನಾವು ಮಾಂಸ, ಮೀನು ಮತ್ತು ಅನ್ನವನ್ನು ತಿನ್ನುತ್ತಿದ್ದೇವೆ. ಬಿಜೆಪಿ 16 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿದೆ. ಎನ್‍ಡಿಎ ಒಕ್ಕೂಟದ ಸರ್ಕಾರಗಳು 20 ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿವೆ. ಆಹಾರ ಅಥವಾ ಪೂಜೆಯ ಮೇಲೆ ಎಲ್ಲಿಯೂ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ, ಮಮತಾ ಬ್ಯಾನರ್ಜಿ ಭಯ, ಗೊಂದಲ ಮತ್ತು ವದಂತಿಗಳನ್ನು ಹರಡುತ್ತಿದ್ದಾರೆʼʼ ಎಂದು ಬಿಜೆಪಿ ನಾಯಕ ಅನುರಾಗ್‌ ಎಂದು ಠಾಕೂರ್ ಹೇಳಿದ್ದರು.

ಬಂಗಾಳದಲ್ಲಿ 5 ರುಪಾಯಿಗೆ ಊಟ

ಪಶ್ಚಿಮ ಬಂಗಾಳದಾದ್ಯಂತ 5 ರುಪಾಯಿಗೆ ಊಟ ನೀಡುವ ಸಬ್ಸಿಡಿ ಕ್ಯಾಂಟೀನ್‌ಗಳು ಬಹಳ ಹಿಂದಿನಿಂದಲೂ ಜನಪ್ರಿಯ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 2021ರಲ್ಲಿ ಈ ಯೋಜನೆಯನ್ನು ‘ಮಾ’ ಕ್ಯಾಂಟೀನ್‌ ಹೆಸರಿನಲ್ಲಿ ಪರಿಚಯಿಸಿತು. ಇದು ಸಾಮಾನ್ಯವಾಗಿ ಮಧ್ಯಾಹ್ನ 12.30ರಿಂದ ಅಪರಾಹ್ನ 3ರವರೆಗೆ ಕಾರ್ಯನಿರ್ವಹಿಸುತ್ತದೆ. ‌ಇಲ್ಲಿ ಅನ್ನ, ಬೇಳೆ, ತರಕಾರಿಗಳು ಮತ್ತು ಮೊಟ್ಟೆಯ ಕರಿ ನೀಡಲಾಗುತ್ತದೆ. ಪಶ್ಚಿಮ ಬಂಗಾಳ ಸರ್ಕಾರವು 2021ರ ರಾಜ್ಯ ಬಜೆಟ್‌ನಲ್ಲಿ ಈ ಯೋಜನೆಗಾಗಿ 100 ಕೋಟಿ ರುಪಾಯಿ ನಿಗದಿಪಡಿಸಿತ್ತು.