ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸೊಮಾಲಿಯಾ ನೌಕೆ ಅಪಹರಣ ದುರಂತ: ಭಾರತೀಯ ಸೇರಿ ಐವರು ಸಾವು

Somalia hijacked ship: ಏಪ್ರಿಲ್ 24 ರಂದು ಅಪಹರಿಸಲ್ಪಟ್ಟ MT ಹಾನರ್ 25 ಟ್ಯಾಂಕರ್‌ನಲ್ಲಿ ಭಾರತೀಯ ಪ್ರಜೆ ಮೊಹಮ್ಮದ್ ತನ್ವೀರುಜ್ ಜಮಾನ್ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಅವರು ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದರು. ಜಮಾನ್ ಅವರ ಸಂಬಂಧಿಕರು ಈ ಹಿಂದೆಯೇ ಡಿಜಿಎಂಎಗೆ ಟ್ಯಾಂಕರ್ ಅನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ತಿಳಿಸಿದ್ದರು.

ಸಾಂದರ್ಭಿಕ ಚಿತ್ರ

ನವದೆಹಲಿ, ಅ.1: ಭಾರತೀಯ ಪ್ರಜೆ ಸೇರಿದಂತೆ ಹೈಜಾಕ್ ಮಾಡಲಾಗಿದ್ದ (hijacked ship) ತೈಲ ಸಾಗಣೆ ಹಡಗಿನ (ಟ್ಯಾಂಕರ್) ಸಿಬ್ಬಂದಿಯ ಐವರು ಮೃತಪಟ್ಟಿದ್ದಾರೆ. ಮಂಗಳವಾರ (ಸೆ.29) ಸೋಮಾಲಿ ಕಡಲ್ಗಳ್ಳರು (Somali pirates) ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಮೃತಪಟ್ಟಿದ್ದಾರೆ. ಈ ಘಟನೆಯ ಬಗ್ಗೆ ಬುಧವಾರ (ಸೆ.30) ಸಮುದ್ರ ಆಡಳಿತ ನಿರ್ದೇಶನಾಲಯಕ್ಕೆ (ಡಿಜಿಎಂಎ) ವರದಿಯಾಗಿದೆ.

ಏಪ್ರಿಲ್ 24 ರಂದು ಅಪಹರಿಸಲ್ಪಟ್ಟ MT ಹಾನರ್ 25 ಟ್ಯಾಂಕರ್‌ನಲ್ಲಿ ಭಾರತೀಯ ಪ್ರಜೆ ಮೊಹಮ್ಮದ್ ತನ್ವೀರುಜ್ ಜಮಾನ್ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದರು. ಅವರು ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದರು. ಜಮಾನ್ ಅವರ ಸಂಬಂಧಿಕರು ಈ ಹಿಂದೆಯೇ ಡಿಜಿಎಂಎಗೆ ಟ್ಯಾಂಕರ್ ಅನ್ನು ಸೊಮಾಲಿ ಕಡಲ್ಗಳ್ಳರು ಅಪಹರಿಸಿದ್ದಾರೆ ಎಂದು ತಿಳಿಸಿದ್ದರು. ಜಮಾನ್ ಅವರನ್ನು ಪಂಜಾಬ್ ಮೂಲದ ವರ್ಲ್ಡ್ ಮ್ಯಾರಿಟೈಮ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ನೇಮಿಸಿಕೊಂಡಿತ್ತು.

ಭದ್ರತಾ ಪಡೆಗಳು ಟ್ಯಾಂಕರ್ ಅನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಸಂಸ್ಥೆ ಡಿಜಿಎಂಎಗೆ ತಿಳಿಸಿದೆ. ಮೃತಪಟ್ಟ ಇತರ ಸಿಬ್ಬಂದಿಗಳಲ್ಲಿ ಮೂವರು ಪಾಕಿಸ್ತಾನಿಗಳು ಮತ್ತು ಒಬ್ಬ ಮ್ಯಾನ್ಮರ್ ಪ್ರಜೆ ಸೇರಿದ್ದಾರೆ. ಹಡಗು ಪ್ರಸ್ತುತ ಬೆಂಗಾವಲಿನೊಂದಿಗೆ ಬೊಸಾಸೊ ಬಂದರಿನ ಕಡೆಗೆ ಸಾಗುತ್ತಿದೆ.

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗೆ ಕ್ಷಿಪಣಿ ದಾಳಿ: 24 ಭಾರತೀಯ ನಾವಿಕರ ರಕ್ಷಣೆ

ನಿರ್ದೇಶನಾಲಯದ ವರದಿಯ ಪ್ರಕಾರ, ಆ ಟ್ಯಾಂಕರ್‌ನಲ್ಲಿ ಬಿಟುಮೆನ್‌ (ಡಾಂಬರು ತಯಾರಿಸಲು ಬಳಸುವ ವಸ್ತು) ಸಾಗಿಸಲಾಗುತ್ತಿತ್ತು. ಅದು ಪಲಾವ್‌ ದೇಶದ ಧ್ವಜದಡಿ ಕಾರ್ಯನಿರ್ವಹಿಸುತ್ತಿತ್ತು. ಟ್ಯಾಂಕರ್‌ನಲ್ಲಿ ಒಟ್ಟು 17 ಮಂದಿ ಸಿಬ್ಬಂದಿ ಇದ್ದರು. ಅವರಲ್ಲಿ ಒಬ್ಬ ಭಾರತೀಯ, 10 ಪಾಕಿಸ್ತಾನಿಗಳು, ನಾಲ್ವರು ಇಂಡೋನೇಷಿಯನ್ನರು, ಒಬ್ಬ ಮ್ಯಾನ್ಮಾರ್ ಪ್ರಜೆ ಮತ್ತು ಒಬ್ಬ ಶ್ರೀಲಂಕಾ ಪ್ರಜೆ ಇದ್ದರು.

ಒಮಾನ್ ಸಮುದ್ರದಲ್ಲಿ ಭಾರತೀಯ ಹಡಗಿನ ಮೇಲೆ ಅಮೆರಿಕ ಕ್ಷಿಪಣಿ ದಾಳಿ

ಒಮಾನ್ ಕರಾವಳಿಯ ಸಮೀಪ ವಾಣಿಜ್ಯ ಹಡಗು "ಸೆಟ್ಟೆಬೆಲ್ಲೋ" ಮೇಲೆ ಇತ್ತೀಚೆಗೆ ನಡೆದ ಕ್ಷಿಪಣಿ ದಾಳಿಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ಹಡಗಿನಲ್ಲಿ ಒಟ್ಟು 28 ಸಿಬ್ಬಂದಿ ಇದ್ದು, ಅವರಲ್ಲಿ 24 ಮಂದಿ ಭಾರತೀಯರಾಗಿದ್ದರು. ಈ ಪೈಕಿ 21 ಭಾರತೀಯರನ್ನು ರಕ್ಷಿಸಲಾಗಿತ್ತು. ಮೂವರು ನಾಪತ್ತೆಯಾಗಿದ್ದರು. ಭಾರತೀಯ ರಾಯಭಾರ ಕಚೇರಿ ಒಮಾನ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ನಾಪತ್ತೆಯಾದವರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿದೆ.

ಹಡಗಿನ ಮೇಲೆ ದಾಳಿ ಹೇಗೆ ನಡೆಯಿತು?

ಒಮಾನ್‌ನ ಸೋಹರ್ (Sohar) ಬಂದರಿನಿಂದ ಸುಮಾರು 20 ನಾಟಿಕಲ್ ಮೈಲುಗಳ ದೂರದಲ್ಲಿ ಸಂಚರಿಸುತ್ತಿದ್ದ ಪಲಾವ್ ಧ್ವಜ ಹೊಂದಿದ್ದ ತೈಲ ಟ್ಯಾಂಕರ್ ಸೆಟ್ಟೆಬೆಲ್ಲೋ ಹಡಗಿನ ಎಂಜಿನ್ ಕೊಠಡಿಗೆ ಕ್ಷಿಪಣಿ ಬಡಿದ ಪರಿಣಾಮ ಬೆಂಕಿ ಕಾಣಿಸಿಕೊಂಡಿತು. ಬಳಿಕ ಹಡಗಿನಿಂದ ತುರ್ತು ಸಹಾಯಕ್ಕಾಗಿ ಸಂದೇಶ ರವಾನಿಸಲಾಯಿತು.

ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಟಣೆಯ ಪ್ರಕಾರ, ಹಡಗು ಅಮೆರಿಕದ ನೌಕಾ ತಡೆ ಆದೇಶಗಳನ್ನು ಪಾಲಿಸದ ಕಾರಣ ಅಮೆರಿಕದ ಯುದ್ಧವಿಮಾನವು ನಿಖರ ದಾಳಿಯ ಮೂಲಕ ಹಡಗಿನ ಎಂಜಿನ್ ಕೊಠಡಿಯನ್ನು ಗುರಿಯಾಗಿಸಿಕೊಂಡಿತು.