ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನೌಕಾಪಡೆಯ ಮಾಜಿ ಮುಖ್ಯಸ್ಥ, ಪತ್ನಿಗೆ ನೋಟಿಸ್; SIRಗಾಗಿ ಹೆಚ್ಚಿನ ದಾಖಲೆ ಕೇಳಿದ ಚುನಾವಣಾ ಅಧಿಕಾರಿಗಳು!

voter ID verification: ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ಮತ್ತು ಅವರ ಪತ್ನಿಗೆ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿರುವ ಘಟನೆ ವರದಿಯಾಗಿದೆ. ಈ ಸಂದರ್ಭದಲ್ಲಿ ಅಧಿಕೃತ ದಾಖಲೆಗಳು ಮತ್ತು ಹೆಚ್ಚುವರಿ ಮಾಹಿತಿಯನ್ನು ಒದಗಿಸಲು ಸೂಚನೆ ನೀಡಲಾಗಿದೆ. ಇದು ಸಾರ್ವಜನಿಕರಲ್ಲಿ ಚರ್ಚೆಗೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದ ಚುನಾವಣಾ ಆಯೋಗವು ಚುನಾವಣಾ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಪ್ರಕ್ರಿಯೆಯ ಭಾಗವಾಗಿ, ತಮ್ಮ ಗುರುತನ್ನು ದೃಢೀಕರಿಸಲು ಸಭೆಗೆ ಹಾಜರಾಗುವಂತೆ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ (ನಿವೃತ್ತ) ಅವರಿಗೆ ನೋಟಿಸ್ ಜಾರಿ ಮಾಡಿದೆ.

ನಿವೃತ್ತಿಯ ನಂತರ ಗೋವಾದಲ್ಲಿ ನೆಲೆಸಿರುವ ಅಡ್ಮಿರಲ್ ಪ್ರಕಾಶ್, ಅಗತ್ಯ ಮಾಹಿತಿಯನ್ನು ಪಡೆಯಲು ಸಾಧ್ಯವಾಗದಿದ್ದರೆ SIR ಅರ್ಜಿಗಳನ್ನು ಪರಿಷ್ಕರಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಹಿರಿಯ ಅಧಿಕಾರಿಯೊಬ್ಬರು, 2002ರಲ್ಲಿ ಕೊನೆಯದಾಗಿ ನವೀಕರಿಸಲಾದ ಮತದಾರರ ಪಟ್ಟಿಯಲ್ಲಿ ಅವರ ವಿವರಗಳು ಕಾಣಿಸಿಕೊಳ್ಳುತ್ತಿಲ್ಲ ಹಾಗೂ ಅವರು ಅನ್‌ಮ್ಯಾಪ್ಡ್ ವರ್ಗಕ್ಕೆ ಸೇರುತ್ತಾರೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೆ ಆಯೋಗ ಸಜ್ಜಾಗುತ್ತಿರುವುದು ಕಳವಳಕಾರಿ: ಡಾ.ಆನಂದ್ ಕುಮಾರ್

ಕೆಲ ಎಕ್ಸ್ ಬಳಕೆದಾರರು, ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ್ ಅವರ PPO (ಪಿಂಚಣಿ ಪಾವತಿ ಆದೇಶ) ಹಾಗೂ ಜೀವಿತ ಪ್ರಮಾಣಪತ್ರ ಈಗಾಗಲೇ ಸರ್ಕಾರದ ಡೇಟಾಬೇಸ್‌ಗಳಲ್ಲಿ ಲಭ್ಯವಿರುವಾಗ, SIR ತಂಡಕ್ಕೆ ಇನ್ನೇನು ಮಾಹಿತಿಯ ಅಗತ್ಯವಿದೆ ಎಂದು ಪ್ರಶ್ನಿಸಿದ್ದಾರೆ.

ದಕ್ಷಿಣ ಗೋವಾದ ಕಲೆಕ್ಟರ್ ಕೂಡ ಆಗಿರುವ ಕ್ಲೀಟಸ್, ನೌಕಾಪಡೆಯ ಮಾಜಿ ಸೈನಿಕರ ಗಣತಿ ನಮೂನೆಯನ್ನು ಪರಿಶೀಲಿಸುವುದಾಗಿ ಹೇಳಿದರು. ನಂತರ ಸಂಬಂಧಿತ ಅಧಿಕಾರಿಗಳು ಅವರೊಂದಿಗೆ ಸಂಪರ್ಕ ಸಾಧಿಸಲಿದ್ದಾರೆ ಎಂದು ಅವರು ತಿಳಿಸಿದರು.

1971ರ ಭಾರತ–ಪಾಕಿಸ್ತಾನ ಯುದ್ಧದಲ್ಲಿ ತಮ್ಮ ಪಾತ್ರಕ್ಕಾಗಿ ವೀರ ಚಕ್ರ ಪ್ರಶಸ್ತಿ ಪಡೆದಿರುವ ಅಡ್ಮಿರಲ್ ಅರುಣ್ ಪ್ರಕಾಶ್ ಅವರಿಗೆ ಹಿಯರಿಂಗ್ ನೋಟಿಸ್ ರಚನೆಯಾದ ಬಳಿಕ ತಮ್ಮ ಗುರುತನ್ನು ದೃಢೀಕರಿಸುವ ಸಲುವಾಗಿ ಚುನಾವಣಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಈ ನೋಟಿಸ್ ಆನ್‌ಲೈನ್‌ನಲ್ಲಿ ಚರ್ಚೆಗೆ ಕಾರಣವಾದ ಹಿನ್ನೆಲೆಯಲ್ಲಿ, ಅಡ್ಮಿರಲ್ ಅರುಣ್ ಪ್ರಕಾಶ್ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನು ನಿವೃತ್ತಿಯಾದ ಕಳೆದ 20 ವರ್ಷಗಳಿಂದ ಯಾವುದೇ ವಿಶೇಷ ಸೌಲಭ್ಯಗಳನ್ನು ಬೇಡಿಕೊಂಡಿಲ್ಲ, ಬೇಡಿಕೆಯನ್ನೂ ಹಾಕಿಲ್ಲ. ನನ್ನ ಪತ್ನಿ ಮತ್ತು ನಾನು ಅಗತ್ಯವಿದ್ದಂತೆ SIR ಫಾರ್ಮ್‌ಗಳನ್ನು ಭರ್ತಿ ಮಾಡಿದ್ದೇವೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಗೋವಾ ಕರಡು ಮತದಾರರ ಪಟ್ಟಿ–2026ರಲ್ಲಿ ನಮ್ಮ ಹೆಸರುಗಳು ಕಾಣಿಸಿಕೊಂಡಿದ್ದು, ನಮಗೆ ಸಂತೋಷ ತಂದಿದೆ. ಆದರೂ, ನಾವು ಚುನಾವಣಾ ಆಯೋಗದ ನೋಟಿಸ್‌ಗೆ ಅನುಗುಣವಾಗಿ ನಡೆದುಕೊಳ್ಳುತ್ತೇವೆ ಎಂದು ಬರೆದಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ ಅಡ್ಮಿರಲ್ ಅರುಣ್ ಪ್ರಕಾಶ್ ಅವರು ಚುನಾವಣಾ ಆಯೋಗವನ್ನು ಉಲ್ಲೇಖಿಸಿ ಬರೆದಿದ್ದಾರೆ. SIR ಫಾರ್ಮ್‌ಗಳು ಅಗತ್ಯ ಮಾಹಿತಿಯನ್ನು ಪಡೆಯುವಂತೆ ಇರದಿದ್ದರೆ ಅವುಗಳನ್ನು ಪರಿಷ್ಕರಿಸಬೇಕು. BLO ನಮ್ಮ ಮನೆಗೆ ಮೂರು ಬಾರಿ ಭೇಟಿ ನೀಡಿದ್ದರು, ಹೆಚ್ಚುವರಿ ಮಾಹಿತಿಯ ಅಗತ್ಯವಿದ್ದರೆ ಅಂದೇ ಕೇಳಬಹುದಿತ್ತು. ನಾವು 82-78 ವರ್ಷದ ದಂಪತಿ. ನಮಗೆ 18 ಕಿಮೀ ದೂರದ ಎರಡು ವಿಭಿನ್ನ ದಿನಾಂಕಗಳಲ್ಲಿ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.