ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲಷ್ಕರ್‌-ಇ-ತೋಯ್ಬಾದ ನಾಲ್ಕು ಮಂದಿ ಉಗ್ರರು ಮಟಾಶ್‌

ಲಷ್ಕರ್‌-ಇ-ತೋಯ್ಬಾದ ನಾಲ್ಕು ಮಂದಿ ಉಗ್ರರು ಮಟಾಶ್‌

ಶ್ರೀನಗರ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಲಷ್ಕರ್‌-ಇ-ತೋಯ್ಬಾದ ನಾಲ್ಕು ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ. ಸೋಫಿಯನ್ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಗಡಿ ದಾಟಿ ಬಂದಿದ್ದ ಉಗ್ರರನ್ನು ಸದೆಬಡಿಯಲಾಯಿತು. ಖಚಿತ ಮಾಹಿತಿ ಪ್ರಕಾರ, ಸೇನೆ ಯೋಧರು, ಸಿಆರ್‍ಪಿಎಫ್ ಮತ್ತು ಜಮ್ಮುಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಉಗ್ರರು ಅಡಗಿರುವ ತಾಣವನ್ನು ಸುತ್ತುವರೆದು ಸೆರೆ ಹಿಡಿಯಲು ಪ್ರಯತ್ನಿಸಿದರು. ಈ ವೇಳೆ ಉಗ್ರರು ಗುಂಡು ಹಾರಿಸಿದಾಗ ಪ್ರತಿ ದಾಳಿ ನಡೆಸಿದ್ದು, 2 ಗಂಟೆಗಳ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಮೃತರ ಪೈಕಿ ಇಬ್ಬರು ಲಷ್ಕರಿ-ತೋಯ್ಬಾದ ಉಗ್ರಗಾಮಿಗಳು ಎಂದು ಮೂಲಗಳು ತಿಳಿಸಿವೆ. ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ https://www.facebook.com/Vishwavanidaily