ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸನಾತನ ಧರ್ಮಕ್ಕೆ ವಿರೋಧ, ಸಂಸ್ಕೃತ ಸತ್ತ ಭಾಷೆ...: ಉದಯನಿಧಿ ಸ್ಟಾಲಿನ್ ಹುಟ್ಟು ಹಾಕಿದ ವಿವಾದ ಒಂದೆರಡಲ್ಲ; ಡಿಎಂಕೆ ನಾಯಕನ ಹಿಂದಿನ ಕಾಂಟ್ರವರ್ಸಿಗಳ ವಿವರ ಇಲ್ಲಿದೆ

Sanatana Row to Remarks on Trisha: ಸದಾವಿವಾದದಿಂದಲೇಮಾಡುವ ತಮಿಳುನಾಡಿನ ಮಾಜಿ ಡಿಸಿಎಂ ಉದಯನಿದಿ ಸ್ಟಾಲಿನ್‌ ಸದ್ಯ ತ್ರಿಷಾ ವಿರುದ್ಧ ಬಳಸಿದ್ದಾರೆ ಎನ್ನಲಾದ ಮಾತು ಭಾರಿ ಚರ್ಚೆಗೆ ಕಾರಣವಾಗಿದೆ. ಸನಾತನ ಧರ್ಮವು ಜಾತಿ ಮತ್ತು ಲಿಂಗ ತಾರತಮ್ಯವನ್ನು ಉತ್ತೇಜಿಸುತ್ತದೆ ಎಂದು ಹಿಂದೊಮ್ಮೆ ಹೇಳುವ ಮೂಲಕ ಅವರು ರಾಜಕೀಯ ಬಿರುಗಾಳಿ ಎಬ್ಬಿಸಿದ್ದರು. ಇಲ್ಲಿದೆ ವಿವಾದಗಳ ವಿವರ.

ಉದಯನಿಧಿ ಸ್ಟಾಲಿನ್‌ (ಸಂಗ್ರಹ ಚಿತ್ರ)

ಚೆನ್ನೈ, ಆ. 4: ಜಪ್ರಿಯ ನಟಿ, ಬಹುಭಾಷಾ ಕಲಾವಿದೆ ತ್ರಿಷಾ ಕೃಷ್ಣನ್‌ (Trisha Krishnan) ಕುರಿತು ತಮಿಳುನಾಡು ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್‌ (Udhayanidhi Stalin) ಆಡಿದ್ದಾರೆ ಎನ್ನಲಾದ ಮಾತು ಸದ್ಯ ವಿವಾದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿ ಬಿಡುಗಡೆ ಮಾಡಿದ್ದಾರೆ. ತ್ರಿಷಾ ಕೃಷ್ಣನ್‌ ವಿರುದ್ಧದ ಹೇಳಿಕೆ ನೀಡಿದ ಕಾರಣ ಮುಖ್ಯಮಂತ್ರಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪೊಲೀಸರು ಮತ್ತು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (ಎನ್‌ಸಿಡಬ್ಲ್ಯು) ದೂರು ನೀಡಿದ ನಂತರ ಮಂಗಳವಾರ (ಆಗಸ್ಟ್‌ 4) ಡಿಎಂಕೆ ನಾಯಕನನ್ನು ಬಂಧಿಸಲಾಗಿತ್ತು. ಬಳಿಕ ಮದ್ರಾಸ್‌ ಹೈಕೋರ್ಟ್‌ ಬಿಡುಗಡೆಗೆ ಆದೇಶ ನೀಡಿತ್ತು.

ಅಂದಹಾಗೆ ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿರುವುದು ಇದೇ ಮೊದಲಲ್ಲ. ಸನಾತನ ಧರ್ಮವು ಜಾತಿ ಮತ್ತು ಲಿಂಗ ತಾರತಮ್ಯವನ್ನು ಉತ್ತೇಜಿಸುತ್ತದೆ ಎಂದು ಹೇಳುವ ಮೂಲಕ 2023ರಲ್ಲಿ ಉದಯನಿಧಿ ರಾಜಕೀಯ ಬಿರುಗಾಳಿ ಎಬ್ಬಿಸಿದ್ದರು. ಚೆನ್ನೈನಲ್ಲಿ ನಡೆದ ಬರಹಗಾರರ ಸಮ್ಮೇಳನದಲ್ಲಿ ಮಾತನಾಡಿದ್ದ ಅವರು, ಸನಾತನ ಧರ್ಮವು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೇಳುತ್ತಾ, ಈ ನಂಬಿಕೆಯನ್ನು ಮಲೇರಿಯಾ ಮತ್ತು ಡೆಂಗ್ಯೂನಂತಹ ರೋಗಗಳಿಗೆ ಹೋಲಿಸಿದ್ದರು.

ತಮಿಳುನಾಡು ವಿಧಾನಸಭೆಯಲ್ಲಿ ಮಾಡಿದ ಭಾಷಣದಲ್ಲಿ ಅವರು ತಮ್ಮ ನಿಲುವನ್ನು ಪುನರುಚ್ಚರಿಸಿದರು. ವೈಯಕ್ತಿಕ ನಂಬಿಕೆಗಳಿಗಿಂತ ವ್ಯವಸ್ಥಿತ ಸಾಮಾಜಿಕ ಶ್ರೇಣಿಯ ವಿರುದ್ಧ ಹೋರಾಟದತ್ತ ಗಮನ ಹರಿಸಬೇಕು ಎಂದು ಅವರು ಹೇಳಿದ್ದರು. ಅವರ ಹೇಳಿಕೆಯು ಭಾರಿ ವಿವಾದಕ್ಕೆ ಕಾರಣವಾಯಿತು. ಬಿಜೆಪಿ ಮತ್ತು ಇತರ ಹಿಂದೂ ಗುಂಪುಗಳು ಡಿಎಂಕೆ ನಾಯಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಉಯದನಿಧಿ ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ ಮತ್ತು ಹಿಂದೂಗಳ ಸಾಂಸ್ಕೃತಿಕ ನರಮೇಧವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದವು.

ಉದಯನಿಧಿ ಅಲ್ಲ ಅಸಭ್ಯ ನಿಧಿ: ನಟಿ ತ್ರಿಷಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗೆ ಟಿವಿಕೆ ಆಕ್ರೋಶ

ಅವರ ದ್ವೇಷ ಭಾಷಣವನ್ನು ಕಟುವಾದ ಶಬ್ದಗಳಲ್ಲಿ ವಿರೋಧಿಸಿದ್ದ ಸುಪ್ರೀಂ ಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದವು. ಇನ್ನು 2025ರ ನವೆಂಬರ್‌ನಲ್ಲಿ ಅವರು ಸಂಸ್ಕೃತವನ್ನು ಸತ್ತ ಭಾಷೆ ಎಂದು ಉಲ್ಲೇಖಿಸುವ ಮೂಲಕ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದರು. ಕೇಂದ್ರ ಸರ್ಕಾರವು ಹಿಂದಿ ಮತ್ತು ಸಂಸ್ಕೃತ ಭಾಷೆಗಳಿಗೆ ನೀಡುತ್ತಿರುವ ಅನುದಾನ ಹಾಗೂ ಅವುಗಳ ಪ್ರಚಾರವನ್ನು ಟೀಕಿಸುವ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಬಿಜೆಪಿ ಈ ಹೇಳಿಕೆಗಳನ್ನು ಖಂಡಿಸಿತು. ಹಿರಿಯ ನಾಯಕರಾದ ತಮಿಳಿಸೈ ಸೌಂದರರಾಜನ್ ಮತ್ತು ಗೌರವ್ ಭಾಟಿಯಾ ಯಾವುದೇ ಭಾಷೆಯನ್ನು ಸತ್ತಿದೆ ಎಂದು ಕರೆಯುವ ಹಕ್ಕು ಯಾರಿಗೂ ಇಲ್ಲ ಎಂದಿದ್ದರು. ದೈನಂದಿನ ಪ್ರಾರ್ಥನೆಗಳು ಮತ್ತು ಸಾಂಸ್ಕೃತಿಕ ಆಚರಣೆಗಳ ಮೂಲಕ ಭಾಷೆ ಜೀವಂತವಾಗಿದೆ ಎಂದು ಹೇಳಿದ್ದರು.

ದ್ರಾವಿಡ ಸಿದ್ಧಾಂತ ಇಸ್ಲಾಂ ಧರ್ಮದ ತತ್ವಗಳು ಮೂಲಭೂತವಾಗಿ ಒಂದೇ ಆಗಿವೆ ಎಂದು 2026ರ ಮಾರ್ಚ್‌ನಲ್ಲಿ ಉದಯನಿಧಿ ಸ್ಟಾಲಿನ್ ತಿಳಿಸಿದ್ದರು. ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಡಿಎಂಕೆ ಅಲ್ಪಸಂಖ್ಯಾತರ ಕಲ್ಯಾಣ ಹಕ್ಕುಗಳ ವಿಭಾಗ ಆಯೋಜಿಸಿದ್ದ ಇಫ್ತಾರ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಡಿಎಂಕೆ ನಾಯಕ, ಸಹೋದರತ್ವ ಮತ್ತು ಏಕತೆ ಇರುವವರೆಗೆ ಎಷ್ಟೇ ಪ್ರಯತ್ನಗಳು ಅಥವಾ ಪಿತೂರಿಗಳು ನಡೆದರೂ, ಡಿಎಂಕೆ ಮತ್ತು ಮುಸ್ಲಿಂ ಸಮುದಾಯದ ನಡುವಿನ ಸಂಬಂಧವನ್ನು ಮುರಿಯಲು ಯಾರಿಗೂ ಸಾಧ್ಯವಾಗುವುದಿಲ್ಲ ಎಂದು ವಿವರಿಸಿದ್ದರು.

ಬಿಜೆಪಿಯನ್ನು ಟೀಕಿಸಿದ್ದ ಅವರು, ಬಿಜೆಪಿ ಎಷ್ಟೇ ತೊಂದರೆ ಕೊಡಲು ಪ್ರಯತ್ನಿಸಿದರೂ ಡಿಎಂಕೆಯು ಮುಸ್ಲಿಂ ಸಮುದಾಯದ ಪರವಾಗಿ ನಿಲ್ಲುತ್ತದೆ ಎಂದು ಹೇಳಿದ್ದರು.