ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗ್ಯಾಸ್ ಟ್ಯಾಂಕರ್ ಅಪಘಾತ; ಮುಂಬೈ-ಪುಣೆ ಕಾರಿಡಾರ್‌ನಲ್ಲಿ ಸಂಚಾರ ಅಸ್ತವ್ಯಸ್ತ: 15 ಗಂಟೆ ಟ್ರಾಫಿಕ್‌ ಜಾಮ್‌

Gas tanker accident: ಮುಂಬೈ–ಪುಣೆ ಕಾರಿಡಾರ್‌ನಲ್ಲಿ ಗ್ಯಾಸ್ ಟ್ಯಾಂಕರ್ ಅಪಘಾತ ಸಂಭವಿಸಿ ಸಂಚಾರ ಅಸ್ತವ್ಯಸ್ತವಾಗಿದೆ. ಪೊಲೀಸರು ಮತ್ತು ಸಂಬಂಧಿತ ಅಧಿಕಾರಿಗಳು ವಾಹನ ಸವಾರರು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವಂತೆ ಸಲಹೆ ನೀಡಿದ್ದಾರೆ. ಅಪಘಾತದ ಪರಿಣಾಮವಾಗಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ.

ಮುಂಬೈ-ಪುಣೆ ಕಾರಿಡಾರ್‌ನಲ್ಲಿ ಸಂಚಾರ ಅಸ್ತವ್ಯಸ್ತ

ಮುಂಬೈ, ಫೆ. 4: ಮಹಾರಾಷ್ಟ್ರದ ಅದೋಶಿ ಸುರಂಗದ ಬಳಿ ಗ್ಯಾಸ್ ಟ್ಯಾಂಕರ್ ಅಪಘಾತಕ್ಕೀಡಾದ (Gas tanker accident) ನಂತರ ಮುಂಬೈ-ಪುಣೆ ಕಾರಿಡಾರ್‌ನಲ್ಲಿ (Mumbai-Pune corridor) ಸಂಚಾರ ಅಸ್ತವ್ಯಸ್ತವಾಗಿದ್ದು, ಭಾರಿ ಟ್ರಾಫಿಕ್‌ ಜಾಮ್‌ ಉಂಟಾಗಿದೆ. ಟ್ಯಾಂಕರ್‌ನಿಂದ ಉಂಟಾದ ಅನಿಲ ಸೋರಿಕೆಯಿಂದಾಗಿ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇ ಮತ್ತು ಹಳೆಯ ಮುಂಬೈ-ಪುಣೆ ಹೆದ್ದಾರಿ (ಎನ್‌ಎಚ್ -48) ಎರಡರಲ್ಲೂ ದೊಡ್ಡ ಅಡಚಣೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯಿಂದಾಗಿ ಸಂಚಾರಕ್ಕೆ ದೀರ್ಘ ಅಡಚಣೆ ಉಂಟಾಗಿದ್ದು, ಅಧಿಕಾರಿಗಳು ಸಂಚಾರವನ್ನು ನಿರ್ಬಂಧಿಸಬೇಕಾಯಿತು. ಲೋನಾವಾಲ-ಖಂಡಲಾ ಘಾಟ್ ವಿಭಾಗದಲ್ಲಿ ಸಂಚರಿಸದಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಮುಂಬೈ ಮತ್ತು ಪುಣೆ ನಡುವೆ ಪ್ರಯಾಣಿಸುವ ವಾಹನ ಚಾಲಕರು ತಮ್ಮ ಪ್ರಯಾಣವನ್ನು ಎಚ್ಚರಿಕೆಯಿಂದ ಯೋಜಿಸಲು ಮತ್ತು ಸಂಚಾರ ಸಲಹೆಗಳನ್ನು ಅನುಸರಿಸಲು ಕೋರಲಾಗಿದೆ.

ಸಾಗರ ಸಮೀಪ ಭೀಕರ ಅಪಘಾತ; ಕ್ಯಾಂಟರ್-ಕಾರು ಡಿಕ್ಕಿಯಾಗಿ ಇಬ್ಬರ ದುರ್ಮರಣ

ಸೂಚಿಸಲಾದ ಪರ್ಯಾಯ ಮಾರ್ಗಗಳು

ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು, ಅಧಿಕಾರಿಗಳು ಈ ಕೆಳಗಿನ ಪರ್ಯಾಯ ಮಾರ್ಗಗಳನ್ನು ಶಿಫಾರಸು ಮಾಡಿದ್ದಾರೆ:

  • ತಮ್ಹಿನಿ ಘಾಟ್ ಮಾರ್ಗ: ದಕ್ಷಿಣ ಮುಂಬೈ ಮತ್ತು ನವಿ ಮುಂಬೈಯಿಂದ ಪೌಡ್, ತಮ್ಹಿನಿ ಘಾಟ್, ಮಂಗಾವ್ ಮತ್ತು ಇಂದಾಪುರ ಮೂಲಕ ಪುಣೆಗೆ.
  • ಮಲ್ಶೇಜ್ ಘಾಟ್ ಮಾರ್ಗ: ಥಾಣೆ, ಕಲ್ಯಾಣ್ ಮತ್ತು ಉಪನಗರ ಪ್ರದೇಶಗಳು ಚಕನ್, ನಾರಾಯಣಗಾಂವ್, ಮಲ್ಶೆಜ್ ಘಾಟ್ ಮತ್ತು ಮುರ್ಬಾದ್ ಮೂಲಕ ಪುಣೆಗೆ.
  • ಭೀಮಾಶಂಕರ್-ಮಂಚಾರ್ ಮಾರ್ಗ: ಉತ್ತರ ಮುಂಬೈ ಮತ್ತು ಪಾಲ್ಘರ್‌ನಿಂದ ಮಂಚಾರ್, ಜುನ್ನಾರ್ ಮತ್ತು ಮಲ್ಶೆಜ್ ಮಾರ್ಗದ ಮೂಲಕ ಪುಣೆಗೆ.

ರಾಯಗಢ ಜಿಲ್ಲೆಯ ಅದೋಶಿ ಸುರಂಗದ ಬಳಿ ಮಂಗಳವಾರ (ಫೆಬ್ರವರಿ 3) ಸಂಜೆ 5 ಗಂಟೆ ಸುಮಾರಿಗೆ ಟ್ಯಾಂಕರ್ ಪಲ್ಟಿಯಾಗಿದೆ. ವಾಹನವು ಅತಿ ವೇಗದಲ್ಲಿ ಚಲಿಸುತ್ತಿದ್ದಾಗ ಕೆಳಮುಖವಾದ ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡು ಉರುಳಿಬಿದ್ದಿದೆ.

ಟ್ರಾಫಿಕ್‌ ಜಾಮ್‌ನ ದೃಶ್ಯ:



ಅಪಘಾತದ ಸ್ವಲ್ಪ ಸಮಯದ ನಂತರ, ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿರುವುದು ಕಂಡುಬಂದಿದೆ. ಟ್ಯಾಂಕರ್‌ನಲ್ಲಿ ಹೆಚ್ಚು ದಹಿಸುವ ಪ್ರೊಪಿಲೀನ್ ಅನಿಲವಿತ್ತು. ಮುನ್ನೆಚ್ಚರಿಕೆಯಾಗಿ, ಯಾವುದೇ ಸಂಭಾವ್ಯ ಅಪಾಯ ಉಂಟಾಗದಂತೆ ತಡೆಯಲು ಪೊಲೀಸರು ತಕ್ಷಣವೇ ಮುಂಬೈ ಕಡೆಗೆ ಸಂಚಾರವನ್ನು ಸ್ಥಗಿತಗೊಳಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದ್ಯಪಾನ ಮಾಡಿ ಸರಣಿ ಅಪಘಾತ ಎಸಗಿದ ನಟ ಮಯೂರ್ ಪಟೇಲ್

ಅಪಘಾತ ನಡೆದ ಸ್ಥಳದ ಬಳಿ ವಾಹನಗಳು ಸಿಕ್ಕಿಹಾಕಿಕೊಂಡಿದ್ದು, ಸಂಚಾರ ದಟ್ಟಣೆ 15 ಗಂಟೆಗಳಿಗೂ ಹೆಚ್ಚು ಕಾಲ ಮುಂದುವರಿದಿದೆ. ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಪ್ರಯಾಣಿಕರು ಆಹಾರ, ಕುಡಿಯುವ ನೀರು ಅಥವಾ ಶೌಚಾಲಯ ಸೌಲಭ್ಯಗಳಿಲ್ಲದೆ ದೀರ್ಘ ಸರತಿ ಸಾಲಿನಲ್ಲಿ ಪರದಾಡಬೇಕಾಯಿತು.

ತಾಪಮಾನ ಏರಿಳಿತದಿಂದಾಗಿ ಪ್ರಯಾಣಿಕರು ಕುಡಿಯಲು ನೀರು, ಊಟವಿಲ್ಲದೆ ಪರಿತಪಿಸಬೇಕಾಯಿತು. ವಾಹನಗಳ ಒಳಗೆ ಗಂಟೆಗಟ್ಟಲೆ ಗಾಳಿ ಇಲ್ಲದೆ ಕುಳಿತುಕೊಳ್ಳುವಂತಾಯಿತು. ಮಕ್ಕಳ ಕಥೆಯಂತೂ ಕೇಳುವುದೇ ಬೇಡ. ಕಿರಿಕಿರಿಗೊಂಡ ಮಕ್ಕಳನ್ನು ಶಾಂತಗೊಳಿಸಲು ಪೋಷಕರು ಹೆಣಗಾಡಿದರು. ವಯಸ್ಸಾದ ಪ್ರಯಾಣಿಕರು ದೇಹದ ನೋವು, ನಿರ್ಜಲೀಕರಣದಿಂದ ಬಳಲಿದರು. ಘಟನೆ ನಡೆದು 24 ಗಂಟೆ ಕಳೆದ ಬಳಿಕವೂ ಸಂಚಾರ ವ್ಯವಸ್ಥೆ ಸರಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.