Rahul Gandhi: ಆದಷ್ಟು ಬೇಗ ಮದುವೆ ಆಗಿ, ನಾವು ಕಾಯ್ತಾ ಇದ್ದೇವೆ; ರಾಹುಲ್ ಗಾಂಧಿಗೆ ಮನವಿ ಮಾಡಿದ ಅಂಗಡಿ ಮಾಲೀಕ
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ 235 ವರ್ಷ ಹಳೆಯ ದೆಹಲಿ ಬೇಕರಿಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ನೀಡಿದ್ದರು. ದೆಹಲಿಯ ಐತಿಹಾಸಿಕ ಗಂಟೆವಾಲ ಸ್ವೀಟ್ ಶಾಪ್‌ಗೆ ಭೇಟಿ ನೀಡಿ ಸಿಹಿ ತಿನಿಸುಗಳನ್ನು ರಾಹುಲ್ ತಯಾರಿಸಿದರು.

-

ನವದೆಹಲಿ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ 235 ವರ್ಷ ಹಳೆಯ ದೆಹಲಿ ಬೇಕರಿಗೆ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿ ನೀಡಿದ್ದರು. ದೆಹಲಿಯ ಐತಿಹಾಸಿಕ ಗಂಟೆವಾಲ ಸ್ವೀಟ್ ಶಾಪ್‌ಗೆ ಭೇಟಿ ನೀಡಿ ಸಿಹಿ ತಿನಿಸುಗಳನ್ನು ರಾಹುಲ್ ತಯಾರಿಸಿದರು. ಇಷ್ಟೇ ಅಲ್ಲ ಮಾಲೀಕರ ಜೊತೆಗಿನ ಮಾತುಕತೆ ನಡೆಸಿದರು. ಈ ವೇಳೆ ಅಂಗಡಿ ಮಾಲೀಕ ಸುಶಾಂತ್ ಜೈನ್, ರಾಹುಲ್ ಜಿ ಬೇಗ ಮದ್ವೆ ಆಗಿ, ನಿಮ್ಮ ಮದ್ವೆಗೆ ಸಿಹಿ ತಿಂಡಿ ಆರ್ಡರ್ ಪಡೆಯಲು ನಾವು ಕಾಯ್ತಿದ್ದೇವೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಸ್ವೀಟ್ ಶಾಪ್‌ಗೆ ಭೇಟಿ ನೀಡಿ ಜಿಲೇಬಿ ಸೇರಿದಂತೆ ಕೆಲ ಸಿಹಿ ತಿನಿಸುಗಳನ್ನು ತಯಾರಿಸಿದ್ದಾರೆ.
ಈ ವೇಳೆ ಅಂಗಡಿ ಮಾಲೀಕ ಸುಶಾಂತ್ ಜೈನ್, ರಾಹುಲ್ ಜಿ ಬೇಗ ಮದ್ವೆ ಆಗಿ, ನಿಮ್ಮ ಮದ್ವೆಗೆ ಸಿಹಿ ತಿಂಡಿ ಆರ್ಡರ್ ಪಡೆಯಲು ನಾವು ಕಾಯ್ತಿದ್ದೇವೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ನಿಮ್ಮ ಮದುವೆಗೆ ನಾವೇ ಸಿಹಿ ತಿನಿಸುಗಳನ್ನು ತಯಾರಿಸಿಕೊಡುತ್ತೇವೆ ಎಂದು ಅವರು ಹೇಳಿದ್ದಾರೆ. ರಾಹುಲ್ ಗಾಂಧಿ ಸ್ವೀಟ್ ಶಾಪ್‌ಗೆ ಭೇಟಿ ನೀಡಿ ಜಿಲೇಬಿ ಸೇರಿದಂತೆ ಕೆಲ ಸಿಹಿ ತಿನಿಸುಗಳನ್ನು ತಯಾರಿಸಿದ್ದಾರೆ. ದೆಹಲಿಯ ಗಂಟೆವಾಲ ಸ್ವೀಟ್ ಶಾಪ್‌ಗೆ ಸುದೀರ್ಘ ಇತಿಹಾಸವಿದೆ. ರಾಜೀವ್ ಗಾಂಧಿ ಕಾಲದಲ್ಲೇ ಈ ಸ್ವೀಟ್ ಶಾಪ್ ಅತ್ಯಂತ ಜನಪ್ರಿಯವಾಗಿತ್ತು. ಹಲವು ದಶಕಗಳಿಂದ ದೆಹಲಿಯಲ್ಲಿ ಸ್ವೀಟ್ಸ್ ವ್ಯವಹಾರದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ರಾಹುಲ್ ಗಾಂಧಿ ಭೇಟಿ ವೇಳೆ, ನಿಮ್ಮ ತಂದೆ ರಾಜೀವ್ ಗಾಂಧಿಗೆ ಜಿಲೇಬಿ ತುಂಬಾ ಇಷ್ಟದ ಸಿಹಿ ತಿಂಡಿಯಾಗಿತ್ತು.
ಈ ಸುದ್ದಿಯನ್ನೂ ಓದಿ: Rahul Gandhi: ರಾಹುಲ್ ಗಾಂಧಿಗೆ ನೊಬೆಲ್ ಕೊಡಿ, ಪ್ರಜಾಪ್ರಭುತ್ವ ಉಳಿಸುವಲ್ಲಿ ಅವರ ಪಾತ್ರ ದೊಡ್ಡದು; ಕಾಂಗ್ರೆಸ್ ನಾಯಕನಿಂದ ಒತ್ತಾಯ
ನೀವು ಟ್ರೈ ಮಾಡಿ, ಇದರ ಜೊತೆಗೆ ಅವರಿಗೆ ಬೇಸನ್ ಲಡ್ಡುಕೂಡ ತುಂಬಾ ಇಷ್ಟವಿತ್ತು ಎಂದಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಜಲೇಬಿ ಹಾಗೂ ಬೇಸನ್ ಲಡ್ಡು ಸ್ವೀಟ್ ಕೈಯಾರಿ ತಯಾರಿಸಿದ್ದಾರೆ. ಸ್ವೀಟ್ ಶಾಪ್ ಮಾಲೀಕ ಹಾಗೂ ಚೆಫ್ ಮಾರ್ಗದರ್ಶನದಲ್ಲಿ ಸ್ವೀಟ್ಸ್ ತಯಾರಿಸಿದ್ದಾರೆ. ಇಷ್ಟೇ ಅಲ್ಲ ಜಿಲೇಬಿ ಹಾಗೂ ಬೇಸನ್ ಲಡ್ಡು ಖರೀದಿಸಿದ್ದಾರೆ. ರಾಹುಲ್ ಗಾಂಧಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸ್ವೀಟ್ ಶಾಪ್ ಭೇಟಿಯ ವಿಡಿಯೋ ಹಂಚಿಕೊಂಡಿದ್ದಾರೆ. ಶತಮಾನಗಳ ಹಳೆಯ ಸ್ವೀಟ್ ಶಾಪ್‌ನಲ್ಲಿ ಸಿಹಿ ತಿನಿಸುಗಳನ್ನು ತಯಾರಿಸಿ ಸಂಭ್ರಮಿಸಿದ್ದೇನೆ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.