ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Election Commission of India: ಮತಗಳವು ಆರೋಪ ಸಾಬೀತುಪಡಿಸಲು ರಾಹುಲ್‌ ಗಾಂಧಿಗೆ 7 ದಿನಗಳ ಗಡುವು ನೀಡಿದ ಚುನಾವಣಾ ಆಯೋಗ

Gyanesh Kumar: ಎನ್‌ಡಿಎ ಸರ್ಕಾರ ಮತ್ತು ಚುನಾವಣೆ ಆಯೋಗವು ಶಾಮೀಲಾಗಿ ಮತಗಳ್ಳತನ ನಡೆಸಿದೆ ಎನ್ನುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಆರೋಪಕ್ಕೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ತಿರುಗೇಟು ನೀಡಿದ್ದಾರೆ. ಇದನ್ನು ಸಾಬೀತು ಪಡಿಸುವಂತೆ ಸವಾಲು ಹಾಕಿದೆ.

ಜ್ಞಾನೇಶ್‌ ಕುಮಾರ್‌

ದೆಹಲಿ: ಎನ್‌ಡಿಎ (NDA) ಸರ್ಕಾರ ಮತ್ತು ಚುನಾವಣೆ ಆಯೋಗವು (Election Commission of India) ಶಾಮೀಲಾಗಿ ಮತಗಳ್ಳತನ (Vote Chori) ನಡೆಸಿದೆ ಎನ್ನುವ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi) ಆರೋಪ ಸದ್ಯ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಈ ಆರೋಪವನ್ನು ನಿರಾಕರಿಸುತ್ತಲೇ ಬಂದಿರುವ ಚುನಾವಣೆ ಆಯೋಗ ಇದೀಗ ರಾಹುಲ್‌ ಗಾಂಧಿಗೆ ಇದನ್ನು ಸಾಬೀತು ಪಡಿಸುವಂತೆ ಸವಾಲು ಹಾಕಿದೆ. ಇದಕ್ಕಾಗಿ 7 ದಿನಗಳ ಗಡು ನೀಡಿದ್ದು, ಇಲ್ಲದಿದ್ದರೆ ಕ್ಷಮೆಯಾಚಿಸುವಂತೆ ಸೂಚಿಸಿದೆ.

ಮತಗಳವು ಆರೋಪವನ್ನು ಸಾಕ್ಷಿ ಸಮೇತ ಅಫಿಡವಿತ್‌ ಮೂಲಕ 7 ದಿನಗಳೊಳಗೆ ಸಲ್ಲಿಸಬೇಕು. ಇಲ್ಲದಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೋರಬೇಕು ಎಂದು ಚುನಾವಣಾ ಆಯೋಗ ಮತ್ತೊಮ್ಮೆ ರಾಹುಲ್‌ ಗಾಂಧಿಗೆ ತಾಕೀತು ಮಾಡಿದೆ.



ಈ ಸುದ್ದಿಯನ್ನೂ ಓದಿ: Election Commission of India: ಮತಗಳ್ಳತನ ಆರೋಪ ಸಾಬೀತಾಗದಿದ್ದರೆ ಕ್ಷಮೆಯಾಚಿಸಿ; ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗದ ಸವಾಲು

ಚುನಾವಣಾ ಆಯೋಗ ಹೇಳಿದ್ದೇನು?

ʼʼಅಫಿಡವಿತ್‌ಗೆ ಸಹಿ ಮಾಡಿ ಅಥವಾ ಕ್ಷಮೆಯಾಚಿಸಿ. ಇದು ಬಿಟ್ಟು 3ನೇ ಆಯ್ಕೆಗಳಿಲ್ಲ. ಒಂದುವೇಳೆ 7 ದಿನಗೊಳಗಾಗಿ ರಾಹುಲ್‌ ಗಾಂಧಿ ಸಾಕ್ಷಿ ಸಮೇತ ಅಫಿಡವಿತ್‌ ಸಲ್ಲಿಸದಿದ್ದರೆ ಆರೋಪಗಳೆಲ್ಲ ಸುಳ್ಳು ಎಂದು ಪರಿಗಣಿಸಲಾಗುತ್ತದೆʼʼ ಎಂಬುದಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ (Gyanesh Kumar) ತಿಳಿಸಿದರು. ದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಇದಕ್ಕೂ ಮೊದಲು ಕಾಂಗ್ರೆಸ್ ಸಂಸದ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಬಿಹಾರದ ಸಸಾರಂನಲ್ಲಿ ವೋಟರ್‌ ಅಧಿಕಾರ್‌ ಯಾತ್ರಾ (Voter Adhikar Yatra) ಅಭಿಯಾನಕ್ಕೆ ಚಾಲನೆ ನೀಡಿ ಚುನಾವಣಾ ಆಯೋಗವು ತನ್ನ ಬಳಿ ಮಾತ್ರ ಅಫಿಡವಿತ್‌ ಸಲ್ಲಿಸುವಂತೆ ಕೇಳಿದೆ. ಆದರೆ ಬಿಜೆಪಿ ನಾಯಕರಿಗೆ ಅಫಿಡವಿತ್‌ ಸಲ್ಲಿಸುವಂತೆ ಸೂಚಿಸಿಲ್ಲ ಎಂದು ಆರೋಪಿಸಿದ್ದರು.

"ನಾನು ಮತಗಳವು ಕುರಿತು ಪತ್ರಿಕಾಗೋಷ್ಠಿ ನಡೆಸಿದಾಗ, ಚುನಾವಣಾ ಆಯೋಗ ನನ್ನಿಂದ ಅಫಿಡವಿಟ್ ಕೇಳಿತು. ಆದರೆ ಕೆಲವು ದಿನಗಳ ಹಿಂದೆ ಬಿಜೆಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿದಾಗ, ಅವರಿಂದ ಯಾವುದೇ ಅಫಿಡವಿಟ್ ಕೇಳಿರಲಿಲ್ಲ. ಆಯೋಗವು 'ನಿಮ್ಮ ಡೇಟಾ ಸರಿಯಾಗಿದೆ ಎಂದು ಅಫಿಡವಿಟ್ ಸಲ್ಲಿಸಿ' ಎಂದು ಹೇಳುತ್ತದೆ. ಈ ಡೇಟಾ ಚುನಾವಣಾ ಆಯೋಗಕ್ಕೆ ಸೇರಿದೆ. ನನ್ನಿಂದ ಅಫಿಡವಿಟ್ ಕೇಳುತ್ತಿರುವುದು ಏಕೆ?" ಎಂದು ಗಾಂಧಿ ಪ್ರಶ್ನಿಸಿದ್ದರು.

ಜ್ಞಾನೇಶ್‌ ಕುಮಾರ್‌ ಅಸಮಾಧಾನ

ರಾಗುಲ್‌ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿದ ಜ್ಞಾನೇಶ್‌ ಕುಮಾರ್‌, ʼʼಚುನಾವಣಾ ಆಯೋಗದ ಹೆಗಲ ಮೇಲೆ ಬಂದೂಕು ಹಿಡಿದು ಮತದಾರರನ್ನು ಗುರಿಯಾಗಿಸಿಕೊಂಡು ರಾಜಕೀಯ ಮಾಡುತ್ತಿರುವಾಗ ಚುನಾವಣಾ ಆಯೋಗವು ಮತದಾರರೊಂದಿಗೆ ನಿರ್ಭಯವಾಗಿ ನಿಂತಿದೆ. ಮತಗಳ್ಳತನ ಆಗಿದೆ ಎನ್ನುವ ಆರೋಪ ಸರಿಯಾದುದಲ್ಲ. ಸುಳ್ಳು ಹೇಳುವ ಮೂಲಕ ತಾವು ಸಂವಿಧಾನವನ್ನು ಅಪಮಾನಿಸುತ್ತಿದ್ದೀರಿʼʼ ಎಂದು ಹೇಳಿದ್ದಾರೆ.

2024ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಭಾರಿ ಪ್ರಮಾಣದಲ್ಲಿ ಮತಗಳ್ಳತನ ನಡೆದಿದೆ ಎಂದು ರಾಹುಲ್‌ ಗಾಂಧಿ ಈ ಹಿಂದೆಯೂ ಆರೋಪಿಸಿದ್ದರು. ʼʼ2024ರ ಲೋಕಸಭೆ ಚುನಾವಣೆಯಲ್ಲಿ ಮತಗಳ್ಳತನ ನಡೆದ ಕಾರಣದಿಂದಲೇ ಕರ್ನಾಟಕದಲ್ಲಿ ಕಾಂಗ್ರೆಸ್‌ 6 ಸೀಟುಗಳನ್ನು ಕಳೆದುಕೊಂಡಿತ್ತು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಯುಪಿಎ ಮೃತ್ರಿಕೂಟ ನಿರೀಕ್ಷೆಯಷ್ಟು ಸೀಟುಗಳನ್ನು ಪಡೆಯದಿರಲು ಮತವಂಚನೆಯೇ ಕಾರಣ. ಬೆಂಗಳೂರು ಸೆಂಟ್ರಲ್‌ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತ ಅಕ್ರಮದ ಕಾರಣ ಆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲುವಂತಾಯಿತು. ಅಲ್ಲಿ 1 ಲಕ್ಷಕ್ಕೂ ಹೆಚ್ಚು ಮತಕಳವು ನಡೆದಿದೆʼʼ ಎಂದು ರಾಹುಲ್‌ ಗಾಂಧಿ ದೂರಿದ್ದರು.