ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gold Price Hike: ಸ್ವರ್ಣ ಪ್ರಿಯರಿಗೆ ಮತ್ತೆ ಶಾಕ್‌; 1 ಲಕ್ಷ ರೂ. ತಲುಪಿದ ಚಿನ್ನದ ಬೆಲೆ!

ಚಿನ್ನದ ಬೆಲೆ ದಿನೇ ದಿನೇ ಗನನಕ್ಕೆ ಏರುತ್ತಲೇ ಇದೆ. ಸದ್ಯ ಇದೀಗ ದೆಹಲಿಯಲ್ಲಿ ಚಿನ್ನದ ಬೆಲೆಯೂ 1,650 ರೂಪಾಯಿ ಏರಿಕೆಯಾಗಿದ್ದು 1 ಲಕ್ಷ ರೂಪಾಯಿಗೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಸ್ಥಳೀಯ ಮಾರುಕಟ್ಟೆಗಳಲ್ಲಿ 1,600 ರೂಪಾಯಿ ಏರಿಕೆ ಆಗಿದ್ದು 10 ಗ್ರಾಂಗೆ 99,300 ರೂಪಾಯಿಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲೂ ಭಾರೀ ಏರಿಕೆ ಕಂಡು ಬಂದಿದೆ.

ನವದೆಹಲಿ: ಚಿನ್ನದ ಬೆಲೆ ದಿನೇ ದಿನೇ ಗನನಕ್ಕೆ ಏರುತ್ತಲೇ ಇದೆ. ಸದ್ಯ ಇದೀಗ ದೆಹಲಿಯಲ್ಲಿ ಚಿನ್ನದ ಬೆಲೆಯೂ 1,650 ರೂಪಾಯಿ ಏರಿಕೆಯಾಗಿದ್ದು 1 ಲಕ್ಷ ರೂಪಾಯಿಗೆ ಇನ್ನೊಂದು ಹೆಜ್ಜೆ ಮಾತ್ರ ಬಾಕಿ ಇದೆ. ಅಖಿಲ ಭಾರತ ಸರಾಫಾ ಸಂಘದ (ಎಐಎಸ್​ಐ) ನಂತೆ ದೆಹಲಿಯಲ್ಲಿ ಶೇಕಡಾ 99.9 ರಷ್ಟು ಶುದ್ಧತೆಯ ಚಿನ್ನವು 10 ಗ್ರಾಂಗೆ 99,800 ರೂಪಾಯಿ ಆಗಿದೆ. ಕಳೆದ ಶುಕ್ರವಾರ ಇದರ ಬೆಲೆಯಲ್ಲಿ 20 ರೂಪಾಯಿ ಕಡಿಮೆಯಾಗಿ 10 ಗ್ರಾಂ ಚಿನ್ನಕ್ಕೆ 98,150 ರೂಪಾಯಿ ಇತ್ತು. ಆದರೆ ಇದೀಗ ಏಕಾಏಕಿ 1,650 ರೂಪಾಯಿ ಏರಿಕೆ ಆಗಿದೆ.

ಸ್ಥಳೀಯ ಮಾರುಕಟ್ಟೆಗಳಲ್ಲಿ 1,600 ರೂಪಾಯಿ ಏರಿಕೆ ಆಗಿದ್ದು 10 ಗ್ರಾಂಗೆ 99,300 ರೂಪಾಯಿಗೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲೂ ಭಾರೀ ಏರಿಕೆ ಕಂಡು ಬಂದಿದೆ. ಪ್ರತಿ ಕೆಜಿ ಬೆಳ್ಳಿಗೆ 98,500 ರೂಪಾಯಿಗಳಿಗೆ ತಲುಪಿದೆ. ಏಪ್ರಿಲ್ 18 ರಂದು ಬೆಳ್ಳಿ ಬೆಲೆ ಕೆಜಿಗೆ 98,000 ರೂಪಾಯಿ ಇತ್ತು. ಆದರೆ ಇದರಲ್ಲೂ ದರ ಏರಿಕೆ ಆಗಿದೆ ಎಂದು ಹೇಳಲಾಗಿದೆ.

ವಿಶ್ವದ ರಾಷ್ಟ್ರಗಳ ಮೇಲೆ ಅಮೆರಿಕದ ಅಧ್ಯಕ್ಷ ಸೊನಾಲ್ಡ್ ಟ್ರಂಪ್ ಅವರು ಅಧಿಕ ಸುಂಕ ವಿಧಿಸಿದ್ದರಿಂದ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತ ಹೋಗುತ್ತಿದೆ. ಚೀನಾ ಹಾಗೂ ಅಮೆರಿಕದ ನಡುವೆ ಈಗಲೂ ತೆರಿಗೆ ಯುದ್ಧ ನಡೆಯುತ್ತಿದೆ. ಇದರಿಂದ ಡಾಲರ್ ಬೆಲೆ ಕುಸಿಯತೊಡಗಿದೆ. ಬಂಡವಾಳಗಾರರು ಹೆಚ್ಚು ಹೆಚ್ಚು ಬಂಗಾರದ ಮೇಲೆ ಇನ್ವೆಸ್ಟ್​ ಮಾಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಭಾರತಲ್ಲಿ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಬಳಿಗೆ ಬಂದು ನಿಂತಿದೆ. . ಇಲ್ಲಿಯವರೆಗೆ, ಚಿನ್ನವು ಶೇಕಡಾ 25 ಕ್ಕಿಂತ ಹೆಚ್ಚು ಏರಿಕೆಯಾಗಿದೆ, ಇದರಲ್ಲಿ ಏಪ್ರಿಲ್ 2 ರಂದು ಯುಎಸ್ ಆಡಳಿತವು ಸುಂಕವನ್ನು ಘೋಷಿಸಿದ ನಂತರ ಶೇಕಡಾ 6 ರಷ್ಟು ಏರಿಕೆಯಾಗಿದೆ.

ಈ ಸುದ್ದಿಯನ್ನೂ ಓದಿ: Gold Price Today: ಸ್ವರ್ಣಪ್ರಿಯರಿಗೆ ಶಾಕ್‌ ಮೇಲೆ ಶಾಕ್‌! ಗಗನಕ್ಕೇರಿದ ಚಿನ್ನದ ರೇಟ್‌

ಭಾರತದಲ್ಲಿ ಚಿನ್ನವು ಅಮೂಲ್ಯ ಲೋಹ ಮಾತ್ರವಲ್ಲ ಸಂಸ್ಕೃತಿಯ ಸಂಕೇತವೂ ಹೌದು. ಹೀಗಾಗಿ ಹಬ್ಬಗಳು ಮತ್ತು ಮದುವೆ ಋತುವಿನಲ್ಲಿ ಚಿನ್ನಾಭರಣಗಳಿಗೆ ಬೇಡಿಕೆ ಹೆಚ್ಚಾಗಿ ದರದ ಏರಿಳಿತಗಳಿಗೆ ಕಾರಣವಾಗುತ್ತದೆ. ಜತೆಗೆ ಪೂರೈಕೆಯಲ್ಲಿನ ಅಡೆತಡೆಗಳು ಮತ್ತು ಆಮದು ಸುಂಕದಲ್ಲಿನ ಬದಲಾವಣೆಗಳು ಸ್ಥಳೀಯ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ಚಿನ್ನದ ಮಾರುಕಟ್ಟೆಯ ಏರಿಳಿತ ಭಾರತದಲ್ಲಿ ಚಿನ್ನದ ದರವನ್ನು ನಿರ್ಧರಿಸುವಲ್ಲಿ ಪ್ರದಾನ ಪಾತ್ರವಹಿಸುತ್ತದೆ. ಭೌಗೋಳಿಕ ರಾಜಕೀಯ ಘಟನೆಗಳು, ಆರ್ಥಿಕ ಪರಿಸ್ಥಿತಿಗಳು ಮತ್ತು ಕರೆನ್ಸಿ ಏರಿಳಿತಗಳಂತಹ ಅಂಶಗಳು ಚಿನ್ನದ ದರದ ಮೇಲೆ ನೇರ ಪರಿಣಾಮ ಬೀರುತ್ತವೆ.