ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ರಾಮ ಮಂದಿರದಲ್ಲಿದ್ದ ಚಿನ್ನಲೇಪಿತ 'ರಾಮಚರಿತ ಮಾನಸ'ದ ಫೋಟೋ ಹಂಚಿಕೊಂಡ ಗೋಪಾಲ್‌ ನಾಗರಕಟ್ಟೆ; ಗೊಂದಲಕ್ಕೆ ತೆರೆ

Rama Mandira: ರಾಮ ಮಂದಿರವು ದೇಣಿಗೆ ವಿವಾದದ ಬೆನ್ನಲ್ಲೇ ಸುಮಾರು 5 ಕೋಟಿ ರೂ. ಮೌಲ್ಯದ ಚಿನ್ನ-ಲೇಪಿತ ರಾಮಚರಿತ ಮಾನಸವನ್ನು ಮಾಜಿ ಐಎಎಸ್ ಅಧಿಕಾರಿ ಎಸ್. ಲಕ್ಷ್ಮಿನಾರಾಯಣನ್ ಕುಟುಂಬವು ದೇವಾಲಯಕ್ಕೆ ದಾನ ಮಾಡಿತ್ತು. ಆ ರಾಮಚರಿತ ಮಾನಸ ಈಗ ನಾಪತ್ತೆಯಾಗಿದೆ ಎಂದು ಲಕ್ಷ್ಮಿನಾರಾಯಣನ್ ಹೇಳಿದ್ದರು

ಅಯೋಧ್ಯೆ: ರಾಮ ಮಂದಿರವು (Rama Mandira) ದೇಣಿಗೆ ವಿವಾದದ ಬೆನ್ನಲ್ಲೇ ಸುಮಾರು 5 ಕೋಟಿ ರೂ. ಮೌಲ್ಯದ ಚಿನ್ನ-ಲೇಪಿತ ರಾಮಚರಿತ ಮಾನಸವನ್ನು (Rama Charit Manas) ಮಾಜಿ ಐಎಎಸ್ ಅಧಿಕಾರಿ ಎಸ್. ಲಕ್ಷ್ಮಿನಾರಾಯಣನ್ ಕುಟುಂಬವು ದೇವಾಲಯಕ್ಕೆ ದಾನ ಮಾಡಿತ್ತು. ಆ ರಾಮಚರಿತ ಮಾನಸ ಈಗ ನಾಪತ್ತೆಯಾಗಿದೆ ಎಂದು ಲಕ್ಷ್ಮಿನಾರಾಯಣನ್ ಹೇಳಿದ್ದರು. ಇದೀಗ ಆ ವದಂತಿಗೆ ಸ್ಪಷ್ಟನೆ ಸಿಕ್ಕದೆ. ವಿಶ್ವ ಹಿಂದೂ ಪರಿಷತ್ (VHP) ನ ಜಂಟಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ರಾಮಮಂದಿರ ನಿರ್ಮಾಣದ ಉಸ್ತುವಾರಿಗಳಲ್ಲಿ ಪ್ರಮುಖರಾಗಿದ್ದ ಗೋಪಾಲ ನಾಗರಕಟ್ಟೆ ಅವರು ಚಿನ್ನ-ಲೇಪಿತ ರಾಮಚರಿತ ಮಾನಸ ಪುಸ್ತಕದ ಫೋಟೋವನ್ನು ಹಂಚಿಕೊಂಡು ಸುಳ್ಳು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

ಮಾಜಿ ಅಧಿಕಾರಿಯ ಪ್ರಕಾರ, ಅವರ ಕುಟುಂಬವು ಏಪ್ರಿಲ್ 2024ರಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಚಿನ್ನ-ಲೇಪಿತ ರಾಮಚರಿತ ಮಾನಸವನ್ನು ಅರ್ಪಿಸಿತ್ತು. ಧಾರ್ಮಿಕ ಪಠ್ಯವು ನಂತರ ದೇವಾಲಯದಿಂದ ಕಣ್ಮರೆಯಾಗಿದೆ ಎಂದು ಅವರು ಹೇಳಿಕೊಂಡಿದ್ದರು. ದೇವಾಲಯದಲ್ಲಿ ಸ್ವೀಕರಿಸಿದ ಪ್ರತಿಯೊಂದು ದೇಣಿಗೆಯನ್ನು ಶಾಶ್ವತವಾಗಿ ಪ್ರದರ್ಶಿಸಲು ಸಾಧ್ಯವಿಲ್ಲ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ಹೇಳಿದ್ದರು ಎಂದು ಅವರು ಹೇಳಿದ್ದಾರೆ.



ಆದರೆ ಇದೀಗ ಸುಮಾರು 5 ಕೋಟಿ ರೂ. ಮೌಲ್ಯದ ಚಿನ್ನ-ಲೇಪಿತ ರಾಮಚರಿತ ಮಾನಸ ಪುಸ್ತಕವನ್ನು ಫೋಟೋವನ್ನು ಗೋಪಾಲ ನಾಗರಕಟ್ಟೆ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಲಕ್ಷ್ಮೀನಾರಾಯಣ್ ಜಿ ಅವರು ದೇಣಿಗೆಯಾಗಿ ನೀಡಿದ್ದ 'ಶ್ರೀ ರಾಮಚರಿತ ಮಾನಸ' ಗ್ರಂಥವನ್ನು ರಾಮಲಲ್ಲಾನ ಗರ್ಭಗುಡಿಯ ಮುಂದೆ 3 ತಿಂಗಳ ಕಾಲ ಇರಿಸಲಾಗಿತ್ತು; ಸದ್ಯ ಅದು ಗರ್ಭಗುಡಿಯ ಸಮೀಪವಿರುವ ಸಂಗ್ರಹಣಾ ಕೊಠಡಿಯಲ್ಲಿದೆ. ಶ್ರೀ ಲಕ್ಷ್ಮೀನಾರಾಯಣ್ ಜಿ ಅವರು ಯಾವುದೇ ಸಮಯದಲ್ಲಿ ಬಂದು ಅದನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಅಯೋಧ್ಯೆ ರಾಮ ಮಂದಿರದ ಮೇಲೆ ದೃಷ್ಟಿ ನೆಟ್ಟ ಭಯೋತ್ಪಾದಕರು?: ಹಫೀಜ್ ಸಯೀದ್ ಅಳಿಯ ಸೇರಿದಂತೆ 23 ಮಂದಿಯ ಗುರುತು ಪತ್ತೆ

ರಾಮ ಮಂದಿರಕ್ಕೆ ಕಾಣಿಕೆಗಳ ದುರುಪಯೋಗದ ಬಗ್ಗೆ ವಿಶೇಷ ತನಿಖಾ ತಂಡವು ಪ್ರಸ್ತುತ ತನಿಖೆ ನಡೆಸುತ್ತಿದೆ. ಕದ್ದ ಚಿನ್ನಾಭರಣಗಳನ್ನು ಅದರ ಗುರುತನ್ನು ಮರೆಮಾಡಲು ಕರಗಿಸಲು ಪ್ರಯತ್ನಗಳು ನಡೆದಿವೆಯೇ ಎಂದು ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇಲ್ಲಿಯವರೆಗೆ, ಈ ಪ್ರಕರಣದಲ್ಲಿ ದೇಣಿಗೆಗಳ ಎಣಿಕೆಯಲ್ಲಿ ಭಾಗಿಯಾಗಿರುವ ಎಂಟು ಜನರನ್ನು ಬಂಧಿಸಲಾಗಿದೆ. ಹಣಕಾಸಿನ ದಾಖಲೆಗಳು, ವಶಪಡಿಸಿಕೊಳ್ಳುವಿಕೆಗಳು ಮತ್ತು ಇತರ ಪುರಾವೆಗಳ ಆಧಾರದ ಮೇಲೆ ತನಿಖಾ ಸಂಸ್ಥೆಗಳು ಇಡೀ ವಿಷಯವನ್ನು ತನಿಖೆ ಮಾಡುತ್ತಿವೆ.

Vishakha Bhat Heggar

View all posts by this author