ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

LPG: ಎಲ್‌ಪಿಜಿ ಅಕ್ರಮ ತಡೆಗಟ್ಟಲು ಸರ್ಕಾರದಿಂದ ರಾಷ್ಟ್ರವ್ಯಾಪಿ ಅಭಿಯಾನ!

ದೇಶದಲ್ಲಿ ಎಲ್‌ಪಿಜಿ ಅಕ್ರಮ ದಾಸ್ತಾನು ಹಾಗೂ ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡ‌ರ್ ಮಾರಾಟ ತಡೆಗಟ್ಟಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು ದೇಶದಾದ್ಯಂತ ಅಭಿ‌ ಯಾನ ಕೈಗೊಂಡಿದೆ. ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಜಾಗೃತೆ ವಹಿಸಲು ಈ ಕ್ರಮಗಳನ್ನು ಕೈಗೊಂಡಿದೆ.

ನವದೆಹಲಿ: ದೇಶದಲ್ಲಿ ಎಲ್‌ಪಿಜಿ(LPG) ಅಕ್ರಮ ದಾಸ್ತಾನು ಹಾಗೂ ಕಾಳಸಂತೆಯಲ್ಲಿ ಎಲ್‌ಪಿಜಿ ಸಿಲಿಂಡ‌ರ್ ಮಾರಾಟ ತಡೆಗಟ್ಟಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು ದೇಶದಾದ್ಯಂತ ಅಭಿಯಾನ ಕೈಗೊಂಡಿದೆ. ಗ್ರಾಹಕರಿಗೆ ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ಜಾಗೃತೆ ವಹಿಸಲು ಈ ಕ್ರಮಗಳನ್ನು ಕೈಗೊಂಡಿದೆ.

ರಾಷ್ಟ್ರಾದ್ಯಂತ ಕೈಗೊಂಡ ಅಭಿಯಾನದ ಭಾಗವಾಗಿ ಮನೆ ಬಳಕೆ ಎಲ್‌ಪಿಜಿ ಸರಬರಾಜಿನಲ್ಲಿ ವ್ಯತ್ಯಯ ಪತ್ತೆ‌ ಹಚ್ಚುವ ಹಾಗೂ ಎಲ್‌ಪಿಜಿ ಪೂರೈಕೆಯಲ್ಲಿ ಪಾರದರ್ಶಕತೆ ಸಾಧಿಸುವ ನಿಟ್ಟಿನಲ್ಲಿ ಏ.11ರಂದು 2700 ತಪಾಸಣೆ ಮತ್ತು ದಾಳಿಯನ್ನು ಕೈಗೊಳ್ಳಲಾಗಿದೆ.

ಇದನ್ನೂ ಓದಿ: Auto LPG shortage: ಬೆಂಗಳೂರಿನಲ್ಲಿ ಎಲ್‌ಪಿಜಿಗೆ ಹಾಹಾಕಾರ; ಬಂಕ್‌ಗಳ ಮುಂದೆ ಕಿ.ಮೀ.ಗಟ್ಟಲೇ ಆಟೋಗಳ ಕ್ಯೂ!

ತೈಲ ಮಾರಾಟ ಸಂಸ್ಥೆಗಳು (ಒಎಮ್‌ಸಿ) ಕೂಡ ಎಲ್‌ಪಿಜಿ ಪೂರೈಕೆ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆಗಳನ್ನು ಕೈಗೊಂಡಿದೆ. ಈ ಉಪಕ್ರಮದಲ್ಲಿ 219 ವಿತರಕರಿಗೆ ದಂಡ ವಿಧಿಸಲಾಗಿದ್ದು, ನಿಯಮ ಉಲ್ಲಂಘನೆ ಅಡಿಯಲ್ಲಿ 56 ವಿತರಕರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಒಎಮ್‌ಸಿ ಜವಬ್ದಾರಿಯುತ ಎಲ್‌ಪಿಜೆ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನೂ ಆರಂಭಿಸಿದೆ.

ಕಳೆದ 8 ದಿನಗಳಲ್ಲಿ 5 ಕೆಜಿ (ಎಫ್‌ಟಿಎಲ್‌) ಸಿಲಿಂಡರ್ ಲಭ್ಯತೆ ಜೊತೆಗೆ ಎಲ್‌ಪಿಜಿ ಕುರಿತು 3,300 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈಗಾಗಲೇ, 35,800 ರಷ್ಟು 5 ಕೆಜಿ ಫ್ರೀ ಟ್ರೇಡ್‌ ಎಲ್‌ಪಿಜಿ ಸಿಲಿಂಡರ್‌ʼಗಳನ್ನು ಮಾರಾಟ ಮಾಡಲಾಗಿದೆ. ಈ ಉಪಕ್ರಮಗಳು ಮನೆ ಬಳಕೆಯ ಎಲ್‌ಪಿಜಿ ಪೂರೈಕೆ ಮೇಲಿನ ಒತ್ತಡ ತಗ್ಗಿಸಿ ವಲಸೆ ಕಾರ್ಮಿಕರು ಹಾಗೂ ಮೂಲಸೌಕರ್ಯ ವಂಚಿತ ಕುಟುಂಬಗಳ ಅಗತ್ಯತೆಯನ್ನು ಪೂರೈ ಸಲು ನೆರವಾಗಿದೆ.

ಮನೆ ಬಳಕೆ ಎಲ್‌ಪಿಜಿ ಪೂರೈಕೆ ಸುಗಮವಾಗಿದ್ದು ಯಾವುದೇ ವಿತರಕ ಕೇಂದ್ರಗಳಿಂದ ಕೊರತೆ ವರದಿಯಾಗಿಲ್ಲ. ಏ.11ರಂದು ರಾಷ್ಟ್ರಾದ್ಯಂತ 52.3 ಲಕ್ಷ ಮನೆ ಬಳಕೆ ಎಲ್‌ಪಿಜಿ ಸಿಲಿಂಡರ್‌ʼಗಳನ್ನು ಪೂರೈಸಲಾಗಿದೆ.