ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಣಿಪುರದಲ್ಲಿ ಆರ್‌ಎಎಫ್ ಹೊರಠಾಣೆ ಮೇಲೆ ಗ್ರೆನೇಡ್ ದಾಳಿ: ಸಿಆರ್‌ಪಿಎಫ್ ಮುಖ್ಯಪೇದೆಗೆ ಗಾಯ

Manipur Grenade Attack: ಅಪರಿಚಿತ ದುಷ್ಕರ್ಮಿಗಳು ಹ್ಯಾಂಡ್ ಗ್ರೆನೇಡ್ ಎಸೆದ ಪರಿಣಾಮ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಕ್ಷಿಪ್ರ ಕಾರ್ಯ ಪಡೆಯ (ಆರ್‌ಎಎಫ್) 40 ವರ್ಷದ ಮುಖ್ಯಪೇದೆ ಗಾಯಗೊಂಡಿದ್ದಾರೆ. ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಘಟನೆ ನಡೆದಿದೆ.

ಮಣಿಪುರದಲ್ಲಿ ಆರ್‌ಎಎಫ್ ಹೊರಠಾಣೆ ಮೇಲೆ ಗ್ರೆನೇಡ್ ದಾಳಿ

ಇಂಫಾಲ್, ಅ. 9: ಮಣಿಪುರದ ಆರ್‌ಎಎಫ್ ಹೊರಠಾಣೆ ಮೇಲೆ ಗುರುವಾರ (ಅ. 8) ರಾತ್ರಿ ಅಪರಿಚಿತ ದುಷ್ಕರ್ಮಿಗಳು ಹ್ಯಾಂಡ್ ಗ್ರೆನೇಡ್ ಎಸೆದ ಪರಿಣಾಮ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಕ್ಷಿಪ್ರ ಕಾರ್ಯ ಪಡೆ (RAF)ಯ 40 ವರ್ಷದ ಮುಖ್ಯಪೇದೆ ಗಾಯಗೊಂಡಿದ್ದಾರೆ. ಮಣಿಪುರದ (Manipur) ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಘಟನೆ ನಡೆದಿದೆ. ರಾತ್ರಿ 9 ಗಂಟೆ ಸುಮಾರಿಗೆ, ನ್ಯೂ ಲ್ಯಾಂಬ್ಯುಲೇನ್‌ನಲ್ಲಿರುವ ಬಿ/107 ಆರ್‌ಎಎಫ್‌ನ ಗೇಟ್ ಮೇಲೆ ಅಪರಿಚಿತ ವ್ಯಕ್ತಿಗಳು ಹ್ಯಾಂಡ್ ಗ್ರೆನೇಡ್ ಎಸೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಸಮಯದಲ್ಲಿ, ಉತ್ತರ ಪ್ರದೇಶದ ನಿವಾಸಿ ಧನಂಜಯ್ ರಾಯ್ ಅವರ ಹೊಟ್ಟೆಗೆ ಗಾಯಗಳಾಗಿವೆ. ಆರಂಭದಲ್ಲಿ ಅವರನ್ನು ಇಂಫಾಲ ಪೂರ್ವದಲ್ಲಿರುವ ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನ ಸಂಸ್ಥೆ (ಜೆಎನ್‌ಐಎಂಎಸ್) ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ, ಅವರನ್ನು ಇಂಫಾಲ ಪಶ್ಚಿಮದಲ್ಲಿರುವ ಶಿಜಾ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಗ್ರೆನೇಡ್ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುವಿನ ದೇಹದಲ್ಲಿದ್ದ ಗಾಜಿನ ಚೂರುಗಳನ್ನು ಹೊರತೆಗೆಯಲಾಗಿದೆ. ಸದ್ಯ ಅವರಿಗೆ ವೆಂಟಿಲೇಟರ್‌ ನೆರವಿನೊಂದಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದ್ದು, ವೈದ್ಯರ ನಿಗಾದಲ್ಲಿರಿಸಲಾಗಿದೆ ಎಂದು ಶಿಜಾ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

ಬಿಜೆಪಿ ಶಾಸಕರ ನಿವಾಸದ ಆವರಣದಲ್ಲಿ ಸ್ಫೋಟ! ಹೆಚ್ಚಿದ ಭೀತಿ

ಸ್ಫೋಟದ ಬಳಿಕ ಘಟನಾ ಸ್ಥಳದ ಸುತ್ತಲಿನ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದವು. ಶುಕ್ರವಾರ ಮುಂಜಾನೆಯಿಂದಲೇ ನ್ಯೂ ಲಂಬುಲೇನ್ ಪ್ರದೇಶದಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಲಾಯಿತು. ಆದರೆ ಈ ಕಾರ್ಯಾಚರಣೆಯಲ್ಲಿ ಯಾವುದೇ ಶಂಕಿತರನ್ನು ಬಂಧಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮೊದಲು, ಸೆಪ್ಟೆಂಬರ್ 10ರಂದು ನಿಷೇಧಿತ ಭೂಗತ ಸಂಘಟನೆಯಾದ ನ್ಯಾಷನಲ್ ರೆವಲ್ಯೂಷನರಿ ಫ್ರಂಟ್ ಆಫ್ ಮಣಿಪುರ, ಇಂಫಾಲ್ ಪಶ್ಚಿಮ ಜಿಲ್ಲೆಯ NH-2 (ಇಂಫಾಲ್-ದಿಮಾಪುರ) ಉದ್ದಕ್ಕೂ ಖೊಂಘಂಪತ್‌ನಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಗುರಿಯಾಗಿಸಿ ಗುಂಡು ಹಾರಿಸಲಾಗಿತ್ತು. ದಾಳಿಯ ಸಮಯದಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಆದರೆ ನಿಷೇಧಿತ ಭೂಗತ ಸಂಘಟನೆಯ ಇಬ್ಬರು ಸದಸ್ಯರನ್ನು ಬಂಧಿಸಿದ ಬಳಿಕ, ಈ ದಾಳಿಯ ಹಿಂದೆ ಆ ಸಂಘಟನೆಯ ಕೈವಾಡವಿರುವುದು ಬಹಿರಂಗವಾಗಿದೆ. ಬಂಧಿತರು ತಂದೆ ಮತ್ತು ಮಗ ಎಂದು ತಿಳಿದುಬಂದಿದೆ. ಅವರ ಬಳಿಯಿಂದ ಎಕೆ-47 ರೈಫಲ್ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.