ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ʼಸರ್‌ ನಿಮ್ಮ ಸ್ಕಿನ್‌ ಕೇರ್‌ ರೂಟೀನ್‌ ಏನು?ʼ ಮಹಿಳಾ ಕ್ರಿಕೆಟ್‌ ಟೀಂ ಪ್ರಶ್ನೆಗೆ ಮೋದಿ ಹೇಳಿದ್ದೇನು?

Harleen Deol: ಐತಿಹಾಸಿಕ ಏಕದಿನ ವಿಶ್ವಕಪ್ ಗೆಲುವಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಭೇಟಿಯಾದರು. ಅವರ ಭೇಟಿಯ ವೀಡಿಯೊವನ್ನು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ಅವರು ಪ್ರಮುಖ ಐಸಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಭಾರತೀಯ ಮಹಿಳಾ ಕ್ರಿಕೆಟ್‌ ತಂಡದೊಂದಿಗೆ ಪ್ರಧಾನಿ ಮೋದಿ

ನವದೆಹಲಿ: ಐತಿಹಾಸಿಕ ಏಕದಿನ ವಿಶ್ವಕಪ್ ಗೆಲುವಿನ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬುಧವಾರ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು (Women Cricket Team) ಭೇಟಿಯಾದರು. ಅವರ ಭೇಟಿಯ ವೀಡಿಯೊವನ್ನು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂವಾದದ ಸಮಯದಲ್ಲಿ, ಹರ್ಲೀನ್ ಡಿಯೋಲ್ (Harleen Deol) ಅವರು ಪ್ರಧಾನಿ ಮೋದಿಯವರಿಗೆ ಅವರ ಚರ್ಮದ ಆರೈಕೆ ದಿನಚರಿಯ ಬಗ್ಗೆ ಒಂದು ಹಾಸ್ಯಮಯ ಪ್ರಶ್ನೆ ಒಂದನ್ನು ಕೇಳಿದ್ದಾರೆ. ಇದು ಈಗ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

ಚರ್ಮದ ಆರೈಕೆಯ ಕುರಿತು ಮೋದಿ ತಾನು ಯಾವುದೇ ರೀತಿಯ ಸ್ಕಿನ್‌ ಕೇರ್‌ ರೂಟಿನ್‌ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಫಾರ್ಮಲ್ ಉಡುಪು ಧರಿಸಿ ವಿಜೇತ ಪದಕಗಳನ್ನು ಧರಿಸಿದ್ದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವನ್ನು ಮೋದಿ ಅಭಿನಂದಿಸಿದರು. ಮಂಗಳವಾರ ಬಿಗಿ ಭದ್ರತೆಯ ನಡುವೆ ಪ್ರಧಾನಿ ಮೋದಿ ಅವರೊಂದಿಗಿನ ನಿಗದಿತ ಸಭೆಗಾಗಿ ತಂಡವು ನವದೆಹಲಿಗೆ ಆಗಮಿಸಿತು. ಭಾನುವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ 2025 ರ ಮಹಿಳಾ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸುವ ಮೂಲಕ ಅವರು ಪ್ರಮುಖ ಐಸಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿದ್ದಾರೆ.

ಮಹಿಳಾ ಕ್ರಿಕೆಟ್‌ ತಂಡದೊಂದಿಗೆ ಮೋದಿ



2017 ರಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದನ್ನು ನಾಯಕಿ ಹರ್ಮನ್‌ಪ್ರೀತ್ ಕೌರ್ ನೆನಪಿಸಿಕೊಂಡರು. ಉಪನಾಯಕಿ ಸ್ಮೃತಿ ಮಂಧಾನ ಅವರು ಪ್ರಧಾನಿ ಮೋದಿಯವರ ಪ್ರೇರಣಾದಾಯಕ ಪ್ರಭಾವ ಮತ್ತು ಅವರು ಅವರಿಗೆ ಹೇಗೆ ಸ್ಫೂರ್ತಿ ನೀಡಿದ್ದಾರೆ ಎಂಬುದನ್ನು ಉಲ್ಲೇಖಿಸಿದರು. ಟೂರ್ನಿಯ ಶ್ರೇಷ್ಠ ಆಟಗಾರ್ತಿ ದೀಪ್ತಿ ಶರ್ಮಾ, ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಉತ್ಸುಕಳಾಗಿದ್ದೆ ಎಂದು ಹೇಳಿದರು ಮತ್ತು 2017 ರಲ್ಲಿ ಅವರ ಭೇಟಿಯನ್ನು ನೆನಪಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Russian Oil Purchase: ಮೋದಿ-ಟ್ರಂಪ್‌ ನಡುವೆ ಯಾವುದೇ ಫೋನ್ ಸಂಭಾಷಣೆ ನಡೆದಿಲ್ಲ- ಭಾರತ ಸ್ಪಷ್ಟನೆ

ದೀಪ್ತಿ ಶರ್ಮಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 'ಜೈ ಶ್ರೀ ರಾಮ್' ಎಂದು ಬರೆದುಕೊಂಡದ್ದು ಮತ್ತು ಅವರ ತೋಳಿನ ಮೇಲೆ ಭಗವಾನ್ ಹನುಮಾನ್ ಅವರ ಹಚ್ಚೆ ಇದ್ದ ಬಗ್ಗೆ ಪ್ರಧಾನಿ ಚರ್ಚಿಸಿದ್ದಾರೆ. ಅದು ಅವರಿಗೆ ಶಕ್ತಿ ನೀಡಿದೆ ಎಂದಿದ್ದಾರೆ. ಪ್ರಧಾನಿ ಮೋದಿ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡವನ್ನು ಮನಸಾರೆ ಅಭಿನಂದಿಸಿದರು. ಪಂದ್ಯಾವಳಿಯಲ್ಲಿ ಸತತ ಮೂರು ಸೋಲುಗಳನ್ನು ಅನುಭವಿಸಿದ ನಂತರವೂ, ನಮ್ಮ ತಂಡ ತೋರಿದ ಅದ್ಭುತ ಪುನರಾಗಮನವನ್ನು ಶ್ಲಾಘಿಸಿದ್ದಾರೆ.

ಅಷ್ಟೇ ಅಲ್ಲದೇ ದೇಶಾದ್ಯಂತ ವಿಶೇಷವಾಗಿ ಹುಡುಗಿಯರಲ್ಲಿ ಫಿಟ್ ಇಂಡಿಯಾ ಸಂದೇಶವನ್ನು ಪ್ರಚಾರ ಮಾಡುವಂತೆ ಪ್ರಧಾನಿ ಆಟಗಾರರನ್ನು ಒತ್ತಾಯಿಸಿದರು. ಬೊಜ್ಜು ಹೆಚ್ಚುತ್ತಿರುವ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಫಿಟ್‌ನೆಸ್ ಮತ್ತು ದೈಹಿಕ ಚಟುವಟಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಇದೇ ವೇಳೆ, ತಮ್ಮ ಶಾಲೆಗಳಿಗೆ ಭೇಟಿ ನೀಡಿ ಯುವ ಮನಸ್ಸುಗಳನ್ನು ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಪ್ರೇರೇಪಿಸುವಂತೆಯೂ ತಿಳಿಸಿದರು.