ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

50 ಕರಾವಳಿ ಪ್ರದೇಶಗಳಲ್ಲಿ ಎಚ್‌ಸಿಎಲ್ ಫೌಂಡೇಶನ್‌ನ ಬೃಹತ್ ಸ್ವಚ್ಛತಾ ಅಭಿಯಾನ

ಎಚ್‌ಸಿಎಲ್‌ಟೆಕ್‌ನ ಭಾರತದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮಗಳನ್ನು ಮುನ್ನಡೆಸುತ್ತಿರುವ ಎಚ್‌ಸಿಎಲ್ ಫೌಂಡೇಶನ್, ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 50 ಕರಾವಳಿ ಪ್ರದೇಶಗಳಲ್ಲಿ ನಡೆಸಿದ ಬೃಹತ್ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಚೆನೈ: ಎಚ್‌ಸಿಎಲ್‌ಟೆಕ್‌ನ ಭಾರತದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮ ಗಳನ್ನು ಮುನ್ನಡೆಸುತ್ತಿರುವ ಎಚ್‌ಸಿಎಲ್ ಫೌಂಡೇಶನ್(HCL Foundation), ಕರ್ನಾಟಕ ಸೇರಿದಂತೆ ಆರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 50 ಕರಾವಳಿ ಪ್ರದೇಶಗಳಲ್ಲಿ ನಡೆಸಿದ ಬೃಹತ್ ಸ್ವಚ್ಛತಾ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಎಚ್‌ಸಿಎಲ್ ಗ್ರೂಪ್‌ನ 50ನೇ ವಾರ್ಷಿಕೋತ್ಸವದ ಅಂಗವಾಗಿ ಆಗಸ್ಟ್ 11ರಂದು ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್, ಪೀಪಲ್ಸ್ ಆಕ್ಷನ್ ಫಾರ್ ಡೆವಲಪ್‌ಮೆಂಟ್, ಡೆವಲಪ್‌ಮೆಂಟ್ ರಿಸರ್ಚ್ ಕಮ್ಯುನಿಕೇಷನ್ ಅಂಡ್ ಸರ್ವೀಸಸ್ ಸೆಂಟರ್, ಸ್ಪಂದನ್, ರೀಫ್‌ವಾಚ್ ಮರೈನ್ ಕನ್ಸರ್ವೇಷನ್, ಪ್ಲಾನ್@ಅರ್ಥ್, ಅನಿಮಲ್ ವಾರಿಯರ್ಸ್ ಕನ್ಸರ್ವೇಷನ್ ಸೊಸೈಟಿ ಹಾಗೂ ಪ್ಲಾನ್ ಫೌಂಡೇಶನ್ ಸಹಯೋಗದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.

ಇದನ್ನೂ ಓದಿ: HCL Foundation: ಎನ್‌ಜಿಒಗಳಿಗೆ ಬರೋಬ್ಬರಿ ₹24 ಕೋಟಿ ಅನುದಾನ, ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದ ಎಚ್‌ಸಿಎಲ್ ಫೌಂಡೇಶನ್

ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ಕುಂದಾಪುರ, ಕೊಚ್ಚಿ, ರಾಮನಾಥ ಪುರಂ, ತೂತುಕುಡಿ, ಒಂಗೋಲ್, ಪಶ್ಚಿಮ ಬಂಗಾಳದ ದಕ್ಷಿಣ ಮತ್ತು ಉತ್ತರ 24 ಪರಗಣ ಹಾಗೂ ಪುರಿಯಲ್ಲಿ ಬೀದಿ ನಾಟಕ, ಮರಳು ಶಿಲ್ಪ ಮತ್ತು ಸಮುದ್ರ ತ್ಯಾಜ್ಯ ಪ್ರದರ್ಶನ ಸೇರಿದಂತೆ ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಯಿತು.

WhatsApp Image 2026-09-22 at 11.30.26 HCL

ಅಭಿಯಾನದಲ್ಲಿ 7,000ಕ್ಕೂ ಹೆಚ್ಚು ಸ್ವಯಂಸೇವಕರು ಮತ್ತು ಸ್ಥಳೀಯ ಸಮುದಾಯದ ಸದಸ್ಯರು ಭಾಗವಹಿಸಿದ್ದು, ಕರಾವಳಿ ಪರಿಸರದಿಂದ 54,000 ಕೆ.ಜಿಗೂ ಹೆಚ್ಚು ಸಮುದ್ರ ತ್ಯಾಜ್ಯವನ್ನು ಸಂಗ್ರಹಿಸಿ ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಲಾಗಿದೆ.

“ಆರೋಗ್ಯಕರ ಸಾಗರಗಳು ಮತ್ತು ಸ್ವಚ್ಛ ಕರಾವಳಿಗಳು ಪರಿಸರ ಸಮತೋಲನ, ಜೀವನೋಪಾಯ ಮತ್ತು ಸಮುದಾಯದ ಯೋಗಕ್ಷೇಮಕ್ಕೆ ಅತ್ಯಂತ ಮುಖ್ಯ. ಕರಾವಳಿ ಪರಿಸರದ ರಕ್ಷಣೆಗೆ ಎಲ್ಲ ಪಾಲುದಾರರ ನಿರಂತರ ಭಾಗವಹಿಸುವಿಕೆ ಅಗತ್ಯ,” ಎಂದು ಎಚ್‌ಸಿಎಲ್ ಫೌಂಡೇಶನ್ ನಿರ್ದೇಶಕಿ ಡಾ. ನಿಧಿ ಪುಂಧೀರ್ ಹೇಳಿದರು.

ಕರಾವಳಿ ಮತ್ತು ಸಮುದ್ರ ಸಂರಕ್ಷಣಾ ಕಾರ್ಯಕ್ರಮದಡಿ ಎಚ್‌ಸಿಎಲ್ ಫೌಂಡೇಶನ್ ಹಾಗೂ ಅದರ ಪಾಲುದಾರರು ಇದುವರೆಗೆ *8,29,610 ಕೆ.ಜಿ.ಗೂ ಹೆಚ್ಚು ಘೋಸ್ಟ್ ನೆಟ್‌ಗಳು ಮತ್ತು ಸಮುದ್ರ ತ್ಯಾಜ್ಯವನ್ನು ತೆರವುಗೊಳಿಸಿದ್ದಾರೆ.*