ಪೋರ್ಟ್ ಬ್ಲೇರ್, ಫೆ. 24: 7 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಅಂಡಮಾನ್‌ನ ಸಮುದ್ರದಲ್ಲಿ ಪತನವಾಗಿದೆ (Helicopter crashes). ಮಂಗಳವಾರ (ಫೆಬ್ರವರಿ 24) ಬೆಳಗ್ಗೆ ಮಧ್ಯ ಅಂಡಮಾನ್ ದ್ವೀಪದ (Middle Andaman Island) ಉತ್ತರ ಭಾಗದಲ್ಲಿರುವ ಪೋರ್ಟ್ ಬ್ಲೇರ್ (Port Blair) ಪಟ್ಟಣದಿಂದ ಹೊರಟ ಸ್ವಲ್ಪ ಸಮಯದ ನಂತರ ಪವನ್ ಹನ್ಸ್ ಹೆಲಿಕಾಪ್ಟರ್ ಸಮುದ್ರಕ್ಕೆ ಅಪ್ಪಳಿಸಿದೆ. ರಾಷ್ಟ್ರೀಯ ಹೆಲಿಕಾಪ್ಟರ್ ವಾಹಕಕ್ಕೆ ಸೇರಿದ ಹೆಲಿಕಾಪ್ಟರ್‌ನ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ಮಂಗಳವಾರ ಬೆಳಗ್ಗೆ 9:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮಾಯಾಬಂದರ್ ಬಳಿ ಹೆಲಿಕಾಪ್ಟರ್ ಪತನವಾಗಿದೆ. ಹೆಲಿಕಾಪ್ಟರ್ ಪೋರ್ಟ್ ಬ್ಲೇರ್‌ನಿಂದ ಇಬ್ಬರು ಸಿಬ್ಬಂದಿ ಮತ್ತು ಐದು ಪ್ರಯಾಣಿಕರೊಂದಿಗೆ ಹೊರಟಿತ್ತು. ಎಲ್ಲರನ್ನೂ ರಕ್ಷಿಸಲಾಗಿದ್ದು, ಅವರು ಸುರಕ್ಷಿತವಾಗಿದ್ದಾರೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ ಎಂಬುದಾಗಿ ಪವನ್ ಹನ್ಸ್ ವಕ್ತಾರರು ತಿಳಿಸಿದ್ದಾರೆ.
ಅಂಡಮಾನ್‌ನಲ್ಲಿ ಪತನಗೊಂಡ ಹೆಲಿಕಾಪ್ಟರ್:
<blockquote class="twitter-tweet"><p lang="en" dir="ltr">Pawan Hans Helicopter Crashes into Sea Near Mayabunder , Andaman and Nicobar Islands <a href="https://t.co/1MRtQEFrlo">pic.twitter.com/1MRtQEFrlo</a></p>— shridhar (@Shridhar_31_) <a href="https://twitter.com/Shridhar_31_/status/2026191892443247102?ref_src=twsrc%5Etfw">February 24, 2026</a></blockquote> <script async src="https://platform.twitter.com/widgets.js" charset="utf-8"></script>
ಮಾಯಾಬಂದರ್‌ನಲ್ಲಿ ಇಳಿಯಬೇಕಿದ್ದ ಹೆಲಿಕಾಪ್ಟರ್ ಬೆಳಗ್ಗೆ 9.30ರ ಸುಮಾರಿಗೆ ರನ್‌ವೇಯಿಂದ 300 ಮೀಟರ್ ದೂರದಲ್ಲಿ ಸಮುದ್ರಕ್ಕೆ ಉರುಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಡ ನೋಡುತ್ತಲೇ ಹೆದ್ದಾರಿಯಲ್ಲಿಯೇ ಪತನವಾಯ್ತು ಹೆಲಿಕಾಪ್ಟರ್
ಜಾರ್ಖಂಡ್‍ನ ಛತ್ರಾದಲ್ಲಿ ಏರ್ ಆಂಬ್ಯುಲೆನ್ಸ್ ವಿಮಾನ ಅಪಘಾತಕ್ಕೀಡಾಗಿ ಅದರಲ್ಲಿದ್ದ ಏಳು ಜನರು ಮೃತಪಟ್ಟ ಒಂದು ದಿನದ ನಂತರ ಈ ಘಟನೆ ನಡೆದಿದೆ. ರೆಡ್‌ಬರ್ಡ್ ಏರ್‌ವೇಸ್ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುವ ಬೀಚ್‌ಕ್ರಾಫ್ಟ್ ಸಿ90 ಏರ್ ಆಂಬ್ಯುಲೆನ್ಸ್, ರಾಂಚಿಯಿಂದ ದೆಹಲಿಗೆ ತೆರಳುತ್ತಿದ್ದಾಗ ಸೋಮವಾರ (ಫೆಬ್ರವರಿ 23) ಸಂಜೆ ಸಿಮಾರಿಯಾದ ಬರಿಯಾಟು ಪಂಚಾಯತ್ ಪ್ರದೇಶದಲ್ಲಿ ಕಾಡಿನೊಳಗೆ ಪತನಗೊಂಡಿತು.
ಏರ್ ಆಂಬ್ಯುಲೆನ್ಸ್‌ನಲ್ಲಿದ್ದ ಏಳು ಜನರು ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಮೃತರನ್ನು ಕ್ಯಾಪ್ಟನ್ ವಿವೇಕ್ ವಿಕಾಸ್ ಭಗತ್, ಕ್ಯಾಪ್ಟನ್ ಸವ್ರಾಜದೀಪ್ ಸಿಂಗ್, ಸಂಜಯ್ ಕುಮಾರ್, ಡಾ. ವಿಕಾಸ್ ಕುಮಾರ್ ಗುಪ್ತಾ, ಸಚಿನ್ ಕುಮಾರ್ ಮಿಶ್ರಾ, ಅರ್ಚನಾ ದೇವಿ ಮತ್ತು ಧುರು ಕುಮಾರ್ ಎಂದು ಗುರುತಿಸಲಾಗಿದೆ.
ಬೀಚ್‌ಕ್ರಾಫ್ಟ್ ಸಿ90 ವಿಮಾನ (ವಿಟಿ-ಎಜೆವಿ) ರಾಂಚಿ-ದೆಹಲಿ ವಲಯದಲ್ಲಿ ವೈದ್ಯಕೀಯ ಹಾರಾಟವನ್ನು ನಿರ್ವಹಿಸುತ್ತಿದ್ದಾಗ, ಛತ್ರ ಜಿಲ್ಲೆಯ ಕಸಾರಿಯಾದಲ್ಲಿ ಅಪಘಾತಕ್ಕೀಡಾಯಿತು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನವು ರಾಂಚಿಯಿಂದ 7:11ಕ್ಕೆ ಹಾರಿತು. 7:34ರ ಸಮಯಕ್ಕೆ ಕೋಲ್ಕತ್ತಾದೊಂದಿಗೆ ಸಂಪರ್ಕ ಸಾಧಿಸಿದ ನಂತರ, ವಿಮಾನವು ವಾರಣಾಸಿಯಿಂದ ಸುಮಾರು 100 ನಾಟಿಕಲ್ ಮೈಲುಗಳಷ್ಟು ಆಗ್ನೇಯಕ್ಕೆ ಕೋಲ್ಕತ್ತಾದೊಂದಿಗಿನ ಸಂವಹನ ಮತ್ತು ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತು. ಹಾರಾಟದ ಸಮಯದಲ್ಲಿ, ಅದು ಇದ್ದಕ್ಕಿದ್ದಂತೆ ಸಂಜೆ 7:34ಕ್ಕೆ ವಾಯು ಸಂಚಾರ ನಿಯಂತ್ರಣದೊಂದಿಗಿನ ಸಂಪರ್ಕ ಕಳೆದುಕೊಂಡಿತು.
ವಿಮಾನಯಾನ ಅಧಿಕಾರಿಗಳು ತಕ್ಷಣವೇ ಹೈ ಅಲರ್ಟ್ ಘೋಷಿಸಿದರು. ವಿಮಾನವು ಛತ್ರಾ ಜಿಲ್ಲೆಯ ಸಿಮಾರಿಯಾ ಪಂಚಾಯತ್ ಪ್ರದೇಶದ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ. ಸ್ಥಳೀಯರಿಗೆ ದೊಡ್ಡ ಶಬ್ಧ ಕೇಳಿಬಂದಿದೆ. ಕಾಡಿನಿಂದ ಹೊಗೆ ಮೇಲಕ್ಕೇರುತ್ತಿರುವುದನ್ನು ಅವರು ನೋಡಿದ್ದಾರೆ. ಭಯಭೀತಿರಾದ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮತ್ತು ಜಿಲ್ಲಾಡಳಿತ ತಂಡಗಳು ಸ್ಥಳಕ್ಕೆ ಧಾವಿಸಿದವು.