ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Meloni-Modi) ಅವರ ಆತ್ಮಚರಿತ್ರೆ "ಐ ಆಮ್ ಜಾರ್ಜಿಯಾ - ಮೈ ರೂಟ್ಸ್, ಮೈ ಪ್ರಿನ್ಸಿಪಲ್ಸ್" (ರೂಪಾ ಪಬ್ಲಿಕೇಷನ್ಸ್) ನ ಭಾರತೀಯ ಆವೃತ್ತಿಗೆ ಮುನ್ನುಡಿ ಬರೆದಿದ್ದಾರೆ. ಈ ಪುಸ್ತಕ ಶೀಘ್ರದಲ್ಲಿಯೇ (Narendra Modi) ಬಿಡುಗಡೆಯಾಗಲಿದೆ. ಮೋದಿ ಈ ಪುಸ್ತಕದ ಕುರಿತು ಮನ್ ಕಿ ಬಾತ್‌ನ 128 ನೇ ಆವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಮೆಲೋನಿಯವರ ಪುಸಕ್ತದ ಮುನ್ನುಡಿ ಬರೆದಿರುವುದು "ಮಹಾನ್" ಗೌರವ ಎಂದು ಕರೆದ ಮೋದಿ, ಮೆಲೋನಿ ಬಗ್ಗೆ ತಮ್ಮ "ಗೌರವ, ಮೆಚ್ಚುಗೆ ಮತ್ತು ಸ್ನೇಹ"ವನ್ನು ವ್ಯಕ್ತಪಡಿಸಿದರು.
ಮೆಲೋನಿಯನ್ನು ಮೋದಿ ಅತ್ಯುತ್ತಮ ನಾಯಕಿ ಎಂದು ಬಣ್ಣಿಸಿದರು. ಪ್ರಧಾನಿ ಮೆಲೋನಿಯವರ ಜೀವನ ಮತ್ತು ನಾಯಕತ್ವವು ಈ ಕಾಲಾತೀತ ಸತ್ಯಗಳನ್ನು ನಮಗೆ ನೆನಪಿಸುತ್ತದೆ... ಇದು (ಭಾರತದಲ್ಲಿ) ಒಬ್ಬ ಅತ್ಯುತ್ತಮ ಸಮಕಾಲೀನ ರಾಜಕೀಯ ವ್ಯಕ್ತಿಯ ಜೀವನದ ಕಥೆಯಾಗಿದೆ ಎಂದು ಅವರು ಹೇಳಿದರು. ಭಾರತೀಯ ಮತ್ತು ಇಟಾಲಿಯನ್ ಮೌಲ್ಯಗಳ ನಡುವಿನ ಹೋಲಿಕೆಗಳ ಕುರಿತು ಮಾತನಾಡಿದ ಮೋದಿ, ಸಾಂಸ್ಕೃತಿಕ ಪರಂಪರೆ ಮತ್ತು ಸಮಾನತೆಯಲ್ಲಿ ಮೆಲೋನಿಯವರ ನಂಬಿಕೆಯನ್ನು ಶ್ಲಾಘಿಸಿದರು.
ಮೂಲತಃ 2021 ರಲ್ಲಿ ಮೆಲೋನಿ ವಿರೋಧ ಪಕ್ಷದಲ್ಲಿದ್ದಾಗ ಪ್ರಕಟವಾದ ಈ ಆತ್ಮಚರಿತ್ರೆ ಹೆಚ್ಚು ಮಾರಾಟವಾದ ಪುಸ್ತಕವಾಯಿತು. ಜೂನ್ 2025 ರಲ್ಲಿ ಬಿಡುಗಡೆಯಾದ ಈ ಯುಎಸ್ ಆವೃತ್ತಿಯು, ಯುಎಸ್ ಅಧ್ಯಕ್ಷರ ಹಿರಿಯ ಮಗ ಡೊನಾಲ್ಡ್ ಟ್ರಂಪ್ ಜೂನಿಯರ್ ಅವರ ಮುನ್ನುಡಿಯನ್ನು ಒಳಗೊಂಡಿತ್ತು, ಅವರು ಅವರ "ದುಡಿಯುವ ವರ್ಗದ" ಬೇರುಗಳು ಮತ್ತು ಅವರ ಪ್ರಯಾಣದ ದೇಶಭಕ್ತಿಯ ಸ್ವರವನ್ನು ಎತ್ತಿ ತೋರಿಸಿದರು.
ಈ ಸುದ್ದಿಯನ್ನೂ ಓದಿ: Mann Ki Baat: "ಅವರ ಕೃತಿಗಳು ಸದಾ ಜೀವಂತ" ; ಮನ್ ಕಿ ಬಾತ್‌ನಲ್ಲಿ ಭೈರಪ್ಪನವರನ್ನು ನೆನೆದ ಮೋದಿ
ಮೆಲೋನಿಯವರ ಪುಸ್ತಕವು ಅವಿವಾಹಿತ ತಾಯಿಯಾಗಿ ದಾಳಿಗಳನ್ನು ಎದುರಿಸುವುದರಿಂದ ಹಿಡಿದು ಗರ್ಭಿಣಿಯಾಗಿದ್ದಾಗ ಪ್ರಚಾರ ಮಾಡುವವರೆಗೆ ವೈಯಕ್ತಿಕ ಹೋರಾಟಗಳನ್ನು ವಿವರಿಸುತ್ತದೆ. ಅವರ ಭಾಷಣಗಳು ಹೆಚ್ಚಾಗಿ ಗುರುತು ಮತ್ತು ಸ್ಥಿತಿಸ್ಥಾಪಕತ್ವದ ಮೇಲೆ ಕೇಂದ್ರೀಕೃತವಾಗಿದ್ದು, "ನಾನು ಜಾರ್ಜಿಯಾ, ನಾನು ಮಹಿಳೆ, ನಾನು ಇಟಾಲಿಯನ್, ನಾನು ಕ್ರಿಶ್ಚಿಯನ್" ಎಂಬ ಘೋಷಣೆಯನ್ನು ಒಳಗೊಂಡಿದೆ. ಮಾತೃತ್ವ, ರಾಷ್ಟ್ರೀಯ ಗುರುತು ಮತ್ತು ಸಂಪ್ರದಾಯ"ವನ್ನು ರಕ್ಷಿಸಿದ್ದಕ್ಕಾಗಿ ಮೆಲೋನಿಯನ್ನು ಮೋದಿ ಶ್ಲಾಘಿಸಿದ್ದಾರೆ.