ನವದೆಹಲಿ: ಹತ್ತು ದಿನಗಳ ಬಜೆಟ್ ಅಧಿವೇಶನದಲ್ಲಿ (Parliament Budget Session) 20ರಿಂದ 25 ಗಂಟೆಗಳ ಕಾಲ ನಷ್ಟವಾಗಿದೆ. ಇದರಿಂದಾಗಿ ತೆರಿಗೆದಾರರ 57 ಕೋಟಿ ರೂ. ನಷ್ಟವಾಗಿದೆ. ಜನವರಿ 28ರಂದು ಆರಂಭವಾಗಿರುವ ಬಜೆಟ್ ಅಧಿವೇಶ (Budget Session 2026) ಶುಕ್ರವಾರ ಹತ್ತು ದಿನವನ್ನು ಪೂರ್ಣಗೊಳಿಸಿದೆ. ಸಂಸತ್ತಿನ (Parliament) ಅಧಿವೇಶನದ ಒಂದು ನಿಮಿಷಕ್ಕೆ 2.5 ಲಕ್ಷ ರೂ. ವೆಚ್ಚವಾಗುತ್ತದೆ. ಸದನಗಳನ್ನು ಮುಂದೂಡಿದರೂ ಈ ವೆಚ್ಚ ಹಾಗೆಯೇ ಇರುತ್ತದೆ. ಯಾಕೆಂದರೆ ಇದರಲ್ಲಿ ಹೈಟೆಕ್ ಸಂಸತ್ತು ಕಟ್ಟಡದ ನಿರ್ವಹಣಾ ವೆಚ್ಚ, ಸಿಬ್ಬಂದಿ ವೇತನ, ಭದ್ರತೆ ಹಾಗೂ ಇನ್ನಿತರ ಹಲವು ಸವಲತ್ತುಗಳು ಸೇರಿರುತ್ತವೆ.
ರಾಜ್ಯಸಭೆ ಮತ್ತು ಲೋಕಸಭೆ ಕಾರ್ಯನಿರ್ವಹಿಸಲು ಒಂದು ನಿಮಿಷಕ್ಕೆ 2.5 ಲಕ್ಷ ರೂ., ಗಂಟೆಗೆ 1.5 ಕೋಟಿ ರೂ., ದಿನಕ್ಕೆ 9 ಕೋಟಿ ರೂ. ಖರ್ಚಾಗುತ್ತದೆ. ಇದರಿಂದ ಈವರೆಗೆ ಆಗಿರುವ ಅಡಚಣೆಯಲ್ಲಿ ತೆರಿಗೆದಾರರ ಹಣದ 57 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಯಮುನೆಯ ಕಲುಷಿತ ನೀರಿನಲ್ಲಿ ಚಿಕ್ಕ ಮಕ್ಕಳಿಗೆ ಸ್ನಾನ: ಎಚ್ಚರಿಕೆ ಕೊಟ್ರೂ ಬುದ್ಧಿ ಕಲಿಯದ ʼಮಹಾತಾಯಿʼ
ಜನವರಿ 28 ರಂದು ಬಜೆಟ್ ಅಧಿವೇಶನ ಪ್ರಾರಂಭವಾಗಿದ್ದು, ಲೋಕಸಭೆಯಲ್ಲಿ ಸುಮಾರು 30-35 ನಿಗದಿತ ಕೆಲಸದ ಸಮಯವನ್ನು ನೀಡಲಾಗಿದೆ. ಅದರಲ್ಲಿ 20ರಿಂದ 25 ಗಂಟೆಗಳ ಕಾಲ ಅಡಚಣೆಗಳಿಂದಾಗಿ ಕಳೆದುಹೋಗಿದೆ. ಇದರಿಂದ 30- 35 ಕೋಟಿ ರೂ. ನಷ್ಟವಾಗಿದೆ. ಇನ್ನು ರಾಜ್ಯಸಭೆಯಲ್ಲಿ 12-15 ಗಂಟೆಗಳು ನಷ್ಟವಾಗಿದ್ದು, ಇದರಿಂದ 18 ರಿಂದ 22 ಕೋಟಿ ರೂ. ನಷ್ಟವಾಗಿದೆ. ಹೀಗಾಗಿ ಒಟ್ಟು ಎರಡೂ ಸದನಗಳಲ್ಲಿನ ಅಡಚಣೆಗಳಿಂದ ಸರಿಸುಮಾರು 57 ಕೋಟಿ ರೂ. ನಷ್ಟವಾಗಿದೆ. ಸದನಗಳ ವೆಚ್ಚವು ಹೈಟೆಕ್ ಸಂಸತ್ತಿನ ಕಟ್ಟಡದ ನಿರ್ವಹಣೆ, ಸಿಬ್ಬಂದಿ ವೇತನ, ಭದ್ರತಾ ವೆಚ್ಚಗಳು ಸೇರಿರುತ್ತವೆ.
ಮೇಘಾಲಯ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಭಾರೀ ಸ್ಫೋಟ; 16 ಕಾರ್ಮಿಕರು ಸಾವು, ಹಲವರು ಸಿಲುಕಿರುವ ಶಂಕೆ
ಬಜೆಟ್ ಅಧಿವೇಶನ ಆರಂಭವಾದಾಗಿನಿಂದ ವಿರೋಧ ಪಕ್ಷವು ಸದನದಲ್ಲಿ ಗದ್ದಲವನ್ನು ಉಂಟು ಮಾಡುತ್ತಿದೆ. ಭಾರತ-ಯುಎಸ್ ವ್ಯಾಪಾರ ಒಪ್ಪಂದ, ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಂಸದೀಯ ನಿಯಮಗಳನ್ನು ಉಲ್ಲೇಖಿಸಿ ನಿವೃತ್ತ ಜನರಲ್ ಎಂಎಂ ನರವಾಣೆ ಅವರ ಪುಸ್ತಕದ ಆಯ್ದ ಭಾಗವನ್ನು ಓದಲು ಆಡಳಿತ ಪಕ್ಷದ ನಾಯಕರು ಅಡ್ಡಿಪಡಿಸಿದ ಕಾರಣದಿಂದ ಸೋಮವಾರ ಮತ್ತು ಮಂಗಳವಾರ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಗದ್ದಲ ಉಂಟು ಮಾಡಿದ್ದವು. ಈ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಕಾಂಗ್ರೆಸ್‌ನ ಏಳು ಮತ್ತು ಸಿಪಿಐ-ಎಂನ ಒಬ್ಬರು ಸೇರಿದಂತೆ ಒಟ್ಟು ಎಂಟು ವಿರೋಧ ಪಕ್ಷದ ಸದಸ್ಯರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದರು.