ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತ-ಅಮೆರಿಕ ಸುಂಕ ಸಮರ ಅಂತ್ಯ; ಚೀನಾ, ಪಾಕಿಸ್ತಾನ, ಬಾಂಗ್ಲಾದೇಶಕ್ಕೇನು ಹೊಡೆತ?

ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದವಾಗಿದ್ದು, ಇದರ ಅಡಿಯಲ್ಲಿ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಿದರೆ ವಾಷಿಂಗ್ಟನ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಪ್ರಸ್ತುತ ಶೇ. 50 ರಿಂದ ಶೇ. 18 ಕ್ಕೆ ಇಳಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ (America India Tread Treaty) ಒಪ್ಪಂದವಾಗಿದ್ದು, ಇದರ ಅಡಿಯಲ್ಲಿ ನವದೆಹಲಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಿ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡಿದರೆ ವಾಷಿಂಗ್ಟನ್ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಪ್ರಸ್ತುತ ಶೇ. 50 ರಿಂದ ಶೇ. 18 ಕ್ಕೆ ಇಳಿಸಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಕರೆಯ ನಂತರ ಅಮೆರಿಕದ ನಾಯಕ ಸಾಮಾಜಿಕ ಮಾಧ್ಯಮದಲ್ಲಿ ಈ ಒಪ್ಪಂದವನ್ನು ಘೋಷಿಸಿದರು.

ಭಾರತ-ಯುಎಸ್ ಒಪ್ಪಂದಿಂದ ಪಾಕ್‌, ಬಾಂಗ್ಲಾಗೆ ಹೊಡೆತ?

ಚೀನಾ, ಪಾಕಿಸ್ತಾನ, ಇಂಡೋನೇಷ್ಯಾ, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳ ಮೇಲೆ ಅಮೆರಿಕ ಸುಂಕ ಹೇರಿದೆ. ಆದಾಗ್ಯೂ, ಭಾರತದೊಂದಿಗಿನ ವ್ಯಾಪಾರದ ಮೇಲೆ ಅಮೆರಿಕ ವಿಧಿಸುವ ಸುಂಕಗಳು ಅದರ ಯುರೋಪಿಯನ್ ಪಾಲುದಾರರ ಮೇಲೆ ಮತ್ತು ಜಪಾನ್ ಮತ್ತು ದಕ್ಷಿಣ ಕೊರಿಯಾ ವಿಧಿಸುವ ಸುಂಕಗಳಿಗಿಂತ ಸ್ವಲ್ಪ ಹೆಚ್ಚಾಗಿದೆ. ಇದೀಗ ಅಮೆರಿಕ ಸುಂಕವನ್ನು ಕಡಿಮೆ ಮಾಡಿದರೆ, ಭಾರತಕ್ಕೆ ತೆರಿಗೆ ಹೊರೆ ಕಡಿಮೆಯಾಗುತ್ತದೆ.

ಹೆಚ್ಚಿನ ಸುಂಕ ಎದುರಿಸುತ್ತಿರುವ ದೇಶಗಳು

ಅಮೆರಿಕದಿಂದ ಅತಿ ಹೆಚ್ಚು ಸುಂಕ ವಿಧಿಸುತ್ತಿರುವ ಕೆಲವು ದೇಶಗಳಲ್ಲಿ ಬ್ರೆಜಿಲ್ (ಶೇ. 50), ಮ್ಯಾನ್ಮಾರ್ (ಶೇ. 40), ಲಾವೋಸ್ (ಶೇ. 40), ಚೀನಾ (ಶೇ. 37) ಮತ್ತು ದಕ್ಷಿಣ ಆಫ್ರಿಕಾ (ಶೇ. 30) ಸೇರಿವೆ. ಆಗ್ನೇಯ ಏಷ್ಯಾದಲ್ಲಿ, ಹೆಚ್ಚಿನ ಸುಂಕವನ್ನು ಎದುರಿಸುತ್ತಿರುವ ದೇಶಗಳಲ್ಲಿ ವಿಯೆಟ್ನಾಂ (ಶೇಕಡಾ 20), ಬಾಂಗ್ಲಾದೇಶ (ಶೇಕಡಾ 20), ಪಾಕಿಸ್ತಾನ (ಶೇಕಡಾ 19), ಮಲೇಷ್ಯಾ (ಶೇಕಡಾ 19), ಕಾಂಬೋಡಿಯಾ (ಶೇಕಡಾ 19) ಮತ್ತು ಥೈಲ್ಯಾಂಡ್ (ಶೇಕಡಾ 19) ಸೇರಿವೆ.

"ಈ ಬಜೆಟ್​ 2047 ರ ವಿಕಸಿತ ಭಾರತಕ್ಕೆ ಅಡಿಪಾಯ"; ವಿತ್ತ ಸಚಿವೆಯನ್ನು ಹೊಗಳಿದ ಮೋದಿ

ಡೋನಾಲ್ಡ್ ಟ್ರಂಪ್‌ ಸುಂಕ ಕಡಿತ ಘೋಷಣೆ

"ಭಾರತದ ಮೇಲೆ ಹೇರಲಾಗಿದ್ದ ಶೇ. 25ರಷ್ಟು ಸುಂಕವನ್ನು ಶೇ. 18ಕ್ಕೆ ಇಳಿಸಲಾಗಿದೆ. ಭಾರತವು ಅಮೆರಿಕದಿಂದ 500 ಶತಕೋಟಿ ಡಾಲರ್‌ಗಳಿಗೂ ಹೆಚ್ಚು ಮೌಲ್ಯದ ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರ ಹಲವು ಉತ್ಪನ್ನಗಳನ್ನು ಖರೀದಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಮುಂದುವರೆದು, "ಪ್ರಧಾನಿ ಮೋದಿ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲು ಮತ್ತು ಅಮೆರಿಕದಿಂದ ಮತ್ತು ಬಹುಶಃ ವೆನೆಜುವೆಲಾದಿಂದ ಹೆಚ್ಚಿನ ತೈಲವನ್ನು ಖರೀದಿಸಲು ಒಪ್ಪಿಕೊಂಡಿದ್ದಾರೆ" ಎಂದು ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಭಾರತಕ್ಕೆ ವೆನೆಜುವೆಲಾ ತೈಲ ಮಾರಾಟ ಮಾಡುವ ಅಮೆರಿಕದ ಯೋಜನೆ ಸಫಲವಾದಂತಿದೆ.

Vishakha Bhat Heggar

View all posts by this author