ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gemini AI Trend: ನೀವು ಜೆಮಿನಿ ಎಐನ ಫೋಟೊ ಬಳಸಿದ್ದೀರಾ? ಇದು ಎಷ್ಟು ಸೇಫ್‌?

Gemini AI Trend: ಗಿಬ್ಲಿ ಟ್ರೆಂಡ್ ವೈರಲ್ ಆದ ಬಳಿಕ ಇತ್ತೀಚೆಗಷ್ಟೇ ಗೂಗಲ್ ನ್ಯಾನೊ ಬನಾನಾ ಟ್ರೆಂಡ್ ಕೂಡ ವೈರಲ್ ಆಗಿತ್ತು. ಇದೀಗ ವಿಂಟೇಜ್ ಲುಕ್ ಫೋಟೊ ಟ್ರೆಂಡ್ ಮಾಡುತ್ತಿದೆ. ಫೇಸ್ ಬುಕ್, ಇನ್ ಸ್ಟಾ ಗ್ರಾಮ್, ಎಲ್ಲಿ ನೋಡಿದರು ವಿಟೆಂಜ್ ಲುಕ್ ನಲ್ಲಿ ಕಾಣುವ ಫೋಟೊಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಬಳಸುತ್ತಿದ್ದದ್ದನ್ನು ಕಾಣಬಹುದು. ಆದರೆ ಇಂತಹ ಜೆಮಿನಿ ಫೋಟೊಗಳಲ್ಲಿ ಸುರಕ್ಷತೆಗೆ ಆಧ್ಯತೆ ಇದೆಯೇ ಎಂಬ ಪ್ರಶ್ನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜೆಮಿನಿ ಎಐ ವಿಂಟೇಜ್ ಫೋಟೊಗಳ ಬಳಕೆ ಸುರಕ್ಷಿತವೇ?

-

Profile Pushpa Kumari Sep 15, 2025 5:49 PM

ನವದೆಹಲಿ: ಇತ್ತೀಚಿನ ದಿನದಲ್ಲಿಎಐ ಅಪ್ಲಿಕೇಶನ್ ಅನ್ನು ಬಳಕೆ ಮಾಡುವವರ ಪ್ರಮಾಣ ಹೆಚ್ಚಾಗಿದೆ ಎಂದೇ ಹೇಳಬಹುದು. ವಾಯ್ಸ್ ಮಾಡಲ್ಯುಶನ್ಸ್ , ಫೋಟೊ ಎಡಿಟ್ ಸೇರಿದಂತೆ ಎಐ ಬಹಳ ಹೆಚ್ಚಿನ ಮಟ್ಟಕ್ಕೆ ಬಳಕೆಯಾಗುತ್ತಿದೆ. ಅದರಲ್ಲೂ ಜೆಮಿನಿ (Gemini AI) ಮೂಲಕ ಫೋಟೊ ಎಡಿಟಿಂಗ್ ಕಲಿತ ಜನರಿಗಂತೂ ಈಗ ಕ್ಯಾಮರಾ ಫೋಟೊಗಿಂತಲೂ ಇದೆ ಬಹಳ ಸುಂದರವೆನಿಸಿದೆ. ಮುಖ ಎಷ್ಟೇ ಕಪ್ಪಗಿರಲಿ, ಸುಕ್ಕು ಬಿದ್ದಿರಲಿ, ಬಟ್ಟೆ ಹಾಳಾಗಿರಲಿ ಅಥವಾ ಹಳೆ ಬಟ್ಟೆಯೇ ಆಗಿರಲಿ ಜೆಮಿನಿ ಎಐ ನಲ್ಲಿ ನಾವು ಸರಿಯಾಗಿ ಅಸಿಸ್ಟೆಂಟ್ ಮಾಡಿದರೆ ಬಹಳ ಸುಂದರವಾದ ಫೋಟೊ ಪಡೆಯಬಹುದು. ಗಿಬ್ಲಿ ಟ್ರೆಂಡ್ ವೈರಲ್ ಆದ ಬಳಿಕ ಇತ್ತೀಚೆಗಷ್ಟೇ ಗೂಗಲ್ ನ್ಯಾನೊ ಬನಾನಾ ಟ್ರೆಂಡ್ ಕೂಡ ವೈರಲ್ ಆಗಿತ್ತು. ಇದೀಗ ವಿಂಟೇಜ್ ಲುಕ್ ಫೋಟೊ ಟ್ರೆಂಡ್ ಮಾಡುತ್ತಿದೆ. ಫೇಸ್ ಬುಕ್, ಇನ್ ಸ್ಟಾ ಗ್ರಾಮ್, ಥ್ರೆಡ್ಸ್ ಎಲ್ಲಿ ನೋಡಿದರು ವಿಟೆಂಜ್ ಲುಕ್ ನಲ್ಲಿ ಕಾಣುವ ಫೋಟೊಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಬಳಸು ತ್ತಿದ್ದದ್ದನ್ನು ಕಾಣಬಹುದು. ಆದರೆ ಇಂತಹ ಜೆಮಿನಿ ಫೋಟೊಗಳಲ್ಲಿ ಸುರಕ್ಷತೆಗೆ ಆಧ್ಯತೆ ಇದೆಯೇ ಎಂಬ ಪ್ರಶ್ನೆ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಗೂಗಲ್ ಮತ್ತು ಓಪನ್‌ಎಐ (ಚಾಟ್‌ಜಿಪಿಟಿ)ನಲ್ಲಿ ನಾವು ಅಪ್ಲೋಡ್ ಮಾಡುವ ವಿಷಯಗಳು ಮತ್ತು ಫೋಟೊಗಳು ಬಳಕೆದಾರರ ಸುರಕ್ಷತೆ ವಿಚಾರದಲ್ಲಿ ಎಷ್ಟರ ಮಟ್ಟಿಗೆ ಬದ್ಧತೆ ಇರುತ್ತದೆ ಎಂಬ ಪ್ರಶ್ನೆ ಇದೀಗ ಎದುರಾಗಿದೆ. ಅಪ್‌ಲೋಡ್ ಮಾಡಿದ ವಿಚಾರವನ್ನು ದುರುಪಯೋಗ ಪಡಿಸಿಕೊಳ್ಳುವ ಅಥವಾ ಬಳಕೆದಾರನ ಒಪ್ಪಿಗೆಯಿಲ್ಲದೆ ಅದನ್ನು ಮಾರ್ಪಡಿಸುವ ಸಾಧ್ಯತೆ ಕೂಡ ಇರಲಿದೆ‌. ಆದರೆ ಈ ಸಮಸ್ಯೆ ಪರಿಹಾರ ಮಾಡಲು ಎಐ ಜೆಮಿನಿಯೂ ಡಿಜಿಟಲ್ ವಾಟರ್‌ಮಾರ್ಕ್ ಸೆಟಪ್ ಅನ್ನು ಸಹ ಪರಿಚಯಿಸಿದೆ.

ಎಐ ನಲ್ಲಿ ಕೂಡ ಡಿಜಿಟಲ್ ವಾಟರ್‌ಮಾರ್ಕ್ (ಸಿಂಥ್‌ಐಡಿ) ಹಾಗೂ ಮೆಟಾಡೇಟಾ ಟ್ಯಾಗ್‌ಗಳನ್ನು ಕೂಡ ಮಾಡಲಾಗಿದೆ. ಈ ಮೂಲಕ ಈ ಚಿತ್ರ ಎಐ ನಿಂದ ರಚಿತವಾಗಿದ್ದು ಎಂದು ಗುರು ತಿಸುವ ಉದ್ದೇಶದಿಂದ ಈ ವಾಟರ್ ಮಾರ್ಕ್ ಮಾಡಲಾಗಿದ್ದು ಇದರಿಂದ ಸಮಸ್ಯೆ ಪರಿಹಾರ ಆಗುತ್ತದೆ ಎನ್ನಲಾಗುತ್ತದೆ. ಆದರೆ ಬಹುತೇಕರು ಇದರ ವಾಟರ್ ಮಾರ್ಕ್ ಕ್ರಾಪ್ ಮಾಡಿ ಫೋಟೊ ಅಪ್ಲೋಡ್ ಮಾಡುತ್ತಿದ್ದಾರೆ. ಅಂತೆಯೇ ಈ ವಾಟರ್ ಮಾರ್ಕ್ ಬರಿಗಣ್ಣಿಗೆ ಗೋಚರಿಸಲಿಲ್ಲ ಅಂದ ಮೇಲೆ ಇದು ಸುರಕ್ಷಿತವೇ ಎಂಬುದು ಬಳಕೆದಾರರ ಪ್ರಶ್ನೆಯಾಗಿದೆ.

ನಿಮ್ಮ ಫೋಟೊ ಸುರಕ್ಷಿತವಾಗಿಸಲು ಹೀಗೆ ಮಾಡಿ:

  • ನೀವು ಏನನ್ನು ಅಪ್‌ಲೋಡ್ ಮಾಡುತ್ತೀರಿ ಎಂಬುದರ ಬಗ್ಗೆ ನೀವು ಮೊದಲೇ ಯೋಚಿಸಬೇಕು. ತೀರ ಖಾಸಗಿ ಫೋಟೊ ಅಪ್ಲೋಡ್ ಮಾಡಬೇಡಿ. ಇದನ್ನು ಸಾಧ್ಯವಾದಷ್ಟು ತಪ್ಪಿಸಿದರೆ ನಿಮ್ಮ ಫೋಟೊ ಸುರಕ್ಷಿತವಾಗಿ ಇರಲಿದೆ.

ಇದನ್ನು ಓದಿ:Viral News: ‘ಹೂವಿನ ಬಾಣದಂತೆ’ ಹಾಡಿನಿಂದ ಫೇಮಸ್‌ ಆದ ಹುಡುಗಿಯ ಇನ್‌ಸ್ಟಾದಲ್ಲಿ ಫಾಲೋವರ್ಸ್ ಸಂಖ್ಯೆ 150ರಿಂದ 40 ಸಾವಿರಕ್ಕೆ!

  • ಅಪ್‌ಲೋಡ್ ಮಾಡುವ ಮೊದಲು ಟ್ಯಾಗ್‌ಗಳು, ಇದನ್ನು ಎಲ್ಲಿಂದ ಮಾಡಲಾಗಿದೆ ಇತ್ಯಾದಿ ಗಳಂತಹ ವಿವರಗಳನ್ನು ತೆಗೆದುಹಾಕಿ. ಇದು ನಿಮ್ಮ ವೈಯಕ್ತಿಕ ಮಾಹಿತಿ ದುರುಪಯೋಗ ಮಾಡುವುದನ್ನು ತಪ್ಪಿಸಲಿದೆ.
  • ಅಪ್ಲಿಕೇಶನ್‌ ಹಾಗೂ ಸಾಮಾಜಿಕ ಮಾಧ್ಯಮ ಪ್ಲಾ ಟ್‌ಫಾರ್ಮ್‌ಗಳಲ್ಲಿ ಗೌಪ್ಯತೆ ಕಾಯ್ದಿಟ್ಟು ಕೊಳ್ಳುವ ಸೆಟ್ಟಿಂಗ್‌ಗಳನ್ನು ಸುರಕ್ಷತೆ ದೃಷ್ಟಿಯಿಂದ ಬಳಸುವುದು ಬಹಳ ಉತ್ತಮ ಎನ್ನಬಹುದು. ನೀವು ಫೇಸ್ ಬುಕ್ ಮತ್ತು ಇನ್ ಸ್ಟಾ ಗ್ರಾಂ ನಲ್ಲಿ ಫೋಟೊ ಹಾಕುವ ಮೊದಲು ನಿಮ್ಮ ಫೋಟೊಗಳು ಪ್ರೈವೇಸಿಯಲ್ಲಿಟ್ಟು ಅಪ್ಲೋಡ್ ಮಾಡುವುದು ಉತ್ತಮ.
  • ನಿಮ್ಮ ಫೋಟೊ ಮಿಸ್ ಯೂಸ್ ಆಗದಂತೆ ತಡೆಯಲು ಅನೇಕ ಅಪ್ಲಿಕೇಷನ್ ಹಾಗೂ ಸೆಟ್ಟಿಂಗ್ ಕೂಡ ಇದೆ. ಅದರ ಮಾಹಿತಿ ಪಡೆದು ಬಳಿಕ ಅಪ್ಲೋಡ್ ಮಾಡಿದರೆ ನಿಮ್ಮ ವೈಯಕ್ತಿಕ ಸುರಕ್ಷತೆ ದೃಷ್ಟಿಯಿಂದ ಬಹಳ ಉತ್ತಮ ಎನ್ನಬಹುದು.