Viral Video: ಪೊಲೀಸರ ಎದುರೇ ಆಟೋ ಚಾಲಕನಿಂದ ಪ್ರಯಾಣಿಕನಿಗೆ ಕಪಾಳಮೋಕ್ಷ- ವಿಡಿಯೋ ವೈರಲ್
Rickshaw Driver Slaps Passenger: ರಸ್ತೆ ಮಧ್ಯದಲ್ಲೇ ಇಳಿಸಿದ್ದಲ್ಲದೆ, ರಿಕ್ಷಾ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಆಘಾತಕಾರಿ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಈ ಘಟನೆ ನಡೆದಿದೆ. ಇಬ್ಬರ ನಡುವೆ ವಾಗ್ವಾದವಾಗಿ ಈ ಘಟನೆ ಸಂಭವಿಸಿದೆ.

-

ಛತ್ತರ್‌ಪುರ: ಪೊಲೀಸರ ಮುಂದೆಯೇ ರಿಕ್ಷಾ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶ (Madhya Pradesh) ದ ಛತ್ತರ್‌ಪುರದಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ (Viral Video) ಆಗುತ್ತಿದೆ. ಶುಕ್ರವಾರ ತಡರಾತ್ರಿ ಛತ್ರಸಾಲ್ ಚೌಕದಲ್ಲಿ ಪ್ರಯಾಣ ದರದ ಬಗ್ಗೆ ನಡೆದ ವಾಗ್ವಾದದ ನಂತರ ರಿಕ್ಷಾ ಚಾಲಕ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾನೆ.
ವರದಿಯ ಪ್ರಕಾರ, ಪ್ರಯಾಣಿಕನನ್ನು ದೇವಿ ರಸ್ತೆಯ ನಿವಾಸಿ ಕೇಶು ಚೌರಾಸಿಯಾ ಎಂದು ಗುರುತಿಸಲಾಗಿದೆ. ಆತ ಬಸ್ ನಿಲ್ದಾಣದ ಬಳಿಯ ಖಾಸಗಿ ಆಸ್ಪತ್ರೆಯಿಂದ ಮನೆಗೆ ಹಿಂತಿರುಗುತ್ತಿದ್ದರು. ರಿಕ್ಷಾ ಬಾಡಿಗೆ 30 ರೂ. ಎಂದು ಹೇಳಿದ್ದಕ್ಕೆ ಆಟೋಗೆ ಹತ್ತಿದ್ದಾಗಿ ಪ್ರಯಾಣಿಕ ಹೇಳಿದ್ದಾರೆ. ಆದರೆ ಚಾಲಕ ಛತ್ರಸಾಲ್ ಚೌಕದಲ್ಲಿ ಆಟೋ ನಿಲ್ಲಿಸಿದ್ದು, ಮನೆಗೆ ಕರೆದೊಯ್ಯಲು ನಿರಾಕರಿಸಿದ್ದಾನೆ.
ಈ ಬಗ್ಗೆ ಕೇಶು ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಚಾಲಕ ಆತನಿಗೆ ಕಪಾಳಮೋಕ್ಷ ಮಾಡಿ, ತನ್ನ ಸ್ನೇಹಿತರನ್ನು ಕರೆದು ಥಳಿಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಡಯಲ್-112 ಪೊಲೀಸ್ ಗಸ್ತು ವಾಹನವು ಕೂಡ ಸಮೀಪದಲ್ಲಿತ್ತು. ರಿಕ್ಷಾ ಚಾಲಕ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡುವುದನ್ನು ಮತ್ತು ನಂತರ ಪೊಲೀಸರು ಮಧ್ಯಪ್ರವೇಶಿಸಿ ಗುಂಪನ್ನು ಚದುರಿಸುವುದನ್ನು ವಿಡಿಯೊದಲ್ಲಿ ನೋಡಬಹುದು.
ವಿಡಿಯೊ ವೀಕ್ಷಿಸಿ:
#WATCH | Rickshaw Driver Hits Passenger In Front Of Police In #MadhyaPradesh's Chhatarpur; Video Goes Viral #MPNews pic.twitter.com/6WxyU58xDx
— Free Press Madhya Pradesh (@FreePressMP) September 14, 2025
ಆದರೆ, ಪ್ರಯಾಣಿಕನು ಔಪಚಾರಿಕ ದೂರು ದಾಖಲಿಸದ ಕಾರಣ ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಆತನನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ. ತನ್ನ ಅತ್ತಿಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರಿಂದ ಆಸ್ಪತ್ರೆಗೆ ಹೋಗಿದ್ದಾಗಿ ಕೇಶು ತಿಳಿಸಿದ್ದಾರೆ. ಮನೆಗೆ ಹಿಂದಿರುಗುವಾಗ ಪ್ರಯಾಣ ದರದ ವಿವಾದದ ಮೇಲೆ ತನ್ನ ಮೇಲೆ ಹಲ್ಲೆ ನಡೆಸಲಾಯಿತು ಎಂದು ದೂರಿದ್ದಾರೆ.
ಇನ್ನು ಈ ಸಂಬಂಧ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ನಗರ ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅರವಿಂದ್ ಡಂಗಿ ಹೇಳಿದ್ದಾರೆ. ಆದರೆ ತನಿಖೆಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಇದನ್ನೂ ಓದಿ: Viral Video: ಅಲ್ಲಾಹು ವಿರುದ್ಧ ಅವಹೇಳನಕಾರಿ ಘೋಷಣೆ; ಶಾಕಿಂಗ್ ವಿಡಿಯೊ ಫುಲ್ ವೈರಲ್