ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಭಾರತದ ಕನಸುಗಳನ್ನು ನನಸಾಗಿಸಲು GEN Zಗಳು ಸಹಾಯ ಮಾಡುತ್ತಾರೆಂಬ ನಂಬಿಕೆ ಇದೆ"; ಪ್ರಧಾನಿ ಮೋದಿ

Independence Day 2026: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಯುವಜನರು ಈ ದೇಶದ ಆಸ್ತಿ ಎಂದು ಹೇಳಿದ್ದಾರೆ. ದೇಶದ ಕನಸುಗಳನ್ನು ನನಸಾಗಿಸಲು ಯುವ ಪೀಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ದೇಶದ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಭಾರತದ ಯುವಜನರು ಈ ದೇಶದ ಆಸ್ತಿ ಎಂದು ಹೇಳಿದ್ದಾರೆ. ದೇಶದ ಕನಸುಗಳನ್ನು ನನಸಾಗಿಸಲು ಯುವ ಪೀಳಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ "ನನ್ನ ದೇಶದ ಯುವಕರು, ನನ್ನ ದೇಶದ ತಾಯಂದಿರು ಮತ್ತು ಸಹೋದರಿಯರು, ನನ್ನ ದೇಶದ ರೈತರು ಮತ್ತು ನನ್ನ ದೇಶದ ಕಾರ್ಮಿಕರಲ್ಲಿ ನನಗೆ ನಂಬಿಕೆ ಇದೆ, ನಾವು ಭಾರತವನ್ನು ಅಭಿವೃದ್ದಿ ಹೊಂದಿದ ದೇಶಗಳ ಸಾಲಿನಲ್ಲಿ ಇನ್ನು ಕೆಲವೇ ವರ್ಷಗಳಲ್ಲಿ ನೋಡಬಹುದು ಎಂದು ಹೇಳಿದ್ದಾರೆ.

ಅಭಿವೃದ್ಧಿಯ ವೇಗವನ್ನು ನಾವು ಹೆಚ್ಚಿಸಬೇಕು. ಯುವ ಜನರು ಮೇಕ್‌ ಇನ್‌ ಇಂಡಿಯಾದತ್ತ ಗಮನ ಹರಿಸಬೇಕು ಎಂದು ಮೋದಿ ಕರೆ ನೀಡಿದ್ದಾರೆ. ಕಳೆದ 12 ವರ್ಷಗಳಿಂದ ದೇಶದಲ್ಲಿ ಅಭಿವೃದ್ದಿಯ ವೇಗ ಹೆಚ್ಚಿದೆ. ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಾವು ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುತ್ತೇವೆ. 140 ಕೋಟಿ ಭಾರತೀಯರ ಪ್ರಯತ್ನಗಳೊಂದಿಗೆ, ನಾವು ಈ ಗುರಿಯನ್ನು ಸಾಧಿಸಬೇಕು. ಮತ್ತು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸಲು ನಾವು ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ಹೇಳಿದರು.

ವಿಕ್ಷಿತ್ ಭಾರತ್ 2047 ರ ಪ್ರಯಾಣದಲ್ಲಿ 'ಯುವ ಶಕ್ತಿ'ಯ ಪಾತ್ರದ ಕುರಿತು ಮಾತನಾಡಿದ ಪ್ರಧಾನಿ, ಯುವಕರು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ಉದ್ಯೋಗದಾತರಾಗಿ ಹೊಸ ಉದ್ಯಮಗಳನ್ನು ಆರಂಭಿಸಬೇಕು. ಹೊಸ ತಾಂತ್ರಿಕ ಹಾಗೂ ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡು ಸ್ವಾವಲಂಬನೆಯತ್ತ ಹೆಜ್ಜೆ ಇಡಬೇಕು ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವ; ಸಚಿವ ಪ್ರಲ್ಹಾದ್‌ ಜೋಶಿ ಕಚೇರಿಯಲ್ಲಿ ಸ್ವಚ್ಛ ವಾಹಿನಿ ಚಾಲಕಿ ಧ್ವಜಾರೋಹಣ

ಡೇಟಾ ಸೆಂಟರ್‌ಗಳು ಮತ್ತು ಚಿಪ್ ಉದ್ಯಮದ ವಿಸ್ತರಣೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಇಂಧನ ಭದ್ರತೆಯ ವಿಷಯವನ್ನು ಪ್ರಸ್ತಾಪಿಸಿದರು. 2047 ರವರೆಗೆ ಭಾರತ 100 GW ವಿದ್ಯುತ್ ಉತ್ಪಾದಿಸಲು ಎದುರು ನೋಡುತ್ತಿದೆ ಎಂದು ಹೇಳಿದ್ದಾರೆ. ಮುಂದಿನ ಏಳರಿಂದ ಎಂಟು ವರ್ಷಗಳಲ್ಲಿ ಇನ್ನೂ ಐದರಿಂದ ಎಂಟು ಸೆಮಿಕಂಡಕ್ಟರ್ ಸ್ಥಾವರಗಳು ಕಾರ್ಯಾರಂಭ ಮಾಡುವ ಸಾಧ್ಯತೆಯಿದೆ. ಸೆಮಿಕಂಡಕ್ಟರ್ ಉತ್ಪಾದನೆಯ ವಿಸ್ತರಣೆಯು "ಆತ್ಮನಿರ್ಭರ ಭಾರತ"ದತ್ತ ಭಾರತದ ಪ್ರಯಾಣದ ಭಾಗವಾಗಿದೆ ಮತ್ತು "ವಿಕ್ಷಿತ ಭಾರತ"ಕ್ಕೆ ದಾರಿ ಮಾಡಿಕೊಡಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.

Vishakha Bhat Heggar

View all posts by this author