ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಅಪ್ಪನ ಮರಣದ ಬಳಿಕ ನಿಮ್ಮ ಕಷ್ಟವನ್ನು ನೋಡಿದ್ದೇನೆʼʼ: ಸೋನಿಯಾ ಗಾಂಧಿ ಆತ್ಮಚರಿತ್ರೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವಿವರ ಹಂಚಿಕೊಂಡ ರಾಹುಲ್ ಗಾಂಧಿ

ಅಪ್ಪನ ಮರಣದ ಬಳಿಕ ನಿಮ್ಮ ಕಷ್ಟವನ್ನು ನೋಡಿದ್ದೇನು. ಒಬ್ಬ ಖಾಸಗಿ ವ್ಯಕ್ತಿಯಾಗಿ ನಿಮಗೆ ಎಲ್ಲವನ್ನು ಹೇಳುವುದು ಸಾಧ್ಯವಿಲ್ಲ ಎಂಬುದು ನನಗೆ ಗೊತ್ತಿದೆ. 35 ವರ್ಷಗಳ ಹಿಂದೆ ನಿಮ್ಮನ್ನು ತಂದೆಯವರೊಂದಿಗೆ ನೋಡಿರುವುದು ಇವತ್ತಿಗೂ ನೆನಪಿದೆ ಎಂದು ನೆನಪಿಸಿಕೊಂಡಿರುವ ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮದ ಮೂಲಕ ಮುಂದೆ ಬಿಡುಗಡೆಯಾಗಲಿರುವ ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ಬಗ್ಗೆ ತಿಳಿಸಿದ್ದಾರೆ.

ಸಂಗ್ರಹ ಚಿತ್ರ

ನವದೆಹಲಿ: ಅಪ್ಪಾ (former Prime Minister Rajiv Gandhi) ಹೋದ ದಿನದಿಂದ ಜೀವನದಲ್ಲಿ ಎಲ್ಲವನ್ನೂ ನೀವು ಧೈರ್ಯ ಮತ್ತು ಘನತೆಯಿಂದ ಎದುರಿಸಿರುವುದನ್ನು ನೋಡಿದ್ದೇನೆ. ಅನಂತರದ ದಿನಗಳಲ್ಲಿ ನೀವು ಎಷ್ಟೆಲ್ಲಾ ಕಷ್ಟಗಳನ್ನು ಎದುರಿಸಿದ್ದೀರಿ ಎಂಬುದು ನನಗೆ ಮತ್ತು ಪ್ರಿಯಾಂಕಾಗೆ ಗೊತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅವರು ತಮ್ಮ ತಾಯಿ ಸೋನಿಯಾ ಗಾಂಧಿ (Sonia Gandhi's memoir) ಬಗ್ಗೆ ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರನ್ನು ಅವರ 82 ನೇ ಜನ್ಮದಿನಾಚರಣೆಯಂದು ಅವರು ಮುಂದೆ ಬಿಡುಗಡೆಯಾಗಲಿರುವ ಸೋನಿಯಾ ಗಾಂಧಿಯವರ ಆತ್ಮಚರಿತ್ರೆಯ ಬಗ್ಗೆ ತಮ್ಮ ಪೋಸ್ಟ್ ನಲ್ಲಿ ಉಲ್ಲೇಖಿಸಿದ್ದಾರೆ.

ತಮ್ಮ ಪೋಸ್ಟ್ ನಲ್ಲಿ ಸೋನಿಯಾ ಗಾಂಧಿ ಅವರನ್ನು "ಮಾಮಾ" ಎಂದು ಸಂಬೋಧಿಸಿರುವ ಅವರು, 35 ವರ್ಷಗಳ ಹಿಂದೆ ತಮ್ಮ ಹೆತ್ತವರನ್ನು ಕೊನೆಯ ಬಾರಿಗೆ ಒಟ್ಟಿಗೆ ನೋಡಿರುವುದನ್ನು ನೆನಪಿಸಿಕೊಂಡರು. ಅಲ್ಲದೇ ಸೋನಿಯಾ ಗಾಂಧಿಯವರ ಆತ್ಮಚರಿತ್ರೆಯು ಲಕ್ಷಾಂತರ ಜನರಿಗೆ ಅವರ ಖಾಸಗಿ ಕಥೆಗಳನ್ನು ಓದಲು ಅವಕಾಶ ನೀಡುತ್ತದೆ ಎಂದು ಹೇಳಿದರು.

ಶುದ್ಧೀಕರಣ ವಿವಾದ: ಕಾಂಗ್ರೆಸ್‌ ಹಿರಿಯ ನಾಯಕರ ಮೌನಕ್ಕೆ ಮಲ್ಲಿಕಾರ್ಜುನ ಖರ್ಗೆ ಬೇಸರ

ಸೋನಿಯಾ ಗಾಂಧಿಯವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಅನ್ನು ಉಲ್ಲೇಖಿಸಿ ಮಾತನಾಡಿರುವ ರಾಹುಲ್ ಗಾಂಧಿ, ಇದನ್ನು ಲಕ್ಷಾಂತರ ಜನರು ತಮ್ಮ ಮೇಲಿನ ಪ್ರೀತಿಯಿಂದ ಓದುತ್ತಾರೆ ಎಂಬ ಬಗ್ಗೆ ಹೆಮ್ಮೆ ಇದೆ. ನಿಮ್ಮಂತಹ ಖಾಸಗಿ ವ್ಯಕ್ತಿಗೆ ನಿಮ್ಮ ಕಥೆಯನ್ನು ಜಗತ್ತಿಗೆ ಹೇಳುವುದು ತುಂಬಾ ಕಷ್ಟ ಎಂದು ನನಗೆ ತಿಳಿದಿದೆ ಎಂದು ತಿಳಿಸಿದ್ದಾರೆ.

ಸೋನಿಯಾ ಗಾಂಧಿಯವರ ಆತ್ಮಚರಿತ್ರೆ ನವೆಂಬರ್‌ 10 ರಂದು ಬಿಡುಗಡೆಯಾಗಲಿದೆ. ಪೆಂಗ್ವಿನ್ ರಾಂಡಮ್ ಹೌಸ್‌ನ ಮುದ್ರಿತ ಈ ಕೃತಿಯನ್ನು ಅಂತಾರಾಷ್ಟ್ರೀಯವಾಗಿ ಬಿಡುಗಡೆ ಮಾಡಲು ಮುದ್ರಣ ಹೌಸ್ ನ ಆಲ್ಫ್ರೆಡ್ ಎ ನಾಫ್ ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಈ ಪುಸ್ತಕ ಭಾರತದಲ್ಲಿ ಬಿಡುಗಡೆಯಾಗುವ ದಿನಾಂಕವನ್ನು ಪ್ರಕಾಶಕರು ದೃಢಪಡಿಸಿಲ್ಲ.



ಏನಿದೆ ಕೃತಿಯಲ್ಲಿ ?

ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯಲ್ಲಿ ಸೋನಿಯಾ ಗಾಂಧಿಯವರ ಬಾಲ್ಯದ ದಿನಗಳು, ಭಾರತಕ್ಕೆ ಅವರ ಆಗಮನ ಮತ್ತು ರಾಜೀವ್ ಗಾಂಧಿಯವರೊಂದಿಗಿನ ವಿವಾಹದವರೆಗಿನ ಪ್ರಯಾಣದ ಕುರಿತು ಉಲ್ಲೇಖಿಸಲಾಗಿದೆ. ಇದರಲ್ಲಿ ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಸಾವಿನ ಬಗ್ಗೆಯೂ ಉಲ್ಲೇಖವಿದೆ. ಸೋನಿಯಾ ಗಾಂಧಿ ಅವರ ಬದುಕಿನ ಸಾಕಷ್ಟು ಮಾಹಿತಿಗಳನ್ನು ಈ ಕೃತಿಯು ಬಹಿರಂಗಪಡಿಸುವ ನಿರೀಕ್ಷೆಯಿದೆ.

ಆತ್ಮಕಥೆಯನ್ನು ಬರೆಯುವುದು ಸುಲಭವಲ್ಲ. ಅದರಲ್ಲೂ ತಮ್ಮದೇ ಜೀವನದ ಬಗ್ಗೆ ಬರೆಯುವುದು ಕಷ್ಟ. ಯಾಕೆಂದರೆ ಇದರಲ್ಲಿ ಆಳವಾದ ವೈಯಕ್ತಿಕ ಅನುಭವಗಳಿರಬೇಕು ಮತ್ತು ದಶಕಗಳಿಂದ ಕಾಪಾಡಿಕೊಂಡಿದ್ದ ಗೌಪ್ಯತೆಯನ್ನು ತ್ಯಜಿಸಬೇಕು ಎಂದು ಸೋನಿಯಾ ಗಾಂಧಿಯವರೇ ಹೇಳಿದ್ದಾರೆ.



ತಂದೆಯನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ

ಜವಾಹರ್ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ಸ್ವರಾಜ್" ಎಂದರೆ ಕೇವಲ ಸ್ವಾತಂತ್ರ್ಯ ಎಂದು ಅರ್ಥೈಸಿಕೊಳ್ಳಬಾರದು. ಇದು ಸ್ವಯಂ ಆಡಳಿತವಾಗಿದೆ. ಮಹಾತ್ಮ ಗಾಂಧಿಯವರ ಸೆರೆವಾಸವನ್ನು ಉದಾಹರಣೆಯಾಗಿ ಉಲ್ಲೇಖಿಸಿದ ಅವರು, ಗಾಂಧೀಜಿಯವರು ದೈಹಿಕವಾಗಿ ಸ್ವತಂತ್ರರಲ್ಲದಿದ್ದರೂ ಅವರು ತಮ್ಮ ಮೇಲೆ ತಾವೇ ಆಡಳಿತ ನಡೆಸುತ್ತಿದ್ದರು ಎಂದು ಹೇಳಿದರು.

ತಂದೆಗೆ ಗೌರವ ಸಲ್ಲಿಸಿ ಅವರ ಏಕತೆ, ಕರುಣೆ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಆದರ್ಶಗಳನ್ನು ಮುಂದುವರಿಸುವುದಾಗಿ ತಿಳಿಸಿದ ರಾಹುಲ್ ಗಾಂಧಿ, ಅಪ್ಪಾ, ನಿಮ್ಮ ಬೋಧನೆ ನನ್ನ ಶಕ್ತಿ ಮತ್ತು ನಿಮ್ಮ ನೆನಪುಗಳು ನನ್ನ ಧೈರ್ಯ. ನಿಮ್ಮ ಕನಸಿನ ಭಾರತವನ್ನು ನಿರ್ಮಿಸುವ ಸಂಕಲ್ಪ ಯಾವಾಗಲೂ ನನಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದರು.

ರಾಜೀನಾಮೆಗೆ ವಿಪಕ್ಷಗಳ ಪಟ್ಟು; ದಲಿತ ದಾಳ ಉರುಳಿಸುವ ಮೂಲಕ ಸಚಿವ ನಾಗೇಂದ್ರ ತಿರುಗೇಟು

ಕಾರ್ಯಕ್ರಮಕ್ಕೂ ಮುನ್ನ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ನವದೆಹಲಿಯ ವೀರಭೂಮಿಯಲ್ಲಿ ರಾಜೀವ್ ಗಾಂಧಿ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ವಿದ್ಯಾ ಇರ್ವತ್ತೂರು

View all posts by this author