ನವದೆಹಲಿ: ಪಾಕಿಸ್ತಾನ (Pakistan) ನಡೆಸುತ್ತಿರುವ ಪರಮಾಣು ಶಸ್ತ್ರಾಸ್ತ್ರ ಪರೀಕ್ಷೆಯ ಬಗ್ಗೆ ಭಾರತ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, (Pakistan Nuclear Test) ರಹಸ್ಯ ಮತ್ತು ಕಾನೂನುಬಾಹಿರ ಪರಮಾಣು ಚಟುವಟಿಕೆಗಳು" ಇಸ್ಲಾಮಾಬಾದ್‌ನ ಇತಿಹಾಸಕ್ಕೆ ಅನುಗುಣವಾಗಿವೆ ಎಂದು ಹೇಳಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ವಾರದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಪಾಕಿಸ್ತಾನದ ಪರಮಾಣು ಇತಿಹಾಸವು "ದಶಕಗಳ ಕಳ್ಳಸಾಗಣೆ, ರಫ್ತು ನಿಯಂತ್ರಣ ಉಲ್ಲಂಘನೆ, ರಹಸ್ಯ ಪಾಲುದಾರಿಕೆ ಮತ್ತು ಎಕ್ಯೂ ಖಾನ್ ಜಾಲದ ಸುತ್ತ ಕೇಂದ್ರೀಕೃತವಾಗಿದೆ ಎಂದು ಹೇಳಿದರು.
ಪಾಕಿಸ್ತಾನ ರಹಸ್ಯವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುತ್ತಿದೆ ಎಂಬ ಟ್ರಂಪ್ ಅವರ ಇತ್ತೀಚಿನ ಹೇಳಿಕೆಯ ಕುರಿತ ಪ್ರಶ್ನೆಗೆ ಉತ್ತರಿಸುವಾಗ ಜೈಸ್ವಾಲ್ ಈ ಹೇಳಿಕೆ ನೀಡಿದ್ದಾರೆ . ರಹಸ್ಯ ಮತ್ತು ಅಕ್ರಮ ಪರಮಾಣು ಚಟುವಟಿಕೆಗಳು ಪಾಕಿಸ್ತಾನದ ಇತಿಹಾಸಕ್ಕೆ ಅನುಗುಣವಾಗಿವೆ. ಪಾಕಿಸ್ತಾನದ ಪರಮಾಣು ಪರೀಕ್ಷೆಯ ಕುರಿತು ಅಧ್ಯಕ್ಷ ಟ್ರಂಪ್ ಅವರ (Donald Trump) ಹೇಳಿಕೆಯನ್ನು ನಾವು ಗಮನಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಖಾಸಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಟ್ರಂಪ್, ಅಮೆರಿಕ ಮೂರು ದಶಕಗಳಿಗೂ ಹೆಚ್ಚು ಕಾಲ ಪರಮಾಣು ಪರೀಕ್ಷೆಯಿಂದ ದೂರವಿದ್ದರೂ, ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳು ಭೂಗತ ಪರಮಾಣು ಪರೀಕ್ಷೆಗಳನ್ನು ನಡೆಸುತ್ತಲೇ ಇವೆ ಎಂದು ಹೇಳಿದ್ದರು. ಖಂಡಿತವಾಗಿಯೂ ಉತ್ತರ ಕೊರಿಯಾ ಪರೀಕ್ಷಿಸುತ್ತಿದೆ. ಪಾಕಿಸ್ತಾನ ಪರೀಕ್ಷಿಸುತ್ತಿದೆ. ಅವರು ಹೋಗಿ ಅದರ ಬಗ್ಗೆ ನಿಮಗೆ ಹೇಳುವುದಿಲ್ಲ. ಅವರು ಭೂಗತದಲ್ಲಿ ಪರೀಕ್ಷಿಸುತ್ತಾರೆ, ಅಲ್ಲಿ ಜನರಿಗೆ ಏನಾಗುತ್ತಿದೆ ಎಂದು ತಿಳಿದಿಲ್ಲ. ನಿಮಗೆ ಸ್ವಲ್ಪ ಕಂಪನ ಅನಿಸುತ್ತದೆ" ಎಂದು ಟ್ರಂಪ್ ಹೇಳಿದ್ದರು. ಆದರೆ ಟ್ರಂಪ್ ಹೇಳಿಕೆಯನ್ನು ಪಾಕಿಸ್ತಾನ ಅಲ್ಲಗಳೆದಿತ್ತು.
ಈ ಸುದ್ದಿಯನ್ನೂ ಓದಿ: Fake Scientist: ಬಗೆದಷ್ಟು ಬಯಲಾಗುತ್ತಿದೆ ನಕಲಿ ವಿಜ್ಞಾನಿ ವಂಚನೆ; ಪರಮಾಣು ಯೋಜನೆ ಇರಾನ್‌ಗೆ ಮಾರಲು ನಡೆದಿತ್ತು ಪ್ಲಾನ್
ಅಮೆರಿಕಕ್ಕೆ ಅಣ್ವಸ್ತ್ರ ಪರೀಕ್ಷೆ ನಡೆಸಲು ಒಪ್ಪಿಗೆ ಸೂಚಿಸಿದ ಬಳಿಕ ಟ್ರಂಪ್ ಈ ಹೇಳಿಕೆಯನ್ನು ನೀಡಿದ್ದಾರೆ. ರಷ್ಯಾ ಇತ್ತೀಚೆಗೆ ಮುಂದುವರಿದ ಪರಮಾಣು-ಸಮರ್ಥ ವ್ಯವಸ್ಥೆಗಳ ಪ್ರಯೋಗಗಳನ್ನು ಉಲ್ಲೇಖಿಸಿ, ಇದು ಎರಡು ಪರಮಾಣು ಶಕ್ತಿಗಳ ನಡುವಿನ ಪ್ರಮುಖ ಉಲ್ಬಣವನ್ನು ಸೂಚಿಸುತ್ತದೆ. ನಮ್ಮಲ್ಲಿ ಎಲ್ಲರಿಗಿಂತ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳಿವೆ. ನಾವು ಪರೀಕ್ಷೆ ಮಾಡುವುದಿಲ್ಲ.
ಆದರೆ ಇತರರು ಪರೀಕ್ಷೆ ನಡೆಸುತ್ತಿರುವುದರಿಂದ, ನಾವು ಸಹ ಮಾಡುವುದು ಸೂಕ್ತ ಎಂದು ನಾನು ಭಾವಿಸುತ್ತೇನೆ. ಸಮಯ ಅಥವಾ ಸ್ಥಳವನ್ನು ನಿರ್ದಿಷ್ಟಪಡಿಸದೆ, ಪರೀಕ್ಷೆಗೆ ಈಗಾಗಲೇ ಸಿದ್ಧತೆಗಳು ಜಾರಿಯಲ್ಲಿವೆ ಎಂದು ಟ್ರಂಪ್ ಹೇಳಿದ್ದರು. ಅಮೆರಿಕ 'ಇತರ ಯಾವುದೇ ದೇಶಕ್ಕಿಂತ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು' ಹೊಂದಿದೆ ಎಂದು ಟ್ರಂಪ್ ಇದೇ ವೇಳೆ ಹೇಳಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪರಮಾಣು ನಿಶ್ಯಸ್ತ್ರೀಕರಣದ ಬಗ್ಗೆ ಚರ್ಚಿಸಿದ್ದೇನೆ ಎಂದೂ ಅವರು ಹೇಳಿಕೆ ನೀಡಿದ್ದಾರೆ.
ಉತ್ತರ ಕೊರಿಯಾ ಹೊತರು ಪಡಿಸಿ ಪ್ರಪಂಚದಾದ್ಯಂತ ಯಾವ ದೇಶವು 2000 ನೇ ಇಸವಿ ಬಳಿಕ ಪರಮಾಣು ಪರೀಕ್ಷೆಯನ್ನು ನಡೆಸಿಲ್ಲ. 1992ರಲ್ಲಿ ಅಮೆರಿಕಾ ತನ್ನ ಕೊನೆಯ ಪರಮಾಣು ಸ್ಫೋಟ ನಡೆಸಿತ್ತು.ರಷ್ಯಾ ಹಾಗೂ ಚೀನಾ ಸಹ 1996ರ ನಂತರ ಯಾವುದೇ ಪರಮಾಣು ಪರೀಕ್ಷೆಗಳನ್ನು ನಡೆಸಿಲ್ಲ.