ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ಹಿಂದೂ ರಾಷ್ಟ್ರ ಎನ್ನುವುದಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ: ಮೋಹನ್ ಭಾಗವತ್

ಭಾರತ ಹಿಂದೂ ರಾಷ್ಟ್ರ ಎನ್ನುವುದಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿಲ್ಲ. ದೇಶದ ಜನರು ಸಾಂಸ್ಕೃತಿಕ ಪರಂಪರೆಯನ್ನು ಆಚರಿಸಿಕೊಂಡು ಬರುವವರೆಗೂ ಭಾರತ ಹಿಂದೂ ರಾಷ್ಟ್ರವಾಗಿ ಉಳಿಯುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಕೋಲ್ಕತ್ತಾದಲ್ಲಿ ಭಾನುವಾರ ನಡೆದ ಸಮ್ಮೇಳನದಲ್ಲಿ ಅವರು ಮಾತನಾಡಿ, ಆರ್‌ಎಸ್‌ಎಸ್ ಎಂದಿಗೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಂಸತ್ತು ಕಾನೂನು ತಿದ್ದುಪಡಿ ಮಾಡುತ್ತದೆಯೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದರು.

ಮೋಹನ್ ಭಾಗವತ್ (ಸಂಗ್ರಹ ಚಿತ್ರ)

ಕೋಲ್ಕತ್ತಾ: ಭಾರತ (India) ಹಿಂದೂ ರಾಷ್ಟ್ರವಾಗಿದೆ (Hindu nation) ಮತ್ತು ಅದು ಸತ್ಯವಾಗಿದೆ. ಇದಕ್ಕೆ ಯಾವುದೇ ಸಾಂವಿಧಾನಿಕ ಅನುಮೋದನೆಯ (constitutional approval) ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದರು. ಅವರು ಭಾನುವಾರ ಕೋಲ್ಕತ್ತಾದಲ್ಲಿ (Kolkata) ನಡೆದ ಸಮ್ಮೇಳನದಲ್ಲಿ ಮಾತನಾಡಿ, ಕೊನೆಯ ಒಬ್ಬ ವ್ಯಕ್ತಿಯಾದರೂ ಸರಿ ತನ್ನ ದೇಶದ ಸಾಂಸ್ಕೃತಿಕ ಪರಂಪರೆ ಮತ್ತು ಪೂರ್ವಜರ ವೈಭವವನ್ನು ಆಚರಿಸುವವರೆಗೆ ದೇಶವು ಹಿಂದೂ ರಾಷ್ಟ್ರವಾಗಿ ಉಳಿಯುತ್ತದೆ ಎಂದು ಅವರು ತಿಳಿಸಿದರು.

ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದಕ್ಕೆ ಸಾಂವಿಧಾನಿಕ ಅನುಮೋದನೆಯ ಅಗತ್ಯವಿದೆಯೇ? ಹಿಂದೂಸ್ತಾನ್ ಹಿಂದೂ ರಾಷ್ಟ್ರ. ಭಾರತವನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುವ ಭಾರತೀಯ ಸಂಸ್ಕೃತಿಯನ್ನು ಗೌರವಿಸುತ್ತಾನೆ. ಇಲ್ಲಿ ಪೂರ್ವಜರ ವೈಭವವನ್ನು ನಂಬುವ ಮತ್ತು ಪಾಲಿಸುವ ಒಬ್ಬ ವ್ಯಕ್ತಿ ಜೀವಂತವಾಗಿರುವವರೆಗೂ ಭಾರತವು ಹಿಂದೂ ರಾಷ್ಟ್ರವಾಗಿರುತ್ತದೆ ಎಂದು ಅವರು ತಿಳಿಸಿದರು.

Karnataka Politics: ರಾಜ್ಯ ಕಾಂಗ್ರೆಸ್ ಗೊಂದಲಕ್ಕೆ ನಾವಲ್ಲ ಕಾರಣ, ನೀವೇ ಪರಿಹರಿಸಿಕೊಳ್ಳಿ: ಕೈಚೆಲ್ಲಿದ ಮಲ್ಲಿಕಾರ್ಜುನ ಖರ್ಗೆ

ಆರ್‌ಎಸ್‌ಎಸ್ ಎಂದಿಗೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಸಂಸತ್ತು ಕಾನೂನನ್ನು ತಿದ್ದುಪಡಿ ಮಾಡುತ್ತದೆಯೇ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅವರು, ಈ ಬಗ್ಗೆ ಸಂಸತ್ತು ತಿದ್ದುಪಡಿ ಮಾಡಲು ನಿರ್ಧರಿಸಿದರೆ ಮಾಡಲಿ ಅಥವಾ ಬಿಡಲಿ. ನಾವು ಹಿಂದೂಗಳು ಮತ್ತು ನಮ್ಮ ರಾಷ್ಟ್ರ ಹಿಂದೂ ರಾಷ್ಟ್ರವಾಗಿರುವುದರಿಂದ ನಾವು ಆ ಪದದ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದರು.

ಸತ್ಯ, ಹುಟ್ಟಿನ ಆಧಾರದ ಮೇಲೆ ಜಾತಿ ವ್ಯವಸ್ಥೆಯು ಹಿಂದುತ್ವದ ಲಕ್ಷಣವಲ್ಲ. ವಿದೇಶಿ ಭಾಷೆಯ ಬದಲಿಗೆ ತಮ್ಮ ಮಾತೃಭಾಷೆಯನ್ನು ಬಳಸಬೇಕು. ಬಂಗಾಳಿ ಮಾತನಾಡುವ ಜನರ ಮನೆಯ ಪ್ರವೇಶದ್ವಾರದಲ್ಲಿ ವೆಲ್ ಕಮ್ ಬದಲಿಗೆ ಸ್ವಾಗತಮ್ ಎಂದು ಬರೆಯಿರಿ ಎಂದು ಹೇಳಿದರು.

ಸಂಘವು ತೀವ್ರ ರಾಷ್ಟ್ರೀಯವಾದಿಯಾದರೂ ಅದು ಯಾವುದೇ ಮುಸ್ಲಿಂ ವಿರೋಧಿ ಭಾವನೆಯನ್ನು ಹೊಂದಿಲ್ಲ. ಯಾವಾಗಲೂ ಪಾರದರ್ಶಕತೆವಾಗಿ ಕೆಲಸ ಮಾಡಿದೆ. ಆದರೆ "ನಾವು ಮುಸ್ಲಿಂ ವಿರೋಧಿಗಳು ಎಂಬ ತಪ್ಪು ಗ್ರಹಿಕೆ ಇದೆ. ಆರ್‌ಎಸ್‌ಎಸ್ ಬಗ್ಗೆ ಅರ್ಥಮಾಡಿಕೊಳ್ಳಲು ಬಹಳಷ್ಟು ಇದೆ. ಆದರೆ ಅರ್ಥಮಾಡಿಕೊಳ್ಳಲು ಬಯಸದಿದ್ದರೆ, ಯಾರೂ ನಿಮ್ಮ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

ರಾಷ್ಟ್ರಪತಿ ಮುರ್ಮು ಒಪ್ಪಿಗೆ; ಕಾನೂನಾಗಿ ಮಾರ್ಪಟ್ಟ ವಿಬಿ-ಜಿ ರಾಮ್ ಜಿ 2025 ಮಸೂದೆ

ಯಾವುದೇ ರಾಜಕೀಯ ಕಾರ್ಯಸೂಚಿ ಆರ್‌ಎಸ್‌ಎಸ್‌ಗೆ ಇಲ್ಲ. ಹಿಂದೂ ಧರ್ಮ ಬಲಿಷ್ಠವಾಗುವುದನ್ನು ನೋಡಿ ಹೆದರುವವರು ಹೆಚ್ಚಾಗಿರುವುದರಿಂದ ಭಾರತ ವಿರೋಧಿ ಮತ್ತು ಸಂಘ ವಿರೋಧಿ ಪ್ರಚಾರ ತೀವ್ರವಾಗಿ ಹೆಚ್ಚಾಗುತ್ತಿದೆ. ಜನರು ಆರ್‌ಎಸ್‌ಎಸ್ ಬಗ್ಗೆ ಅಭಿಪ್ರಾಯಗಳನ್ನು ರೂಪಿಸಲು ಸ್ವತಂತ್ರರು. ಆದರೆ ಇದು ಸತ್ಯವನ್ನು ಆಧರಿಸಿರಬೇಕು ಎಂದು ಅವರು ಹೇಳಿದರು.

ವಿದ್ಯಾ ಇರ್ವತ್ತೂರು

View all posts by this author