India-Pak Tensions: ಪಾಕ್ ಕುಕೃತ್ಯಕ್ಕೆ ಭಾರತ ಕೌಂಟರ್ ಅಟ್ಯಾಕ್! ವಾಯುನೆಲೆ, ಆರ್ಮಿ ಬೇಸ್ ಮೇಲೆ ಡ್ರೋನ್ ದಾಳಿ
India Drone Strike on Pak: ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್‌ವರೆಗೆ ಭಾರತದ 26 ಸ್ಥಳಗಳಲ್ಲಿ ಪಾಕಿಸ್ತಾನ ಹೊಸ ಡ್ರೋನ್ ದಾಳಿಯನ್ನು ನಡೆಸಿದ ನಂತರ ಕೌಂಟರ್ ಅಟ್ಯಾಕ್ ಶುರು ಮಾಡಿದ ಭಾರತ, ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ಮತ್ತು ಶೇಖುಪುರ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ.


ನವದೆಹಲಿ: ಕಳೆದ ಮೂರು ದಿನಗಳಿಂದ ನಿರಂತರವಾಗಿ ಭಾರತದ ಗಡಿ ಪ್ರದೇಶಗಳಲ್ಲಿ ಡ್ರೋನ್, ಕ್ಷಿಪಣಿ ದಾಳಿ ನಡೆಸಿ ಪುಂಡಾಟ(India-Pak Tensions) ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ಮತ್ತೆ ಠಕ್ಕರ್ ನೀಡಿದೆ. ಪಾಕಿಸ್ತಾನದ ಎಲ್ಲಾ ವಿಫಲ ದಾಳಿ ಬೆನ್ನಲ್ಲೇ ಭಾರತ ಪಾಕಿಸ್ತಾನದ ಮೇಲೆ ಡ್ರೋನ್ ದಾಳಿ(India Drone Strike on Pak) ನಡೆಸಿದೆ. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದಿಂದ ಗುಜರಾತ್‌ವರೆಗೆ ಭಾರತದ 26 ಸ್ಥಳಗಳಲ್ಲಿ ಪಾಕಿಸ್ತಾನ ಹೊಸ ಡ್ರೋನ್ ದಾಳಿಯನ್ನು ನಡೆಸಿದ ನಂತರ ಕೌಂಟರ್ ಅಟ್ಯಾಕ್ ಶುರು ಮಾಡಿರುವ ಭಾರತ,ಪಾಕಿಸ್ತಾನದ ಪ್ರಮುಖ ನಗರಗಳಾದ ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ಮತ್ತು ಶೇಖುಪುರ ನಗರಗಳ ಮೇಲೆ ಡ್ರೋನ್ ದಾಳಿ ನಡೆಸಿದೆ.
ರಕ್ಷಣಾ ಮೂಲಗಳ ಪ್ರಕಾರ, ರಾವಲ್ಪಿಂಡಿಯ ನೂರ್ ಖಾನ್‌ನಲ್ಲಿರುವ ಪಾಕಿಸ್ತಾನದ ವಾಯುಪಡೆ ನೆಲೆಯ ಮೇಲೂ ಭಾರತ ದಾಳಿ ಮಾಡಿದೆ. ಸಿಯಾಲ್‌ಕೋಟ್ ಮತ್ತು ನರೋವಾಲ್‌ನಲ್ಲಿರುವ ಪಾಕಿಸ್ತಾನಿ ಸೇನಾ ನೆಲೆಗಳ ಮೇಲೆ ಅಟ್ಯಾಕ್ ಮುಂದುವರಿದಿದೆ. ಪಂಜಾಬ್ ರಾಜ್ಯವನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಹಾರಿಸಿದ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭಾರತೀಯ ಪಡೆಗಳು ತಡೆದಿವೆ. ಇದರ ಬೆನ್ನಲ್ಲೇ ಕೌಂಟರ್ ದಾಳಿ ನಡೆದಿದ್ದು, ಇಸ್ಲಾಮಾಬಾದ್, ಲಾಹೋರ್, ರಾವಲ್ಪಿಂಡಿ ಮತ್ತು ಶೇಖುಪುರದಲ್ಲಿ ಆರು ಸ್ಫೋಟಗಳು ಸಂಭವಿಸಿವೆ.
ಭಾರತದ ಕೌಂಟರ್ ಅಟ್ಯಾಕ್ ವಿಡಿಯೊ ಇಲ್ಲಿದೆ
#BREAKING: Multiple explosions heard at Noor Khan Air Base of Pakistan Air Force in Rawalpindi - Headquarters of the Pakistan Army. Tit for Tat action by India after Pakistan Army launched attack on India Air bases and Military Stations. pic.twitter.com/L1MqRsMY9Q
— Aditya Raj Kaul (@AdityaRajKaul) May 9, 2025
ಪದೇ ಪದೇ ಕದನ ವಿರಾಮ ಉಲ್ಲಂಘನೆಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ನಗರಗಳ ಮೇಲೆ ದಾಳಿ ನಡೆಸಿದ ನಂತರ, ಗುಪ್ತಚರ ಮೂಲಗಳ ಪ್ರಕಾರ, ರಾವಲ್ಪಿಂಡಿಯಲ್ಲಿರುವ ನೂರ್ ಖಾನ್ ಮಿಲಿಟರಿ ವಾಯುನೆಲೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಪಾಕಿಸ್ತಾನ ಸೇನೆ ದೃಢಪಡಿಸಿದೆ.
ಈ ಬಗ್ಗೆ ಪಾಕ್ ರಕ್ಷಣಾ ಮೂಲಗಳು ಮಾಹಿತಿ ನೀಡಿದ್ದು, ಪಾಕಿಸ್ತಾನದಲ್ಲಿ ಬಹು ಸ್ಫೋಟಗಳು ಕೇಳಿಬಂದವು. ರಾವಲ್ಪಿಂಡಿಯಲ್ಲಿ ಎರಡು, ಲಾಹೋರ್ ಮತ್ತು ಇಸ್ಲಾಮಾಬಾದ್‌ನಲ್ಲಿ ತಲಾ ಒಂದು ಸ್ಫೋಟ ನಡೆದಿದೆ. ರಾವಲ್ಪಿಂಡಿಯಲ್ಲಿರುವ ನೂರ್ ಖಾನ್‌ನಲ್ಲಿರುವ ಪಾಕಿಸ್ತಾನದ ವಾಯುಪಡೆಯ ನೆಲೆಯೂ ಸ್ಫೋಟಕ್ಕೆ ಉಡೀಸ್ ಆಗಿದೆ. ಸಿಯಾಲ್‌ಕೋಟ್‌ನಲ್ಲಿರುವ ಪಾಕಿಸ್ತಾನಿ ಪೋಸ್ಟ್‌ಗಳು ಮತ್ತು ಇಸ್ಲಾಮಾಬಾದ್‌ನ ಡಿಪ್ಲೊಮ್ಯಾಟಿಕ್ ಎನ್‌ಕ್ಲೇವ್ ಬಳಿಯ ನರೋವಾಲ್ ಮತ್ತು ಸೆರೆನಾ ಹೋಟೆಲ್‌ಗಳ ಮೇಲೆ ಭಾರತೀಯ ಡ್ರೋನ್‌ಗಳು ದಾಳಿ ನಡೆಸಿವೆ ಎಂದು ತಿಳಿಸಿದೆ.
ಗುರುವಾರ ರಾತ್ರಿ ಭಾರತವು ದೇಶದ ಉತ್ತರ ಮತ್ತು ಪಶ್ಚಿಮ ಭಾಗಗಳ 36 ಸ್ಥಳಗಳಲ್ಲಿ ಪಾಕಿಸ್ತಾನ ಹಾರಿಸಿದ ಸುಮಾರು 300-400 ಡ್ರೋನ್‌ಗಳನ್ನು ಹೊಡೆದುರುಳಿಸಿತು.
ಈ ಸುದ್ದಿಯನ್ನೂ ಓದಿ: Operation Sindoor: ಯಕ್ಷಗಾನದಲ್ಲೂ ಮಿಂಚಿದ ಆಪರೇಷನ್ ಸಿಂದೂರ; ಕಲಾವಿದರ ಸಂಭಾಷಣೆಯ ವಿಡಿಯೋ ವೈರಲ್!