ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mangalyaan-2: ಮಂಗಳಯಾನ-2 ಮಿಷನ್‌ಗೆ ಭಾರತ ಸಜ್ಜು; ಯಾವಾಗ ಉಡಾವಣೆಯಾಗಲಿದೆ ಗೊತ್ತಾ..?

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಐತಿಹಾಸಿಕ ಮಂಗಳಯಾನ-1ರ ಯಶಸ್ಸಿನ 12 ವರ್ಷಗಳ ನಂತರ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸಿದ್ಧವಾಗಿದೆ. ಇದೀಗ ಮಂಗಳಯಾನ-2 ಮಿಷನ್ 2030ರ ವೇಳೆಗೆ ಉಡಾವಣೆಯಾಗಲಿದೆ ಎಂದು ಇಸ್ರೋ ಘೋಷಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಬರೋಬ್ಬರಿ ಹನ್ನೆರಡು ವರ್ಷಗಳ ನಂತರ, ಭಾರತವು ಮತ್ತೊಂದು ಬಾಹ್ಯಾಕಾಶ ನೌಕೆಯನ್ನು ಮಂಗಳಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದೆ. 2013ರ ನವೆಂಬರ್‌ 5ರಂದು ಮಂಗಳಯಾನ ( Mars Orbiter Mission , MOM ) ಆರಂಭಿಸುವ ಮೂಲಕ ಜಗತ್ತನ್ನೇ ಬೆರಗಾಗಿಸಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ( ISRO ) ಇದೀಗ ಮತ್ತೊಂದು ಪ್ರಮುಖ ಬಾಹ್ಯಾಕಾಶ ಸಾಧನೆಗೆ ಸಜ್ಜಾಗುತ್ತಿದ್ದು, 2030ಕ್ಕೆ ಮಂಗಳಯಾನ-2 ಮಿಷನ್‌ ಸಿದ್ಧವಾಗಲಿದೆ ಎಂದು ತಿಳಿಸಿದೆ. ಈ ಬಗ್ಗೆ ಇಸ್ರೋ ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಮಾಹಿತಿ ನೀಡಿದ್ದು, ಮಂಗಳನ ರಹಸ್ಯವನ್ನು ಬೇಧಿಸಲು ರೂಪಿಸಿರುವ ಮಹತ್ವಾಕಾಂಕ್ಷಿ ಮಂಗಳಯಾನ-2 ಯೋಜನೆ 2030ರಲ್ಲಿ ಉಡಾವಣೆಗೆ ಸಿದ್ಧವಾಗಲಿದೆ ಎಂದಿದ್ದಾರೆ.

ಸುಮಾರು 450 ಕೋಟಿ ರೂ. ವೆಚ್ಚದ ಮಾರ್ಸ್ ಆರ್ಬಿಟರ್ ಮಿಷನ್ (MOM) ಅನ್ನು 2013ರ ನವೆಂಬರ್ 5ರಂದು ಶ್ರೀಹರಿಕೋಟದಿಂದ ಪಿಎಸ್‌ಎಲ್‌ವಿ ರಾಕೆಟ್‌ ಮೂಲಕ ಉಡಾವಣೆ ಮಾಡಲಾಗಿತ್ತು. 2014 ಸೆಪ್ಟೆಂಬರ್ 24ರಂದು ಮಿಷನ್ ಮಾರ್ಸ್ ಆರ್ಬಿಟರ್ ಮಿಷನ್ ಮಂಗಳ ಕಕ್ಷೆಗೆ ಸೇರಿತು. ಈ ಮೂಲಕ ಭಾರತವನ್ನು ಮಂಗಳನ ಕಕ್ಷೆ ಪ್ರವೇಶಿಸಿದ ಮೊದಲ ಏಷ್ಯನ್ ರಾಷ್ಟ್ರವಾಗಿಸಿದಷ್ಟೇ ಅಲ್ಲದೇ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾದ ವಿಶ್ವದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವಂತೆ ಮಾಡಿತ್ತು. ಆದರೆ ಏಳು ವರ್ಷಕ್ಕಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಈ ಉಪಗ್ರಹವು ಮಂಗಳನ ವಾತಾವರಣ, ಖನಿಜ ಸಂಯೋಜನೆ ಮತ್ತು ಮೇಲ್ಮೈ ಚಿತ್ರಣದ ಕುರಿತು ಅಮೂಲ್ಯ ಮಾಹಿತಿಯನ್ನು ಸಂಗ್ರಹಿಸಿ, 2022ರಲ್ಲಿ ಸಂಪರ್ಕ ಕಡಿತಗೊಂಡಿತು.

ಇದೀಗ ಮತ್ತೇ ಮಂಗಳಯಾನ-1ರ ಯಶಸ್ಸಿನ 12 ವರ್ಷಗಳ ನಂತರ ಮತ್ತೊಂದು ದೊಡ್ಡ ಹೆಜ್ಜೆ ಇಡಲು ಸಿದ್ಧವಾಗಿದೆ. ಇದೀಗ ಮಂಗಳಯಾನ-2 ಮಿಷನ್ 2030ರ ವೇಳೆಗೆ ಉಡಾವಣೆ ಮಾಡಲಿದೆ.

ಈ ಸುದ್ದಿಯನ್ನು ಓದಿ: Viral News: ಮೃತಪಟ್ಟಿದ್ದಾನೆಂದು ಸಮಾಧಿ ಮಾಡಿದ ಪೋಷಕರು: ಅಂತ್ಯಕ್ರಿಯೆ ವೇಳೆ ಪ್ರತ್ಯಕ್ಷನಾದ ಮಗ!

ಮಂಗಳಯಾನ–2 ಹಿಂದಿನ ಮಿಷನ್‌ನಿಗಿಂತ ಹೆಚ್ಚು ತಾಂತ್ರಿಕವಾಗಿ ಉನ್ನತವಾಗಿದ್ದು, ಈ ಬಾರಿ ಕೇವಲ ಕಕ್ಷಿಗಾಮಿಯಷ್ಟೇ ಅಲ್ಲ, ಲ್ಯಾಂಡರ್ ಮತ್ತು ಚಿಕ್ಕ ರೋವರ್‌ನನ್ನೂ ಒಳಗೊಂಡಿರಲಿದೆ. ಮಂಗಳನ ತೆಳ್ಳನೆಯ ವಾತಾವರಣದಲ್ಲಿ ಸುರಕ್ಷಿತವಾಗಿ ಇಳಿಯಲು ಅಗತ್ಯವಾದ ನವೀನ ಪ್ರಪಲ್ಷನ್‌, ನ್ಯಾವಿಗೇಶನ್‌ ಮತ್ತು ಲ್ಯಾಂಡಿಂಗ್‌ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಇಸ್ರೋ ಸತತವಾಗಿ ಪ್ರಯತ್ನಿಸುತ್ತಿದೆ. ಮಂಗಳಯಾನ–2 ಕೇವಲ ಮಂಗಳನ ಸುತ್ತಲೂ ತಿರುಗುವ ಉಪಗ್ರಹವಲ್ಲ, ಮತ್ತೊಂದು ಗ್ರಹದ ಮೇಲೆ ಭಾರತ ಮೊದಲ ಬಾರಿಗೆ ಸಾಫ್ಟ್ ಲ್ಯಾಂಡಿಂಗ್ ಸಾಧಿಸಲು ಗುರಿ ಹೊಂದಿದೆ,” ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಈಗಾಗಲೇ ಇಸ್ರೋನ ಸ್ಪೇಸ್ ಅಪ್ಲಿಕೇಶನ್ ಸೆಂಟರ್ ಮತ್ತು ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್‌ಗಳಲ್ಲಿ ಮಂಗಳಯಾನ–2 ನ ಪ್ರಾಥಮಿಕ ವಿನ್ಯಾಸ ಮತ್ತು ಅಧ್ಯಯನ ಕಾರ್ಯ ಪ್ರಾರಂಭವಾಗಿದ್ದು, ಚಂದ್ರಯಾನ–3 ಹಾಗೂ ನಿಸಾರ್ ಯೋಜನೆಗಳಂತೆ ಈ ಮಿಷನ್‌ಗೂ ಅಂತರರಾಷ್ಟ್ರೀಯ ವೈಜ್ಞಾನಿಕ ಸಹಕಾರದ ಸಾಧ್ಯತೆಗಳ ಕುರಿತು ಚಿಂತನೆ ನಡೆಯುತ್ತಿದೆ. ಮಂಗಳಯಾನ–2 ಯಶಸ್ವಿಯಾದರೆ, ಮಂಗಳನ ಮೇಲೆ ಇಳಿದ ಅಮೆರಿಕಾ, ಚೀನಾ ಮತ್ತು ಮಾಜಿ ಸೋವಿಯತ್‌ ಒಕ್ಕೂಟದ ನಂತರ ಭಾರತವೂ ಆ ಪಟ್ಟಿಗೆ ಸೇರುವ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ. 2030ರ ಮಂಗಳಯಾನ–2 ಉಡಾವಣೆ ಕೇವಲ ಮಂಗಳ ಸಂಶೋಧನೆಯ ಹೊಸ ಅಧ್ಯಾಯವಷ್ಟೇ ಅಲ್ಲ, ಮಂಗಳಯಾನ–1 ರ ಅಪ್ರತಿಮ ಸಾಧನೆಗೆ ಮುಂದುವರಿದ ಘನ ಗೌರವದ ಸಂಕೇತವಾಗಲಿದೆ.