ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ISRO: ಇಸ್ರೋದಿಂದ ಅತೀ ಹೆಚ್ಚು ಭಾರದ ಉಪಗ್ರಹ ಯಶಸ್ವಿ ಉಡಾವಣೆ

Communication Satellite CMS-03: ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ನವೆಂಬರ್‌ 2ರಂದು ಇಸ್ರೋದ ಅತ್ಯಂತ ತೂಕದ ಎಂಎಸ್‌-03 ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಯಿತು. ಅತ್ಯಂತ ಭಾರವಾದ ಸಂವಹನ ಉಪಗ್ರಹವಾದ ಸಿಎಂಎಸ್‌-03 ಹೊತ್ತ ಇಸ್ರೋ ಹೆವಿ-ಲಿಫ್ಟ್ ರಾಕೆಟ್, 'ಬಾಹುಬಲಿ' ಎಂದು ಕರೆಸಿಕೊಳ್ಳುವ ಎಲ್‌ವಿಎಂ3-ಎಂ5 ಶ್ರೀಹರಿಕೋಟದ ಬಾಹ್ಯಾಕಾಶ ನಿಲ್ದಾಣದಿಂದ ನಭಕ್ಕೆ ಚಿಮ್ಮಿದೆ. ಎಲ್‌ವಿಎಂ3-ಎಂ5 ರಾಕೆಟ್‌ನಲ್ಲಿ ಸುಮಾರು 16-20 ನಿಮಿಷಗಳ ಹಾರಾಟ ನಡೆಸಿದ ನಂತರ ಉಪಗ್ರಹವು ಸುಮಾರು 180 ಕಿ.ಮೀ ಎತ್ತರವನ್ನು ತಲುಪಿ ಬೇರ್ಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

ಇಸ್ರೋದಿಂದ ಅತೀ ಹೆಚ್ಚು ಭಾರದ ಉಪಗ್ರಹ  ಯಶಸ್ವಿ ಉಡಾವಣೆ

ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ನಭಕ್ಕೆ ಚಿಮ್ಮಿದ ಎಲ್‌ವಿಎಂ3-ಎಂ5 ರಾಕೆಟ್‌. -

Ramesh B Ramesh B Nov 2, 2025 7:03 PM

ಅಮರಾವತಿ, ನ. 2: ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ನವೆಂಬರ್‌ 2ರಂದು ಇಸ್ರೋದ (ISRO) ಅತ್ಯಂತ ತೂಕದ ಎಂಎಸ್‌-03 (CMS-03) ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಯಿತು. ಆ ಮೂಲಕ ಇಸ್ರೋ ಬಾಹ್ಯಾಕಾಶದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ನೆಟ್ಟಿದೆ. ಅತ್ಯಂತ ಭಾರವಾದ ಸಂವಹನ ಉಪಗ್ರಹವಾದ ಸಿಎಂಎಸ್‌-03 ಹೊತ್ತ ಇಸ್ರೋ ಹೆವಿ-ಲಿಫ್ಟ್ ರಾಕೆಟ್, 'ಬಾಹುಬಲಿ' ಎಂದು ಕರೆಸಿಕೊಳ್ಳುವ ಎಲ್‌ವಿಎಂ3-ಎಂ5 ಶ್ರೀಹರಿಕೋಟದ ಬಾಹ್ಯಾಕಾಶ ನಿಲ್ದಾಣದಿಂದ ನಭಕ್ಕೆ ಚಿಮ್ಮಿದೆ. ಸಿಎಂಎಸ್‌-03 ಉಪಗ್ರಹವು ಭಾರತದ ಅತ್ಯಂತ ಭಾರವಾದ ಸಂವಹನ ಉಪಗ್ರಹವಾಗಿದ್ದು, ಸುಮಾರು 4,400 ಕೆಜಿ ತೂಕವಿದೆ.

ʼʼಬಾಹುಬಲಿʼ ಎನಿಸಿಕೊಂಡಿರುವ ಎಲ್‌ವಿಎಂ3-ಎಂ5 ರಾಕೆಟ್‌ ಮೂಲಕ ಸಿಎಂಎಸ್‌ 03 ಉಪಗ್ರಹವನ್ನು ಉಡಾವಣೆ ಮಾಡಲಾಗಿದೆ. 24 ಗಂಟೆಗಳ ಕೌಂಟ್‌ಡೌನ್ ಮುಗಿದ ನಂತರ 43.5 ಮೀಟರ್ ಎತ್ತರದ ರಾಕೆಟ್, ಬಾಹ್ಯಾಕಾಶ ನಿಲ್ದಾಣದಲ್ಲಿರುವ 2ನೇ ಉಡಾವಣಾ ಪ್ಯಾಡ್‌ನಿಂದ ಸಂಜೆ 5.26ಕ್ಕೆ ಪೂರ್ವ ನಿರ್ಣಯದ ಸಮಯದಂತೆ ಆಕಾಶಕ್ಕೆ ಚಿಮ್ಮಿತು. ಅದರ ಬಾಲದಿಂದ ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಹೊಗೆಯನ್ನು ಹೊರಬಂತುʼʼ ಎಂದು ಇಸ್ರೋ ವಿವರಿಸಿದೆ.

ಈ ಸುದ್ದಿಯನ್ನೂ ಓದಿ: Bahubali Rocket Launch: ಅತೀ ಹೆಚ್ಚು ಭಾರದ ಉಪಗ್ರಹ ಉಡಾವಣೆಗೆ ಇಸ್ರೋ ಕ್ಷಣಗಣನೆ

ಎಲ್‌ವಿಎಂ3-ಎಂ5 ರಾಕೆಟ್‌ನಲ್ಲಿ ಸುಮಾರು 16-20 ನಿಮಿಷಗಳ ಹಾರಾಟ ನಡೆಸಿದ ನಂತರ ಉಪಗ್ರಹವು ಸುಮಾರು 180 ಕಿ.ಮೀ ಎತ್ತರವನ್ನು ತಲುಪಿ ಬೇರ್ಪಟ್ಟಿದೆ ಎಂದು ಪ್ರಕಟಣೆ ತಿಳಿಸಿದೆ.

ಇಸ್ರೋದ ಎಕ್ಸ್‌ ಪೋಸ್ಟ್‌:



ಉಪಗ್ರಹದ ವೈಶಿಷ್ಟ್ಯ

ಸಿಎಂಎಸ್‌-03 ಉಪಗ್ರಹವು ಮಲ್ಟಿ ಬ್ಯಾಂಡ್‌ ಸಂವಹನ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ಭೂ ಪ್ರದೇಶ ಸೇರಿದಂತೆ ಸಾಗರ ಪ್ರದೇಶಮೇಲಿನ ಸೇವೆಯನ್ನು ಇದು ಒದಗಿಸಲಿದೆ ಎಂದು ಇಸ್ರೋ ಹೇಳಿದೆ. ಈ ಉಪಗ್ರಹವು ಭಾರತದ ದೂರಸಂಪರ್ಕ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ, ದೇಶದ ಸಂವಹನ ಜಾಲವನ್ನು ಬಲಪಡಿಸುತ್ತದೆ ಮತ್ತು ದೂರದ ಪ್ರದೇಶಗಳಿಗೆ ಇಂಟರ್‌ನೆಟ್‌ ಮತ್ತು ಪ್ರಸಾರ ಸೇವೆಗಳನ್ನು ಒದಗಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಉಡಾವಣೆಯು ತಾಂತ್ರಿಕ ಮಟ್ಟದಲ್ಲಿ ಮಾತ್ರವಲ್ಲದೆ ಭಾರತದ ಸ್ವಾವಲಂಬಿ ಬಾಹ್ಯಾಕಾಶ ಸಾಮರ್ಥ್ಯವನ್ನೂ ಪ್ರದರ್ಶಿಸಿದೆ.



ಎಲ್‌ವಿಎಂ3-ಎಂ5 ಇಸ್ರೋದ ಐದನೇ ಉಡಾವಣೆ ಎನಿಸಿಕೊಂಡಿದೆ. ಎಲ್‌ವಿಎಂ-03 ವಾಹನವನ್ನು ಸಿ25 ಕ್ರಯೋಜೆನಿಕ್ ಹಂತ ಸೇರಿದಂತೆ ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಈ ಹಿಂದೆ 2014ರಲ್ಲಿ ಉಡಾವಣೆಯಾದ ಮೊದಲ ಎಲ್‌ವಿಎಂ-03 ಕ್ರೂ ಮಾಡ್ಯೂಲ್ ಅಟ್ಮಾಸ್ಫಿಯರಿಕ್ ರೀ-ಎಂಟ್ರಿ ಎಕ್ಸ್‌ಪರಿಮೆಂಟ್ (CARE) ಯಶಸ್ವಿ ಉಡಾವಣೆಗಳ ದಾಖಲೆಯನ್ನು ಹೊಂದಿದೆ. ಗಗನ್ ಯಾನ್ ಕಾರ್ಯಾಚರಣೆಗಾಗಿ ಇಸ್ರೋ ಎಲ್‌ವಿಎಂ 3 ರಾಕೆಟ್ ಅನ್ನು ಉಡಾವಣಾ ವಾಹನವಾಗಿ ನಿಯೋಜಿಸಿತ್ತು. ಇದಕ್ಕೆ HRLV ಎಂದು ಹೆಸರಿಸಲಾಗಿದೆ.

ಯೋಗಿ ಆದಿತ್ಯನಾಥ್‌ ಅವರ ಎಕ್ಸ್‌ ಪೋಸ್ಟ್‌:



2018ರ ಡಿಸೆಂಬರ್ 5ರಂದು ಫ್ರೆಂಚ್ ಗಯಾನಾದ ಕೌರೌ ಉಡಾವಣಾ ನೆಲೆಯಿಂದ ಏರಿಯನ್-5 VA-246 ರಾಕೆಟ್ ಮೂಲಕ ಅತ್ಯಂತ ಭಾರವಾದ ಸಂವಹನ ಉಪಗ್ರಹ GSAT-11 ಅನ್ನು ಇಸ್ರೋ ಉಡಾವಣೆ ಮಾಡಿತ್ತು. ಸುಮಾರು 5,854 ಕೆಜಿ ತೂಕವಿದ್ದ GSAT-11 ಇಸ್ರೋ ನಿರ್ಮಿಸಿದ ಮೊದಲ ಅತ್ಯಂತ ಭಾರವಾದ ಉಪಗ್ರಹವಾಗಿತ್ತು.