ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indo- China Visa: ಸುಧಾರಿಸಿತು ಇಂಡಿಯಾ- ಚೀನಾ ಸಂಬಂಧ; 5 ವರ್ಷಗಳ ಬಳಿಕ ಪ್ರವಾಸಿ ವೀಸಾ ಪುನರಾರಂಭ

Indo-China: ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ದೀರ್ಘಕಾಲದ ಮಿಲಿಟರಿ ಬಿಕ್ಕಟ್ಟಿನ ನಂತರ ಬಳಿಕ ಭಾರತ ಹಾಗೂ ಚೀನಾ ರಾಜತಾಂತ್ರಿ ಸಂಬಂಧಗಳು ಸರಿಯಾಗಿವೆ. ಇದೀಗ ವಿಶ್ವದಾದ್ಯಂತ ಭಾರತೀಯ ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳ ಮೂಲಕ ಅರ್ಜಿ ಸಲ್ಲಿಸುವ ಚೀನೀ ಪ್ರಜೆಗಳಿಗೆ ಭಾರತ ಪ್ರವಾಸಿ ವೀಸಾಗಳನ್ನು ತೆರೆದಿದೆ.

ಸಾಂಧರ್ಬಿಕ ಚಿತ್ರ

ನವದೆಹಲಿ: ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (LAC) ದೀರ್ಘಕಾಲದ ಮಿಲಿಟರಿ ಬಿಕ್ಕಟ್ಟಿನ ನಂತರ ಬಳಿಕ ಭಾರತ ಹಾಗೂ ಚೀನಾ ರಾಜತಾಂತ್ರಿ ಸಂಬಂಧಗಳು ಸರಿಯಾಗಿವೆ. ಇದೀಗ ವಿಶ್ವದಾದ್ಯಂತ ಭಾರತೀಯ (Indo- China Visa) ರಾಯಭಾರ ಕಚೇರಿಗಳು ಮತ್ತು ಕಾನ್ಸುಲೇಟ್‌ಗಳ ಮೂಲಕ ಅರ್ಜಿ ಸಲ್ಲಿಸುವ ಚೀನೀ ಪ್ರಜೆಗಳಿಗೆ ಭಾರತ ಪ್ರವಾಸಿ ವೀಸಾಗಳನ್ನು ತೆರೆದಿದೆ. ಜುಲೈನಲ್ಲಿ ಭಾರತವು ಮೊದಲ ಬಾರಿಗೆ ಚೀನೀ ಪ್ರಜೆಗಳಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಿದ ನಾಲ್ಕು ತಿಂಗಳ ನಂತರ ಈ ಕ್ರಮ ಕೈಗೊಳ್ಳಲಾಗಿದೆ. 2020 ರ ಏಪ್ರಿಲ್-ಮೇ ತಿಂಗಳಲ್ಲಿ LAC ವಿವಾದದ ಬಳಿಕ ನಂತರ ಚೀನೀ ಪ್ರಜೆಗಳಿಗೆ ವೀಸಾಗಳನ್ನು ಸ್ಥಗಿತಗೊಳಿಸಲಾಗಿತ್ತು.

ಸಂಪೂರ್ಣವಾಗಿ ಹದಗೆಟ್ಟಿದ್ದ ಭಾರತ- ಹಾಗೂ ಚೀನಾ ಸಂಬಂಧ ಇದೀಗ ಸರಿಯಾಗಿದೆ. ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಚೀನಾಗೆ ನೇರ ವಿಮಾನ ಕಳೆದ ತಿಂಗಳು ಪ್ರಾರಂಭವಾಗಿತ್ತು. ಇದಕ್ಕೂ ಮೊದಲು ಬೇಸಿಗೆಯಲ್ಲಿ ಟಿಬೆಟ್ ಪ್ರದೇಶದ ಪವಿತ್ರ ಸ್ಥಳಗಳಿಗೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸುವ ಒಪ್ಪಂದವನ್ನು ಮಾಡಿಕೊಳ್ಳಲಾಗಿತ್ತು. ಇದಕ್ಕೂ ಮೊದಲು, ಭಾರತವು ಜುಲೈನಲ್ಲಿ ಚೀನಾದ ನಾಗರಿಕರಿಗೆ ಪ್ರವಾಸಿ ವೀಸಾಗಳನ್ನು ಪುನರಾರಂಭಿಸಿತ್ತು, ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಶಾಂಘೈ, ಗುವಾಂಗ್‌ಝೌ ಮತ್ತು ಹಾಂಗ್ ಕಾಂಗ್‌ನಲ್ಲಿರುವ ಕಾನ್ಸುಲೇಟ್‌ಗಳಲ್ಲಿ ಅರ್ಜಿ ಸಲ್ಲಿಸಲು ಅವರಿಗೆ ಅವಕಾಶ ಮಾಡಿಕೊಟ್ಟಿತ್ತು.

Narendra Modi: ಚೀನಾದಲ್ಲಿ ಪ್ರಧಾನಿ ಮೋದಿಯ ಹತ್ಯೆಗೆ ನಡೆದಿತ್ತಾ ಭಾರೀ ಸಂಚು? ಅಮೆರಿಕದ ಕುಕೃತ್ಯ ಬಟಾಬಯಲು

ವಿದೇಶಾಂಗ ಸಚಿವ ಎಸ್ ಜೈಶಂಕರ್ ಜುಲೈನಲ್ಲಿ ಬೀಜಿಂಗ್‌ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಆಗಸ್ಟ್‌ನಲ್ಲಿ ನವದೆಹಲಿಗೆ ಎರಡು ದಿನಗಳ ಪ್ರವಾಸ ಕೈಗೊಂಡರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಇಎಎಂ ಜೈಶಂಕರ್ ಅವರನ್ನು ಭೇಟಿ ಮಾಡಿ ಗಡಿ ಉದ್ವಿಗ್ನತೆ ನಿವಾರಣೆ ಕುರಿತು ಚರ್ಚೆ ಮಾಡಿದ್ದರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 31 ರಂದು ಟಿಯಾಂಜಿನ್‌ನಲ್ಲಿ ನಡೆದ SCO ಶೃಂಗಸಭೆಗಾಗಿ ಏಳು ವರ್ಷಗಳ ಬಳಿಕ ಚೀನಾಗೆ ಪ್ರವಾಸ ಬೆಳೆಸಿದ್ದರು.

ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆ (LAC) ಉದ್ದಕ್ಕೂ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವತ್ತ ಗಮನಹರಿಸುವ ಉನ್ನತ ಮಟ್ಟದ ಹೊಸ ಸುತ್ತಿನ ಮಿಲಿಟರಿ ಮಾತುಕತೆಗಳನ್ನು ಭಾರತ ಮತ್ತು ಚೀನಾ ಮಿಲಿಟರಿಗಳು ನಡೆಸಿವೆ. ಚೀನಾ ರಕ್ಷಣಾ ಸಚಿವಾಲಯ ಇದನ್ನು ತಿಳಿಸಿದೆ. ಅಕ್ಟೋಬರ್ 25 ರಂದು ಭಾರತದ ಬದಿಯಲ್ಲಿರುವ ಮೊಲ್ಡೊ-ಚುಶುಲ್ ಗಡಿ ಸಭೆಯ ಸ್ಥಳದಲ್ಲಿ 23 ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ.