ನವದೆಹಲಿ: ಭಾರತ ಮತ್ತು ರಷ್ಯಾ 'ಭಯೋತ್ಪಾದನೆ (Modi-Putin) ವಿರುದ್ಧದ ಹೋರಾಟದಲ್ಲಿ ಒಟ್ಟಾಗಿ ನಡೆಯುತ್ತವೆ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮಧ್ಯಾಹ್ನ ರಷ್ಯಾದ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಎ-ಮೊಹಮ್ಮದ್ ನಂಟು ಹೊಂದಿರುವವರನ್ನು ರಷ್ಯಾ ಖಂಡಿಸಿತ್ತು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲು ಭಾರತದೊಂದಿಗೆ ಮಿತ್ರ ದೇಶ ನಿಂತಿದೆ ಎಂದು ಮೋದಿ ಹೇಳಿದ್ದಾರೆ.
ಆಪರೇಷನ್ ಸಿಂದೂರದ ಕುರಿತು ಮಾತನಾಡಿದ ಮೋದಿ, ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶ ಪಡಿಸಿದಾಗ ರಷ್ಯಾ ಭಾರತದ ಕ್ರಮವನ್ನು ಸಮರ್ಥಿಸಿಕೊಂಡಿತ್ತು ಎಂದು ಹೇಳಿದರು. ಉಭಯ ದೇಶಗಳು ಭಯೋತ್ಪಾದನೆಯ ವಿರುದ್ಧ ನಿಂತು ಜಗತ್ತಿಗೆ ಶಾಂತಿ ಸಂದೇಶ ನೀಡಬೇಕು ಎಂದು ಮೋದಿ ಹೇಳಿದರು. ಬಳಿಕ ಮಾತನಾಡಿದ ಪುಟಿನ್, ಮೊದಲಿಗೆ ನನ್ನನ್ನ ಭಾರತಕ್ಕೆ ಆಹ್ವಾನಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ. ಉಕ್ರೇನ್ ಜೊತೆಗೆ ಶಾಂತಿಯುತ ಇತ್ಯರ್ಥಕ್ಕಾಗಿ ರಷ್ಯಾ ಕೆಲಸ ಮಾಡುತ್ತಿದೆ. ಅಲ್ಲದೇ ರಷ್ಯಾ ಮತ್ತು ಭಾರತದ ನಡುವಿನ ಸಂಬಂಧವು ನಂಬಿಕೆಯನ್ನ ಆಧರಿಸಿದೆ. ನಾವು ಶಾಂತಿಯ ಮಾರ್ಗದಲ್ಲಿ ಪ್ರಯಾಣಿಸಿದ್ರೆ ಮಾತ್ರ ವಿಶ್ವಕ್ಕೆ ಪ್ರಯೋಜನವಾಗುತ್ತದೆ ಎಂದು ತಿಳಿಸಿದರು.
ರಷ್ಯಾ ಮತ್ತು ಭಾರತದ ನಡುವಿನ ಸಂಬಂಧವು ನಂಬಿಕೆಯನ್ನ ಆಧರಿಸಿದೆ. ನಾವು ಶಾಂತಿಯ ಮಾರ್ಗದಲ್ಲಿ ಪ್ರಯಾಣಿಸಿದರೆ ಮಾತ್ರ ಅದು ವಿಶ್ವಕ್ಕೆ ಪ್ರಯೋಜನವಾಗುತ್ತದೆ, ನಿಮ್ಮ ಪ್ರಯತ್ನವನ್ನು ಪ್ರಶಂಸಿಸುತ್ತೇವೆಂದು ತಿಳಿಸಿದ್ದಾರೆ. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಭಾರತ-ರಷ್ಯಾ ಪಾಲುದಾರಿಕೆಗೆ ಹೊಸ ದಿಕ್ಕನ್ನು ನೀಡುವ ಹಲವಾರು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು. ಪ್ರಧಾನಿ ಮೋದಿ ಮೊದಲು ರಷ್ಯಾದಲ್ಲಿ ಪುಟಿನ್ ಮತ್ತು ಅವರ ನಿಯೋಗವನ್ನು ಸ್ವಾಗತಿಸಿದರು ಮತ್ತು ಈ ಭೇಟಿ ಭಾರತ-ರಷ್ಯಾ ಸಂಬಂಧಗಳ ಹೊಸ ಮೈಲುಗಲ್ಲು ಎಂದು ಕರೆದಿದ್ದಾರೆ.
ಪುಟಿನ್‌ಗೆ ಇಷ್ಟೆಲ್ಲಾ ಭದ್ರತೆನಾ? ಬಳಸಿದ ವಸ್ತು ಮಾತ್ರ ಅಲ್ಲ, ಮಲವನ್ನು ಪ್ಯಾಕ್ ಮಾಡಿ ರಷ್ಯಾಗೆ ಕೊಂಡೊಯ್ಯಲಾಗುತ್ತೆ!
ಕಳೆದ ವರ್ಷ ಭಾರತ-ರಷ್ಯಾ ದ್ವಿಪಕ್ಷೀಯ ವ್ಯಾಪಾರವು ಶೇ. 12 ರಷ್ಟು ಬೆಳವಣಿಗೆ ಸಾಧಿಸಿ, ಸುಮಾರು $64 ಬಿಲಿಯನ್ ತಲುಪಿ ಹೊಸ ದಾಖಲೆ ನಿರ್ಮಿಸಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. ಈ ವರ್ಷದ ವ್ಯಾಪಾರವು ಇದೇ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ ಮತ್ತು ಅದನ್ನು $100 ಬಿಲಿಯನ್‌ಗೆ ಹೆಚ್ಚಿಸುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.