ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Heritage Sites: ಭಾರತದಲ್ಲಿ ಎಷ್ಟು ಯುನೆಸ್ಕೋ ತಾಣಗಳಿವೆ? ಅತಿ ಹೆಚ್ಚು ಪರಂಪರೆ ತಾಣಗಳ ದೇಶ ಯಾವುದು?

ಭಾರತದಲ್ಲಿ ಒಟ್ಟು 44 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿದ್ದು, ಮಹಾರಾಷ್ಟ್ರ ರಾಜ್ಯದಲ್ಲಿ ಅತಿ ಹೆಚ್ಚು ತಾಣಗಳಿವೆ. ವಿಶ್ವ ಮಟ್ಟದಲ್ಲಿ ಇಟಲಿ 61 ತಾಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು, ಚೀನಾ ಮತ್ತು ಜರ್ಮನಿ ನಂತರದ ಸ್ಥಾನಗಳಲ್ಲಿ ಇವೆ.

ವಿಶ್ವ ಹೆರಿಟೇಜ್‌ ದಿನ

ಬೆಂಗಳೂರು: ಭಾರತವು ತನ್ನ ಸಮೃದ್ಧ ಇತಿಹಾಸ, ವೈವಿಧ್ಯಮಯ ಸಂಸ್ಕೃತಿ ಮತ್ತು ಅದ್ಭುತ ವಾಸ್ತುಶಿಲ್ಪದ ಮೂಲಕ ವಿಶ್ವದ ಗಮನ ಸೆಳೆದಿದೆ. ಪ್ರತಿವರ್ಷ ಲಕ್ಷಾಂತರ ವಿದೇಶಿ ಪ್ರವಾಸಿಗರು ಭಾರತದ ಪಾರಂಪರಿಕ ತಾಣಗಳನ್ನು ಭೇಟಿ ನೀಡಲು ಬರುತ್ತಾರೆ. ಇದಕ್ಕೆ ಪ್ರಮುಖ ಕಾರಣ ಯುನೆಸ್ಕೋ ಗುರುತಿಸಿರುವ ವಿಶ್ವ ಪರಂಪರೆಯ ತಾಣಗಳೇ ಆಗಿವೆ. ಇವುಗಳ ಇತಿಹಾಸ, ಕಲಾ ವೈಭವ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರಿಯಲು ಜಗತ್ತಿನ ನಾನಾ ಭಾಗಗಳಿಂದ ಜನರು ಭಾರತಕ್ಕೆ ಆಗಮಿಸುತ್ತಾರೆ.

ಹಾಗಾದ್ರೆ ಭಾರತದಲ್ಲಿ ಎಷ್ಟು ಯುನೆಸ್ಕೋ ತಾಣಗಳಿವೆ..? ಅತೀ ಹೆಚ್ಚು ಯುನೆಸ್ಕೋ ತಾಣಗಳನ್ನು ಹೊಂದಿರುವ ದೇಶ ಯಾವುದು..? ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂದು ಇದ್ದರೆ ಈ ಸುದ್ದಿ ಓದಿ..

ಭಾರತದಲ್ಲಿ

ಭಾರತದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೆಷ್ಟು..?ದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳೆಷ್ಟು..?

ಭಾರತದಲ್ಲಿ ಒಟ್ಟು 44 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಿದ್ದು, ಅವುಗಳಲ್ಲಿ 36 ಸಾಂಸ್ಕೃತಿಕ ತಾಣಗಳು, 7 ನೈಸರ್ಗಿಕ ತಾಣಗಳು ಹಾಗೂ 1 ಮಿಶ್ರ ತಾಣವಾಗಿದೆ. ವಿಶ್ವದ 170 ದೇಶಗಳಲ್ಲಿ ಒಟ್ಟು 1,248 ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ದಾಖಲಾಗಿವೆ. ಈ ಪೈಕಿ ಭಾರತದ ಸ್ಥಾನವೂ ಅತ್ಯಂತ ಮಹತ್ವದ್ದಾಗಿದೆ.

World Heritage Day 2026: ವಿಶ್ವ ಪರಂಪರೆ ದಿನ 2026: ಪಾರಂಪರಿಕ ತಾಣಗಳ ಸಂರಕ್ಷಣೆಯ ಮಹತ್ವ ಏನು?

ಭಾರತದಲ್ಲಿರುವ ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳು ಯಾವುವು..?

ಭಾರತದ ಪ್ರಮುಖ ಸಾಂಸ್ಕೃತಿಕ ತಾಣಗಳಲ್ಲಿ ಅಜಂತಾ ಗುಹೆಗಳು, ಆಗ್ರಾ ಕೋಟೆ, ಎಲ್ಲೋರಾ ಗುಹೆಗಳು, ಹಂಪಿ ಸ್ಮಾರಕಗಳ ಗುಂಪು, ಮಹಾಬಲಿಪುರಂ ಸ್ಮಾರಕಗಳು, ಖಜುರಾಹೊ ಸ್ಮಾರಕಗಳ ಗುಂಪು, ಭಾರತದ ಪರ್ವತ ರೈಲ್ವೆಗಳು, ನಳಂದ, ಕುತುಬ್ ಮಿನಾರ್, ಕೆಂಪು ಕೋಟೆ, ಕೋಣಾರ್ಕ್ ಸೂರ್ಯ ದೇವಾಲಯ ಮತ್ತು ತಾಜ್ ಮಹಲ್ ಪ್ರಮುಖವಾಗಿವೆ.

ನೈಸರ್ಗಿಕ ತಾಣಗಳ ಪಟ್ಟಿಯಲ್ಲಿ ಹಿಮಾಲಯನ್ ರಾಷ್ಟ್ರೀಯ ಉದ್ಯಾನವನ, ಕಾಜಿರಂಗ ರಾಷ್ಟ್ರೀಯ ಉದ್ಯಾನವನ, ನಂದಾ ದೇವಿ ಮತ್ತು ಹೂವಿನ ಕಣಿವೆ ರಾಷ್ಟ್ರೀಯ ಉದ್ಯಾನವನಗಳು, ಸುಂದರಬನ್ಸ್ ರಾಷ್ಟ್ರೀಯ ಉದ್ಯಾನವನ, ಪಶ್ಚಿಮ ಘಟ್ಟಗಳು, ಖಂಗ್ಚೆಂಡ್ಜೊಂಗಾ ರಾಷ್ಟ್ರೀಯ ಉದ್ಯಾನವನ, ಕಿಯೋಲಾಡಿಯೊ ರಾಷ್ಟ್ರೀಯ ಉದ್ಯಾನವನ ಮತ್ತು ಮಾನಸ ವನ್ಯಜೀವಿ ಅಭಯಾರಣ್ಯ ಸೇರಿವೆ.

2025ರಲ್ಲಿ ಸೇರ್ಪಡೆಯಾದ ತಾಣಗಳು

2025ರಲ್ಲಿ ಬುಂದೇಲರ ಅರಮನೆಗಳು ಮತ್ತು ಕೋಟೆಗಳು, ಮೌರ್ಯ ಸಾಮ್ರಾಜ್ಯದ ಅಶೋಕನ ಶಾಸನಗಳು, ಭಾರತದ ಮರಾಠಾ ಮಿಲಿಟರಿ ಭೂದೃಶ್ಯಗಳು ಹಾಗೂ ಉತ್ತರ ಭಾರತದ ಗುಪ್ತ ದೇವಾಲಯಗಳು ಹೊಸದಾಗಿ ಯುನೆಸ್ಕೋ ಪರಂಪರೆ ಪಟ್ಟಿಗೆ ಸೇರ್ಪಡೆಯಾಗಿವೆ.

ಭಾರತದಲ್ಲಿ ಅತಿ ಹೆಚ್ಚು ಯುನೆಸ್ಕೋ ತಾಣಗಳನ್ನು ಹೊಂದಿರುವ ರಾಜ್ಯ ಮಹಾರಾಷ್ಟ್ರವಾಗಿದೆ. ಅಜಂತಾ, ಎಲ್ಲೋರಾ ಗುಹೆಗಳು, ಎಲಿಫೆಂಟಾ ಗುಹೆಗಳು ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮೊದಲಾದ ಪ್ರಸಿದ್ಧ ತಾಣಗಳು ಇಲ್ಲಿ ಇವೆ.

ಅತಿ ಹೆಚ್ಚು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿರುವ ದೇಶ ಇದು..!

ವಿಶ್ವ ಮಟ್ಟದಲ್ಲಿ ಅತಿ ಹೆಚ್ಚು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು ಹೊಂದಿರುವ ದೇಶ ಇಟಲಿ. ಇಟಲಿ ಒಟ್ಟು 61 ತಾಣಗಳನ್ನು ಹೊಂದಿದ್ದು ಮೊದಲ ಸ್ಥಾನದಲ್ಲಿದೆ. ಅದರ ನಂತರ 60 ತಾಣಗಳೊಂದಿಗೆ ಚೀನಾ ಎರಡನೇ ಸ್ಥಾನದಲ್ಲಿದೆ. ಜರ್ಮನಿ 55 ತಾಣಗಳನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದೆ. ಈ ದೇಶಗಳು ತಮ್ಮ ಐತಿಹಾಸಿಕ ಹಾಗೂ ನೈಸರ್ಗಿಕ ವೈಭವದಿಂದ ವಿಶ್ವದ ಗಮನ ಸೆಳೆಯುತ್ತಿವೆ.