ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಭಾರತೀಯ ಸೇನೆಯಿಂದ ಗಡಿಯಲ್ಲಿನ ಪಾಕ್ ನೆಲೆ, ಲಾಂಚ್ ಪ್ಯಾಡ್‌‌ಗಳು ಧ್ವಂಸ; ವಿಡಿಯೊ ನೋಡಿ

ಆಪರೇಷನ್​ ಸಿಂಧೂರ್​​ ನಂತರ ಪಾಕಿಸ್ತಾನ ಭಾರತದ ಮೇಲೆ ಭಾರೀ ಡ್ರೋನ್​ಗಳು ಮತ್ತು ಶೆಲ್​ ದಾಳಿಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುತ್ತಿರುವ ಭಾರತ ಟ್ಯೂಬ್-ಲಾಂಚ್ಡ್ ಡ್ರೋನ್‌ಗಳನ್ನು ಉಡಾಯಿಸಲಾಗುತ್ತಿದ್ದ ಪಾಕಿಸ್ತಾನಿ ಪೋಸ್ಟ್‌ಗಳು ಮತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳನ್ನು ಧ್ವಂಸ ಮಾಡಿದೆ.

ಇಸ್ಲಾಮಾಬಾದ್‌: ಆಪರೇಷನ್​ ಸಿಂಧೂರ್​​ (Operation Sindoor) ನಂತರ ಪಾಕಿಸ್ತಾನ ಭಾರತದ ಮೇಲೆ ಭಾರೀ ಡ್ರೋನ್​ಗಳು ಮತ್ತು ಶೆಲ್​ ದಾಳಿಗಳನ್ನು ನಡೆಸಲಾಗುತ್ತಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ಕೊಡುತ್ತಿರುವ ಭಾರತ ಟ್ಯೂಬ್-ಲಾಂಚ್ಡ್ ಡ್ರೋನ್‌ಗಳನ್ನು ಉಡಾಯಿಸಲಾಗುತ್ತಿದ್ದ ಪಾಕಿಸ್ತಾನಿ ಪೋಸ್ಟ್‌ಗಳು ಮತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್‌ಗಳನ್ನು ಧ್ವಂಸ ಮಾಡಿದೆ. ಭಾರತೀಯ ಸೇನೆಯು ಜಮ್ಮು ಮತ್ತು ಕಾಶ್ಮೀರದ ಬಳಿ ಪಾಕಿಸ್ತಾನದ ಪೋಸ್ಟ್​ಗಳು ಮತ್ತು ಭಯೋತ್ಪಾದಕ ಉಡಾವಣಾ ಪ್ಯಾಡ್​ಗಳನ್ನು ನಾಶಪಡಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿದೆ. ಇದೀಗ ಸೇನೆ ಲಾಂಚ್‌ ಪ್ಯಾಡ್‌ಗಳನ್ನು ಧ್ವಂಸ ಮಾಡುವ ವಿಡಿಯೋಗಳನ್ನು ಹಂಚಿಕೊಂಡಿದೆ.



ಪಾಕಿಸ್ತಾನವು ಗಡಿಯುದ್ದಕ್ಕೂ ರಾತ್ರಿಯಿಡೀ ಶೆಲ್ ದಾಳಿ ಮುಂದುವರಿಸಿದೆ. ಕುಪ್ವಾರಾದಲ್ಲಿ ಬ್ಲ್ಯಾಕ್‌ಔಟ್ ಜಾರಿಗೊಳಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಹಿರಿಯ ಅಧಿಕಾರಿಯೊಬ್ಬರು ಶೆಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹಲವರಿಗೆ ಗಾಯಗಳಾಗಿವೆ ಎಂದಯ ತಿಳಿದು ಬಂದಿದೆ. ಪ್ರತೀಕಾರವಾಗಿ ಭಾರತವು ಡ್ರೋನ್‌ಗಳು ಮತ್ತು ಕ್ಷಿಪಣಿಗಳೊಂದಿಗೆ ಪಾಕಿಸ್ತಾನದ ಇಸ್ಲಾಮಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿಯ ಮೇಲೆ ದಾಳಿ ಮಾಡಿದೆ. ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆ, ಪಂಜಾಬ್‌ನ ಶೋರ್ಕೋಟ್‌ನ ರಫಿಕಿ ವಾಯುನೆಲೆ ಮತ್ತು ಪಂಜಾಬ್‌ನ ಚಕ್ವಾಲ್‌ನಲ್ಲಿರುವ ಮುರಿಯದ್ ವಾಯುನೆಲೆ ಸೇರಿದಂತೆ ಪಾಕಿಸ್ತಾನದ ಮೂರು ವಾಯುನೆಲೆಗಳ ಮೇಲೆ ದಾಳಿ ಮಾಡಲಾಗಿದೆ.

ಈ ಸುದ್ದಿಯನ್ನೂ ಓದಿ:Operation Sindoor: ಪಾಕಿಸ್ತಾನಿಂದ ನಾಗರಿಕ ಪ್ರದೇಶದ ಮೇಲೆ ಶೆಲ್‌ ದಾಳಿ; ಆಡಳಿತಾಧಿಕಾರಿ ಬಲಿ, ಹಲವರಿಗೆ ಗಾಯ

ಶುಕ್ರವಾರ ಪಾಕಿಸ್ತಾನವು 26 ಸ್ಥಳಗಳಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ಭಾರತದ ಭೂಪ್ರದೇಶದ ಮೇಲೆ ಮತ್ತೆ ದಾಳಿ ನಡೆಸಿದ ನಂತರ ಭಾರತ ಈ ಪ್ರತೀಕಾರ ತೀರಿಸಿಕೊಂಡಿದೆ. ಪಾಕಿಸ್ತಾನ ಹಾರಿಸಿದ ಆರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಭಾರತ ಹೊಡೆದುರುಳಿಸಿದೆ. ಮೂಲಗಳ ಪ್ರಕಾರ, ರಾಜೌರಿಯಲ್ಲಿ ಪಾಕಿಸ್ತಾನ ನಡೆಸಿದ ಶೆಲ್ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ, ಇದರಲ್ಲಿ ಮೆಂಧರ್ ಮತ್ತು ಆರ್‌ಎಸ್ ಪುರದ ಒಬ್ಬರು ಸೇರಿದ್ದಾರೆ. ದಾಳಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಪಾಕಿಸ್ತಾನವು ರಾಜೌರಿಯಲ್ಲಿ ವಸತಿ ಪ್ರದೇಶಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಿಕೊಂಡು ಅಂಗಡಿಗಳು ಮತ್ತು ಮನೆಗಳ ಜೊತೆಗೆ ಧಾರ್ಮಿಕ ಸ್ಥಳಗಳಿಗೆ ಹಾನಿ ಮಾಡಲು ಪ್ರಯತ್ನಿಸಿದೆ ಎಂದು ಸ್ಥಳೀಯ ಜನರು ಹೇಳಿದ್ದಾರೆ.