ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀಲಂಕಾ ಬಳಿ ಅಮೆರಿಕ ದಾಳಿ ನಡೆಸಿದ ಇರಾನಿನ ಯುದ್ಧ ನೌಕೆಯ ಸಹಾಯಕ್ಕೆ ತೆರಳಿದ ಭಾರತದ ಹಡಗು

ಶ್ರೀಲಂಕಾದ ದಕ್ಷಿಣ ಕರಾವಳಿಯ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಜಲಾಂತರ್ಗಾಮಿ ನೌಕೆಯು ದಾಳಿ ನಡೆಸಿದ ಪರಿಣಾಮ ಇರಾನಿನ ಯುದ್ಧನೌಕೆ ಐಆರ್‌ಐಎಸ್ ದೇನಾ ಮುಳುಗುತ್ತಿದ್ದು, ಇದರ ರಕ್ಷಣೆಗೆ ಈಗ ಭಾರತದ ಹಡಗು ತೆರಳಿದೆ. ಐಆರ್‌ಐಎಸ್ ದೇನಾದಿಂದ ಬಂದ ಅಪಾಯದ ಸಂಕೇತಕ್ಕೆ ಸ್ಪಂದಿಸಿ ಭಾರತೀಯ ನೌಕಾಪಡೆಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ತೆರಳಿದೆ.

ಸಂಗ್ರಹ ಚಿತ್ರ

ನವದೆಹಲಿ: ಭಾರತಕ್ಕೆ ಅತಿಥಿಯಾಗಿ ಬಂದಿದ್ದ ಇರಾನಿನ ಯುದ್ಧನೌಕೆ ಐಆರ್‌ಐಎಸ್ ದೇನಾವು (IRIS Dena) ಶ್ರೀಲಂಕಾ (Srilanka) ದಕ್ಷಿಣ ಕರಾವಳಿಯ ಹಿಂದೂ ಮಹಾಸಾಗರದಲ್ಲಿ (Indian Ocean) ಅಮೆರಿಕದ (America) ದಾಳಿಯ ಬಳಿಕ ಮುಳುಗುವ ಅಪಾಯದಲ್ಲಿದ್ದು, ಇದರ ರಕ್ಷಣೆಗೆ ಭಾರತದ ಹಡಗು ಧಾವಿಸಿದೆ. ಭಾರತದಲ್ಲಿ ಜಂಟಿ ನೌಕಾ ತಾಲೀಮು ನಡೆಸಿ ಮರಳುತ್ತಿದ್ದ ಐಆರ್‌ಐಎಸ್ ದೇನಾಗೆ ಯುನೈಟೆಡ್ ಸ್ಟೇಟ್ಸ್ ಜಲಾಂತರ್ಗಾಮಿ ನೌಕೆಯ ಟಾರ್ಪಿಡೊ (United States submarine torpedo) ಡಿಕ್ಕಿಯಾಗಿತ್ತು. ಐಆರ್‌ಐಎಸ್ ದೇನಾದಿಂದ ಬಂದ ಅಪಾಯದ ಸಂಕೇತಕ್ಕೆ ಸ್ಪಂದಿಸಿರುವ ಭಾರತೀಯ ನೌಕಾಪಡೆಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಿಗೆ ತೆರಳಿದೆ.

ಬಂಗಾಳಕೊಲ್ಲಿಯಲ್ಲಿ ಫೆಬ್ರವರಿ 18 ರಿಂದ 25 ರವರೆಗೆ ನಡೆದ ಮಿಲನ್ ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂನಲ್ಲಿ ಭಾಗವಹಿಸಿದ್ದ ಐಆರ್‌ಐಎಸ್ ದೇನಾವನ್ನು ಅಲ್ಲಿ ಭಾರತೀಯ ನೌಕಾಪಡೆಯು ಸ್ವಾಗತಿಸಿದ್ದು, ಹೀಗಾಗಿ ಅದು ಆಂಧ್ರಪ್ರದೇಶದ ವಿಶಾಖಪಟ್ಟಣಕ್ಕೆ ಬಂದು ಅಲ್ಲಿಂದ ಮರಳಿ ಹೋಗುತ್ತಿದ್ದಾಗ ಅಮೆರಿಕದ ಹಡಗು ದಾಳಿ ನಡೆಸಿತ್ತು.

Iran-Israel War: ದುಬೈನಲ್ಲಿ ಸಿಲುಕಿದ್ದ 50 ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸ್‌

ಯುನೈಟೆಡ್ ಸ್ಟೇಟ್ಸ್ ಜಲಾಂತರ್ಗಾಮಿ ನೌಕೆಯ ಟಾರ್ಪಿಡೊ ದೇನಾಗೆ ಡಿಕ್ಕಿ ಹೊಡೆದ ಅನಂತರ ಅದು ಹಿಂದೂ ಮಹಾಸಾಗರದಲ್ಲಿ ಮುಳುಗುತ್ತಿದೆ. ಹೀಗಾಗಿ ಅದು ಅಪಾಯದ ಸಂಕೇತವನ್ನು ಕಳುಹಿಸಿದ್ದು, ಇದನ್ನು ಆಧರಿಸಿ ಭಾರತೀಯ ನೌಕಾಪಡೆಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದೆ.

ಮಾರ್ಚ್ 4ರಂದು ಮುಂಜಾನೆ ಕೊಲಂಬೊದಲ್ಲಿರುವ ಸಮುದ್ರ ರಕ್ಷಣಾ ಸಮನ್ವಯ ಕೇಂದ್ರ (ಎಂಆರ್‌ಸಿಸಿ)ಕ್ಕೆ ಐಆರ್ ಐಎಸ್ ದೇನಾದಿಂದ ರಕ್ಷಣೆಗಾಗಿ ಕರೆ ಬಂದಿದೆ. ಶ್ರೀಲಂಕಾದ ಶೋಧ ಮತ್ತು ರಕ್ಷಣಾ ಪ್ರದೇಶದೊಳಗಿರುವ ಗ್ಯಾಲೆಯಿಂದ ಪಶ್ಚಿಮಕ್ಕೆ 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿರಿವ ದೇನಾದಿಂದ ಭಾರತೀಯ ನೌಕಾಪಡೆಗೂ ಸಂದೇಶ ಬಂದ ತಕ್ಷಣ ಭಾರತೀಯ ನೌಕಾಪಡೆಯು ವಿಳಂಬವಿಲ್ಲದೆ ಅದರ ರಕ್ಷಣೆಗಾಗಿ ಧಾವಿಸಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಈಗಾಗಲೇ ಶ್ರೀಲಂಕಾ ನಾಯಕತ್ವದಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಮಾರ್ಚ್ 4ರಂದು 1000 ಗಂಟೆಗಳ ಸಮಯದಲ್ಲಿ ದೀರ್ಘ ಶ್ರೇಣಿಯ ಸಮುದ್ರ ಗಸ್ತು ವಿಮಾನವನ್ನು ನಿಯೋಜಿಸಲಾಗಿದೆ. ಅಗತ್ಯವಿದ್ದರೆ ವಿಮಾನದಿಂದ ಬಿಡಬಹುದಾದ ಲೈಫ್ ರಾಫ್ಟ್‌ಗಳನ್ನು ಹೊಂದಿದ ಎರಡನೇ ವಿಮಾನವು ತ್ವರಿತ ನಿಯೋಜನೆಗಾಗಿ ಸಿದ್ಧವಾಗಿದೆ.

Iran- Israel War: ಖಮೇನಿ ಹತ್ಯೆ ಖಂಡಿಸಿ ಪ್ರತಿಭಟಿಸಿದ ಕಾಂಗ್ರೆಸ್‌ ಶಾಸಕನಿಗೆ ಈಗ ಸಂಕಷ್ಟ

ಸಮೀಪದಲ್ಲೇ ಕಾರ್ಯನಿರ್ವಹಿಸುತ್ತಿದ್ದ ನೌಕಾಯಾನ ತರಬೇತಿ ಹಡಗು ಐಎನ್ ಎಸ್ ತರಂಗಿಣಿ ಆದೇಶ ದೊರೆತ ತಕ್ಷಣ ಸಹಾಯಕ್ಕೆ ಧಾವಿಸಿದೆ. ಅದಾಗಲೇ ಶ್ರೀಲಂಕಾ ನೌಕಾಪಡೆ ಮತ್ತು ಇತರ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಚಟುವಟಿಕೆಗಳನ್ನು ಪ್ರಾರಂಭಿಸಿದ್ದವು. ಈ ಕಾರ್ಯಾಚರಣೆಗೆ ಸಾಥ್ ನೀಡಲು ಐಎನ್ ಎಸ್ ಇಕ್ಷಾಕ್ ಎಂಬ ಸಮೀಕ್ಷಾ ಹಡಗು ಕೂಡ ಕೊಚ್ಚಿಯಿಂದ ಹೊರಟಿದೆ. ಹಡಗಿನಿಂದ ನಾಪತ್ತೆಯಾಗಿರುವ ಸಿಬ್ಬಂದಿಗಾಗಿ ಹುಡುಕಾಟವನ್ನು ಮುಂದುವರಿಸಲಾಗಿದೆ.

ವಿದ್ಯಾ ಇರ್ವತ್ತೂರು

View all posts by this author