ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ರಷ್ಯಾದಿಂದ ಭಾರತ ತೈಲ ಖರೀದಿಗೆ ಅಮೆರಿಕ ಕ್ಯಾತೆ; ವಿದೇಶಾಂಗ ಸಚಿವಾಲಯದ ಉತ್ತರವೇನು?

ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಅಮೆರಿಕದ ಟೀಕೆಗೆ ಭಾರತ ತಕ್ಕ ಉತ್ತರ ನೀಡಿದೆ. "ನಮ್ಮ ಇಂಧನ ಅಗತ್ಯಗಳನ್ನು ಭದ್ರಪಡಿಸಿಕೊಳ್ಳುವಲ್ಲಿ, ಮಾರುಕಟ್ಟೆಯಲ್ಲಿ ಏನು ನೀಡಲಾಗುತ್ತಿದೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಪರಿಸ್ಥಿತಿಯಿಂದ ನಾವು ಮಾರ್ಗದರ್ಶನ ಪಡೆಯುತ್ತೇವೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ರಷ್ಯಾದಿಂದ ಭಾರತ ತೈಲ ಖರೀದಿಗೆ ಅಮೆರಿಕ ಕ್ಯಾತೆ

Vishakha Bhat Vishakha Bhat Aug 1, 2025 6:41 PM

ವಾಷಿಂಗ್ಟನ್‌: ರಷ್ಯಾದಿಂದ ತೈಲ ಖರೀದಿ ಮುಂದುವರಿಸಿರುವ ಅಮೆರಿಕದ (Donald Trump) ಟೀಕೆಗೆ ಭಾರತ ತಕ್ಕ ಉತ್ತರ ನೀಡಿದೆ. "ನಮ್ಮ ಇಂಧನ ಅಗತ್ಯಗಳನ್ನು ಭದ್ರಪಡಿಸಿಕೊಳ್ಳುವಲ್ಲಿ, ಮಾರುಕಟ್ಟೆಯಲ್ಲಿ ಏನು ನೀಡಲಾಗುತ್ತಿದೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಪರಿಸ್ಥಿತಿಯಿಂದ ನಾವು ಮಾರ್ಗದರ್ಶನ ಪಡೆಯುತ್ತೇವೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಶುಕ್ರವಾರ ಸಂಜೆ ಹೇಳಿಕೆಯನ್ನು ನೀಡಿದ್ದಾರೆ. ಅಮೆರಿಕ ಭಾರತದ ಮೇಲೆ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸುವಂತೆ ಅಮೆರಿಕ ಒತ್ತಡ ಹೇರಿದ್ದು, ಇದು ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ಜೊತೆಗೆ ನಡೆಸುತ್ತಿರುವ ಯುದ್ಧಕ್ಕೆ ಸಹಾಯ ಮಾಡಿದಂತಾಗುತ್ತದೆ ಎಂದು ಹೇಳಿದೆ.

ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟೀಕೆ, ನಿಂದನೆಗಳನ್ನು ತಳ್ಳಿಹಾಕಿರುವ ಭಾರತ, ಎರಡೂ ದೇಶಗಳ ನಡುವಿನ ಪಾಲುದಾರಿಕೆಯು ಹಲವಾರು ಪರಿವರ್ತನೆಗಳು ಮತ್ತು ಸವಾಲುಗಳನ್ನು ಎದುರಿಸಿದೆ ಎಂದು ಹೇಳಿದ್ದಾರೆ. ಭಾರತ ಮತ್ತು ಅಮೆರಿಕ ಪರಸ್ಪರ ಹಂಚಿಕೆಯ ಹಿತಾಸಕ್ತಿಗಳು, ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಜನರ ನಡುವೆ ಬಲವಾದ ಸಂಬಂಧಗಳಲ್ಲಿ ಆಧಾರವಾಗಿರುವ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಹಂಚಿಕೊಂಡಿವೆ ಎಂದು ಜೈಸ್ವಾಲ್‌ ಹೇಳಿದ್ದಾರೆ.

ಭಾರತದ ಇಂಧನ ಆಮದುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಜೈಸ್ವಾಲ್, ಖರೀದಿ ನಿರ್ಧಾರಗಳನ್ನು ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿ ತೆಗೆದುಕೊಳ್ಳಲಾಗುತ್ತದೆ ಎಂದು ಒತ್ತಿ ಹೇಳಿದರು. ನಮ್ಮ ಇಂಧನ ಕಾರ್ಯತಂತ್ರವು ಮಾರುಕಟ್ಟೆ ಕೊಡುಗೆಗಳು ಮತ್ತು ವಿಶಾಲ ಜಾಗತಿಕ ಸಂದರ್ಭದಿಂದ ಮಾರ್ಗದರ್ಶಿಸಲ್ಪಡುತ್ತದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Modi-Trump Meet: 5ನೇ ಜನರೇಷನ್‌ ಜೆಟ್‌, ಮಿಷನ್‌ 500, ಮುಂಬೈ ದಾಳಿ ರೂವಾರಿಯ ಗಡಿಪಾರು; ಟ್ರಂಪ್‌-ಮೋದಿ ಒಪ್ಪಂದಗಳ ಲಿಸ್ಟ್‌ ಇಲ್ಲಿದೆ

ರಷ್ಯಾದ ತೈಲ ಖರೀದಿಯ ಬಗ್ಗೆ ಟೀಕೆಗಳು ಎದುರಾದಾಗ - ವಿದೇಶಾಂಗ ಸಚಿವ ಎಸ್. ಜೈಶಂಕರ್, ಭಾರತವು ತನ್ನ ನಾಗರಿಕರ ಅಗತ್ಯಗಳಿಗೆ ಮೊದಲು ಆದ್ಯತೆ ನೀಡುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಸಾಧ್ಯವಾದಷ್ಟು ಉತ್ತಮ ಬೆಲೆಗೆ ಮಾರಾಟ ಮಾಡುವ ಯಾರಿಂದಲೂ ತೈಲವನ್ನು ಖರೀದಿಸುವುದು ಎಂದರ್ಥ ಎಂದು ಅವರು ಹೇಳಿದರು. ಭಾರತವು ದೊಡ್ಡ ತೈಲ ಗ್ರಾಹಕ ದೇಶ ನಮ್ಮಲ್ಲಿ ತೈಲ ಇಲ್ಲದ ಕಾರಣ ನಾವು ದೊಡ್ಡ ತೈಲ ಆಮದುದಾರರಾಗಿದ್ದೇವೆ. ಈಗ, ತೈಲ ಖರೀದಿಸಲು ರಾಜಕೀಯ ತಂತ್ರವಿಲ್ಲ ತೈಲ ಖರೀದಿಸಲು ತೈಲ ತಂತ್ರವಿದೆ ಮಾರುಕಟ್ಟೆ ತಂತ್ರವಿದೆ," ಎಂದು ಜೈಶಂಕರ್ ಆಗಸ್ಟ್ 2024 ರಲ್ಲಿ ಹೇಳಿದ್ದರು.