ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Human Trafficking: ಬೃಹತ್‌ ಮಾನವ ಕಳ್ಳ ಸಾಗಣೆ ಪ್ರಕರಣ ಬೆಳಕಿಗೆ; ಮೂವರು ಮಕ್ಕಳು ಸೇರಿ 27 ಮಂದಿಯ ರಕ್ಷಣೆ

ಅಸ್ಸಾಂನ ಟಿನ್ಸುಕಿಯಾ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಜಂಟಿಯಾಗಿ ವಿವೇಕ್ ಎಕ್ಸ್‌ಪ್ರೆಸ್‌ನ ನಿಯಮಿತ ತಪಾಸಣೆ ಮಾಡುತ್ತಿದ್ದ ವೇಳೆ ಮಾನವ ಕಳ್ಳಸಾಗಣೆ ದಂಧೆಯನ್ನು ಪತ್ತೆ ಹಚ್ಚಿದ್ದಾರೆ. 24 ಮಹಿಳೆಯರು, 3 ಅಪ್ರಾಪ್ತ ಬಾಲಕಿಯರನ್ನು ಈ ಸಂದರ್ಭದಲ್ಲಿ ರಕ್ಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ನಾಲ್ವರನ್ನು ಬಂಧಿಸಲಾಗಿದೆ.

ಮಾಂಸದಂಧೆಗೆ ಬಲಿಯಾಗುತ್ತಿದ್ದ ಮಕ್ಕಳೂ ಸೇರಿ 27 ಜನರ ರಕ್ಷಣೆ

ಗುವಾಹಟಿ: ಮಾನವ ಕಳ್ಳ ಸಾಗಣೆ (Human Trafficking) ಮಾಡುತ್ತಿದ್ದ ಪ್ರಕರಣವೊಂದು ಅಸ್ಸಾಂನಲ್ಲಿ (Assam) ಬೆಳಕಿಗೆ ಬಂದಿದ್ದು 24 ಮಹಿಳೆಯರು, 3 ಅಪ್ರಾಪ್ತರನ್ನು ರಕ್ಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ನಾಲ್ವರನ್ನು ಬಂಧಿಸಲಾಗಿದೆ. ಅಸ್ಸಾಂನ ಟಿನ್ಸುಕಿಯಾ ರೈಲು ನಿಲ್ದಾಣದಲ್ಲಿ (Tinsukia railway station) ವಿವೇಕ್ ಎಕ್ಸ್‌ಪ್ರೆಸ್‌ನ (Vivek Express) ನಿಯಮಿತ ತಪಾಸಣೆಯ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ರೈಲ್ವೆ ರಕ್ಷಣಾ ಪಡೆ (Railway Protection Force ) ಮತ್ತು ಸರ್ಕಾರಿ ರೈಲ್ವೆ ಪೊಲೀಸರು (Government Railway Police) ಜಂಟಿಯಾಗಿ ಈ ಕಾರ್ಯಾಚರಣೆಯನ್ನು ನಡೆಸಿದರು.

ರೈಲ್ವೆ ರಕ್ಷಣಾ ಪಡೆ ಮತ್ತು ಸರ್ಕಾರಿ ರೈಲ್ವೆ ಪೊಲೀಸರು ಜಂಟಿಯಾಗಿ ಟಿನ್ಸುಕಿಯಾ ರೈಲು ನಿಲ್ದಾಣದಲ್ಲಿ ವಿವೇಕ್ ಎಕ್ಸ್‌ಪ್ರೆಸ್‌ನ ನಿಯಮಿತ ತಪಾಸಣೆ ನಡೆಸುತ್ತಿದ್ದ ವೇಳೆ ಮಾನವ ಕಳ್ಳಸಾಗಣೆ ದಂಧೆಯನ್ನು ಪತ್ತೆ ಹಚ್ಚಿದ್ದಾರೆ. 24 ಮಹಿಳೆಯರು, 3 ಅಪ್ರಾಪ್ತ ಬಾಲಕಿಯರನ್ನು ಈ ಸಂದರ್ಭದಲ್ಲಿ ರಕ್ಷಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ನಾಲ್ವರನ್ನು ಬಂಧಿಸಲಾಗಿದೆ.

ತಪಾಸಣಾ ಅಧಿಕಾರಿಗಳು ಎಸ್ - 1 ಕೋಚ್‌ನಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಪ್ರಯಾಣಿಕರನ್ನು ಪ್ರಶ್ನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಟಿನ್ಸುಕಿಯಾದಲ್ಲಿ ಶಾಖಾ ಕಚೇರಿಯನ್ನು ಹೊಂದಿರುವ ಕೊಯಮತ್ತೂರಿನಲ್ಲಿರುವ ರಥಿನಂ ಅರುಮುಗನ್ ರಿಸರ್ಚ್ ಆಂಡ್ ಎಜುಕೇಷನಲ್ ಫೌಂಡೇಶನ್ ಎಂಬ ಸಂಸ್ಥೆಯಿಂದ ನೀಡಲಾಗುವ ಉದ್ಯೋಗದ ಅಮಿಶೆವೊಡ್ಡಿ ಯುವತಿಯರನ್ನು ತಮಿಳುನಾಡಿನ ತಿರುಪ್ಪೂರಿಗೆ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.

ಪ್ರಯಾಣಿಕರ ಪ್ರಯಾಣ ದಾಖಲೆಗಳಲ್ಲಿನ ವ್ಯತ್ಯಾಸಗಳನ್ನು ಗಮನಿಸಿದ ಪೊಲೀಸರು ನೇಮಕಾತಿ ಅಭ್ಯರ್ಥಿಗಳಾಗಿ ಪಟ್ಟಿ ಮಾಡಲಾದ 27 ಜನರಲ್ಲಿ ಒಬ್ಬರ ಬಳಿ ಮಾತ್ರ ಮಾನ್ಯ ದಾಖಲೆಗಳಿದ್ದು ಉಳಿದ 26 ಮಂದಿ ಕಳ್ಳಸಾಗಣೆಯಾಗುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಅವರ ಸಾಗಣೆಗೆ ನಕಲಿ ದಾಖಲೆಗಳನ್ನು ಬಳಸಲಾಗಿದೆ. ಬಳಿಕ ಆರ್‌ಪಿಎಫ್ ಜಿಆರ್‌ಪಿಗೆ ಔಪಚಾರಿಕ ದೂರು ನೀಡಲಾಗಿದೆ.

ಇದನ್ನೂ ಓದಿ: IND vs ENG: ʻಶುಭಮನ್‌ ಗಿಲ್‌ ರನ್‌ಔಟ್‌ ಓವಲ್‌ ಟೆಸ್ಟ್‌ ಪಂದ್ಯಕ್ಕೆ ಟರ್ನಿಂಗ್‌ ಪಾಯಿಂಟ್‌ʼ,-ಆಕಾಶ್‌ ಚೋಪ್ರಾ!

ರಕ್ಷಿಸಲಾದ ಯುವತಿಯರನ್ನು ಅವರ ಕುಟುಂಬಗಳಿಗೆ ಮರಳಿ ಸೇರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಸ್ಥಳೀಯ ಅಧಿಕಾರಿಗಳು ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಗಳ ಸಹಕಾರವನ್ನು ಕೋರಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.