ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

2 ವರ್ಷ 20 ಬಾರಿ ತಪ್ಪಿಸಿಕೊಂಡಿದ್ದ ಪಾಕಿಸ್ತಾನ ಉಗ್ರ ಸೈಫುಲ್ಲಾನನ್ನು ಹೊಡೆದುರುಳಿಸಿದ ಭದ್ರತಾ ಪಡೆ

Kishtwar Encounter: ಭದ್ರತಾ ಪಡೆಗಳು ಭಾನುವಾರ (ಫೆಬ್ರವರಿ 22) ಮೂವರು ಉಗ್ರರನ್ನು ಹೊಡೆದುರುಳಿಸಿವೆ. ಹತರಾದ ಭಯೋತ್ಪಾದಕರಲ್ಲಿ ಪಾಕಿಸ್ತಾನ ಮೂಲದ ಸಂಘಟನೆ ಜೈಷ್‌-ಎ-ಮೊಹಮ್ಮದ್‌ನ ಮೋಸ್ಟ್‌ ವಾಂಟೆಡ್‌ ಉಗ್ರ ಸೈಫುಲ್ಲಾ ಕೂಡ ಸೇರಿದ್ದಾನೆ. ಸತ್ತ ಸೈಫುಲ್ಲಾ 2 ವರ್ಷಗಳಿಂದ ಸುಮಾರು 20 ಬಾರಿ ಸಾವಿನ ದವಡೆಯಿಂದ ಪಾರಾಗಿದ್ದ.

ಸೈಫುಲ್ಲಾ ಮತ್ತು ಭಾರತೀಯ ಸೇನೆ ನಡೆಸಿದ ದಾಳಿ

ಶ್ರೀನಗರ, ಫೆ. 22:‍ ಭದ್ರತಾ ಪಡೆಗಳು ಭಾನುವಾರ (ಫೆಬ್ರವರಿ 22) ಭರ್ಜರಿ ಉಗ್ರ ಬೇಟೆ ನಡೆಸಿದ್ದು, ಮೂವರನ್ನು ಹೊಡೆದುರುಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಕಿಶ್ವ್ತಾರ್‌ನಲ್ಲಿ ಪಾಕಿಸ್ತಾನದ ಉಗ್ರರನ್ನು ಹತ್ಯೆಗೈಯ್ಯುವ ಮೂಲಕ ಯಶಸ್ವಿ ಕಾರ್ಯಾಚರಣೆ ನಡೆಸಿದೆ. ಹತರಾದ ಭಯೋತ್ಪಾದಕರಲ್ಲಿ ಪಾಕಿಸ್ತಾನ ಮೂಲದ ಸಂಘಟನೆ ಜೈಷ್‌-ಎ-ಮೊಹಮ್ಮದ್‌ನ (Jaish-e-Mohammed) ಮೋಸ್ಟ್‌ ವಾಂಟೆಡ್‌ ಉಗ್ರ ಸೈಫುಲ್ಲಾ (Saifullah) ಕೂಡ ಸೇರಿದ್ದಾನೆ. ಈತ 2 ವರ್ಷ ಸುಮಾರು 20 ಬಾರಿ ಭದ್ರತಾ ಪಡೆಗಳ ಕೈಯಿಂದ ಕೊನೆಯ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದ (Kishtwar Encounter). ಇದೀಗ ಭಾರತೀಯ ಸೇನೆ ಆತನನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ.

ಸತ್ತ ಸೈಫುಲ್ಲಾ 2 ವರ್ಷಗಳಿಂದ ಸುಮಾರು 20 ಬಾರಿ ಸಾವಿನ ದವಡೆಯಿಂದ ಪಾರಾಗಿದ್ದ. ಭದ್ರತಾ ಪಡೆಗಳು ಸುತ್ತಿವರಿದಿದ್ದರೂ ತಪ್ಪಿಸಿಕೊಳ್ಳುತ್ತಿದ್ದ. ಆದರೆ ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಆತ ಹತನಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಕಿಶ್ವ್ತಾರ್‌ ಪ್ರದೇಶದಲ್ಲಿ ಉಗ್ರರು ಅವಿತಿದ್ದಾರೆ ಎನ್ನುವ ನಿಖರ ಮಾಹಿತಿ ಪಡೆದ ಸೇನೆ ಕಾರ್ಯಾಚರಣೆ ಆರಂಭಿಸಿತು. ಉಗ್ರರು ಭದ್ರತಾ ಪಡೆಗಳತ್ತ ಗುಂಡು ಹಾರಿಸಿದಾಗ ಎನ್‌ಕೌಂಟರ್‌ ಶುರುವಾಯಿತು. ಪರ್ವತದ ಮಣ್ಣಿನ ಮನೆಯೊಂದರಲ್ಲಿ ಭಯೋತ್ಪಾದಕರು ಅಡಗಿ ಕುಳಿತಿದ್ದರು.

ಉಗ್ರ ಸೈಫುಲ್ಲಾನನ್ನು ಹೊಡೆದುರುಳಿಸಿದ ಭಾರತೀಯ ಸೇನೆ:



ಉಗ್ರರನ್ನು ಗುರಿಯಾಗಿಸಿಕೊಂಡು ಸೇನೆ ನಿಖರ ದಾಳಿ ಸಂಘಟಿಸಿತು. ರಾಜ್ಯ ಪೊಲೀಸ್‌, ಸಿಆರ್‌ಪಿಎಫ್‌ ಮತ್ತು ವಿಶೇಷ ಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ. ಎನ್‌ಕೌಂಟರ್‌ ನಡೆದ ಸ್ಥಳದಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ 2 ಎ.ಕೆ. 47 ರೈಫಲ್ಸ್‌ ಸೇರಿದೆ.

ಭಾರತೀಯ ಸೇನೆ ನಡೆಸಿದ ದಾಳಿ:



ಯಾರು ಈ ಸೈಫುಲ್ಲಾ?

ಪಾಕಿಸ್ತಾನದ ಜೆಇಎಂ ಕಮಾಂಡರ್ ಸೈಫುಲ್ಲಾ ಸುಮಾರು 5 ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ನುಸುಳಿ ಬಂದಾಗಿನಿಂದ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದ. 2024ರ ಜುಲೈಯಲ್ಲಿ ನಾಲ್ವರು ಸೈನಿಕರು ಹುತಾತ್ಮರಾದ ದಾಳಿ ಸೇರಿದಂತೆ ಭದ್ರತಾ ಪಡೆಗಳ ಮೇಲಿನ ಹಲವು ಆಕ್ರಮಣಗಳ ಹಿಂದಿನ ಮಾಸ್ಟರ್ ಮೈಂಡ್ ಈತ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಈತನನ್ನು ಹೊಡೆದುರುಳಿಸಲು ಭದ್ರತಾ ಪಡೆ ಕೆಲವು ಸಮಯದಿಂದ ಬಲೆ ಬೀಸಿತ್ತು.

ಆಪರೇಷನ್ ಟ್ರಾಶಿ-I: ಕಿಶ್ತ್ವಾರ್‌ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ

ಸೇನೆಯ ಶ್ವಾನಕ್ಕೆ ಗಾಯ

ಈ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದ ಸೇನೆಯ ಶ್ವಾನ ಟೈಸನ್‌ಗೆ ಗುಂಡು ತಗುಲಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಉಗ್ರರು ಅಡಗಿರುವ ತಾಣವನ್ನು ಪತ್ತೆ ಹಚ್ಚಿದ ಟೈಸನ್‌ ಮೇಲೆ ಗುಂಡಿನ ದಾಳಿ ನಡೆದಿದೆ. ಗಾಯಗೊಂಡ ಶ್ವಾನವನ್ನು ಕೂಡಲೇ ಏರ್‌ ಲಿಫ್ಟ್‌ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಆಸ್ಪತ್ರೆಯ ಮೂಲಗಳು ಮಾಹಿತಿ ನೀಡಿವೆ. ಟೈಸನ್ ಕಾರ್ಯ ನಿರ್ವಹಣೆ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳಲ್ಲಿ ತರಬೇತಿ ಪಡೆದ ಸೇನಾ ಶ್ವಾನಗಳು‌ ನಿರ್ಣಾಯಕ ಪಾತ್ರವನ್ನು ಮತ್ತೊಮ್ಮೆ ಒತ್ತಿ ಹೇಳಿದೆ. 2024ರ ಅಕ್ಟೋಬರ್‌ನಲ್ಲಿ ಇದೇ ರೀತಿಯ ಕಾರ್ಯಾಚರಣೆಯಲ್ಲಿ ಫ್ಯಾಂಟಮ್ ಹೆಸರಿನ ತರಬೇತಿ ಪಡೆದ ಶ್ವಾನ ಭಯೋತ್ಪಾದಕರೊಂದಿಗಿನ ಮುಖಾಮುಖಿ ವೇಳೆ ಸೈನಿಕರನ್ನು ರಕ್ಷಿಸಿ ತನ್ನ ಪ್ರಾಣವನ್ನು ತ್ಯಾಗ ಮಾಡಿತ್ತು. ಆ ಮೂಲಕ ಫ್ಯಾಂಟಮ್ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಲು ಸಹಾಯ ಮಾಡಿತ್ತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author