ಆಪರೇಷನ್ ಟ್ರಾಶಿ-I: ಕಿಶ್ತ್ವಾರ್‌ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಭಾನುವಾರ ಬೆಳಗ್ಗೆ ನಡೆಸಿದ ಆಪರೇಷನ್ ಟ್ರಾಶಿ-I ಕಾರ್ಯಚರಣೆಯಲ್ಲಿ ಇಬ್ಬರು ಭಯೋತ್ಪಾದಕರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 2 ಎಕೆ-47 ರೈಫಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಟ್ಟದ ತಪ್ಪಲಿನಲ್ಲಿರುವ ಮಣ್ಣಿನ ಮನೆಯೊಳಗೆ ಭಯೋತ್ಪಾದಕರು ಅಡಗಿಕೊಂಡಿದ್ದು, ಭಾರತೀಯ ಸೇನೆ ಮೇಲೆ ಮೊದಲು ದಾಳಿ ಪ್ರಾರಂಭಿಸಿದರು ಎನ್ನಲಾಗಿದೆ.
ಸಂಗ್ರಹ ಚಿತ್ರ -
ಕಿಶ್ತ್ವಾರ್: ಭದ್ರತಾ ಪಡೆಗಳು (Indian army) ಭಾನುವಾರ ಬೆಳಗ್ಗೆ ನಡೆಸಿದ ಆಪರೇಷನ್ ಟ್ರಾಶಿ-I (Operation Trashi-I) ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ (Jammu and kashmir) ಕಿಶ್ತ್ವಾರ್‌ನಲ್ಲಿ (Kishtwar) ಇಬ್ಬರು ಭಯೋತ್ಪಾದಕರನ್ನು (terrorists) ಹತ್ಯೆ ಮಾಡಲಾಗಿದೆ. ಸ್ಥಳದಲ್ಲಿ ಎರಡು ಎಕೆ-47 ರೈಫಲ್‌ಗಳು ವಶಪಡಿಸಿಕೊಳ್ಳಲಾಗಿದೆ. ಕಿಶ್ತ್ವಾರ್‌ನ ಚಟ್ರೂ ಬೆಲ್ಟ್‌ನ ಬೆಟ್ಟದ ತಪ್ಪಲಿನಲ್ಲಿರುವ ಮಣ್ಣಿನ ಮನೆಯೊಳಗೆ ಅಡಗಿದ್ದ ಭಯೋತ್ಪಾದಕರು ಭಾರತೀಯ ಸೇನೆಯ ಮೇಲೆ ದಾಳಿ ನಡೆಸಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಪ್ರತಿ ದಾಳಿ ನಡೆಸಿದ ಸೇನಾ ಸಿಬ್ಬಂದಿ ಇಬ್ಬರನ್ನು ಹತ್ಯೆಗೈದಿದೆ.
ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಭಾರತೀಯ ಸೇನೆಯು ಪೊಲೀಸರು ಮತ್ತು ಸಿಆರ್‌ಪಿಎಫ್ ಸಹಯೋಗದೊಂದಿಗೆ ಆಪರೇಷನ್ ಟ್ರಾಶಿ-I ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರೋಡೆಕೋರರನ್ನು ಕತ್ತಿ ಹಿಡಿದು ಓಡಿಸಿದ ಎನ್‌ಆರ್‌ಐ ಮಹಿಳೆ
ಬೆಟ್ಟದ ತಪ್ಪಲಿನಲ್ಲಿರುವ ಮಣ್ಣಿನ ಮನೆಯೊಳಗೆ ಭಯೋತ್ಪಾದಕರು ಅಡಗಿಕೊಂಡಿದ್ದರು. ಸೈನಿಕರು ಇಲ್ಲಿಗೆ ಸಮೀಪಿಸುತ್ತಿದ್ದಂತೆ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಭಾರತೀಯ ಸೈನಿಕರು ಕೂಡ ಪ್ರತಿ ದಾಳಿ ನಡೆಸಿದ್ದಾರೆ. ಇದು ತೀವ್ರ ಗುಂಡಿನ ಚಕಮಕಿಗೆ ಕಾರಣವಾಯಿತು.
#𝗪𝗵𝗶𝘁𝗲𝗞𝗻𝗶𝗴𝗵𝘁𝗖𝗼𝗿𝗽𝘀 | #𝗢𝗽𝗧𝗿𝗮𝘀𝗵𝗶-𝗜 | #𝗧𝘄𝗼𝗧𝗲𝗿𝗿𝗼𝗿𝗶𝘀𝘁𝘀𝗞𝗶𝗹𝗹𝗲𝗱
— White Knight Corps (@Whiteknight_IA) February 22, 2026
𝗧𝗪𝗢 𝗧𝗘𝗥𝗥𝗢𝗥𝗜𝗦𝗧𝗦 𝗞𝗜𝗟𝗟𝗘𝗗 | 𝗢𝗣𝗘𝗥𝗔𝗧𝗜𝗢𝗡 𝗧𝗥𝗔𝗦𝗛𝗜-𝗜
Pursuant to credible intelligence inputs collated from #JKP, #IB and own intelligence sources, a…
ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆಯಾದ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡ ಭಾರತೀಯ ಸೇನೆಯ ವೈಟ್ ನೈಟ್ ಕಾರ್ಪ್ಸ್, ಯೋಜನೆ ಪ್ರಕಾರ ದಾಳಿ ನಡೆಸಿದ ಭಾರತೀಯ ಸೇನಾ ಪಡೆಯು ಇಲ್ಲಿ ಪ್ರಾಬಲ್ಯ ಸಾಧಿಸಿದವು, ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈಯ್ಯಲಾಗಿದೆ. ಎರಡು ಎಕೆ -47 ರೈಫಲ್‌ಗಳು ಸೇರಿದಂತೆ ಸ್ಥಳದಲ್ಲಿದ್ದ ಹಲವಾರು ಪಡಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಶಾಂತಿಯನ್ನು ಕದಡಲು ಬಯಸುವವರಿಗೆ ಇಲ್ಲಿ ಯಾವುದೇ ಆಶ್ರಯ ಸಿಗುವುದಿಲ್ಲ ಎಂದು ತಿಳಿಸಿದೆ.
ಇರಾನ್‌ನ ಸರ್ವೋಚ್ಚ ನಾಯಕ ಖಮೇನಿ, ಮಗನ ಹತ್ಯೆಗೆ ಸಂಚು ರೂಪಿಸುತ್ತಿದ್ದಾರಾ ಡೊನಾಲ್ಡ್ ಟ್ರಂಪ್?
ಜನವರಿಯಲ್ಲಿ ಚಟ್ರೂ ಅರಣ್ಯ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು ಆರಕ್ಕೂ ಹೆಚ್ಚು ಭಯೋತ್ಪಾದಕರನ್ನು ಭಾರತೀಯ ಸೇನೆಯು ಸೆದೆ ಬಡಿದಿದೆ.