ನವದೆಹಲಿ: ಇತ್ತೀಚೆಗೆ ನಡೆದ ಪ್ರತಿಭಟನೆಯ (Protest) ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress leader Rahul Gandhi) ಅವರು ತಮ್ಮನ್ನು ತಳ್ಳಿದ್ದಾರೆ ಎಂದು ಆರೋಪಿಸಿ ಪತ್ರಕರ್ತೆಯೊಬ್ಬರು (Richa Parashar) ನವದೆಹಲಿ (delhi) ಜಿಲ್ಲೆಯ ಪೊಲೀಸ್ ಉಪ ಆಯುಕ್ತರಿಗೆ (deputy commissioner of police) ಶನಿವಾರ ದೂರು ನೀಡಿದ್ದಾರೆ. ಚುನಾವಣಾ ಆಯೋಗದ ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ವಿರೋಧಿಸಿ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಒಕ್ಕೂಟದಿಂದ ನಡೆದ ಪ್ರತಿಭಟನೆ ವೇಳೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಈ ಘಟನೆ ನಡೆದಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಇಂಡಿಯಾ ಮೈತ್ರಿಕೂಟವು ಕಳೆದ ಸೋಮವಾರ ಪ್ರತಿಭಟನೆ ವೇಳೆ ಸುಪ್ರೀಂ ಕೋರ್ಟ್ಗೆ ಮೆರವಣಿಗೆ ನಡೆಸಿತ್ತು. ಆಗ ತಾವು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆ ನೀಡಲು ಮುಂದಾದಾಗ ಅವರು ತಮ್ಮ ಕೈಯನ್ನು ಹಿಡಿದು ಬಲವಾಗಿ ಎಳೆದಿದ್ದಾರೆ. ಇದರಿಂದ ತಾವು ಮೆಟ್ಟಿಲುಗಳ ಮೇಲೆ ಬಿದ್ದಿದ್ದಾಗಿ ಪತ್ರಕರ್ತೆ ರಿಚಾ ಪರಾಶರ್ ಆರೋಪಿಸಿದ್ದಾರೆ.
ದೊಡ್ಡ ಗಣೇಶ್ಗೆ ಭಾರತ ಕಿರಿಯರ ತಂಡದ ಆಯ್ಕೆಗಾರನ ಪಟ್ಟ?
ಈ ಕುರಿತು ಶನಿವಾರ ನವದೆಹಲಿ ಜಿಲ್ಲೆಯ ಪೊಲೀಸ್ ಉಪ ಆಯುಕ್ತರಿಗೆ ದೂರು ನೀಡಿರುವ ರಿಚಾ, ರಾಹುಲ್ ಗಾಂಧಿ ಮತ್ತು ಇತರರ ವಿರುದ್ಧ ತಕ್ಷಣವೇ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಒತ್ತಾಯಿಸಿದರು. ತಾನು ಮೂರು ತಿಂಗಳ ಗರ್ಭಿಣಿಯಾಗಿದ್ದು ಈ ವೇಳೆ ತನ್ನೊಂದಿಗೆ ದುರ್ವರ್ತನೆ ತೋರಲಾಗಿದೆ, ಬೆದರಿಕೆ ಹಾಕಲಾಗಿದೆ ಮತ್ತು ತಳ್ಳುವ ಮೂಲಕ ಬಲಪ್ರಯೋಗ ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ರಿಚಾ ಪರಾಶರ್ ಅವರು ದೂರಿನಲ್ಲಿ ಉಲ್ಲೇಖಿಸಲಾದ ಸೆಕ್ಷನ್ಗಳಡಿಯಲ್ಲಿ ಮಹಿಳೆಯ ಮರ್ಯಾದೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಅಪರಾಧ ಬಲಪ್ರಯೋಗ, ಉದ್ದೇಶಪೂರ್ವಕವಾಗಿ ಗಾಯವನ್ನುಂಟು ಮಾಡುವುದು ಹಾಗೂ ಮಾನವ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯ ಉಂಟು ಮಾಡುವ ರೀತಿಯಲ್ಲಿ ಅಜಾಗರೂಕತೆಯ ವರ್ತನೆ ಸೇರಿದೆ.
ಡಿಸಿಪಿಗೆ ದೂರು ನೀಡಿದ ಬಳಿಕ ವಿಡಿಯೊ ಬಿಡುಗಡೆ ಮಾಡಿರುವ ರಿಚಾ ಪರಾಶರ್, ತಮ್ಮ ಪರವಾಗಿ ನಿಂತ ಎಲ್ಲರಿಗೂ ಧನ್ಯವಾದಗಳು. ನನಗೆ ಹಲವಾರು ಬೆದರಿಕೆಗಳು ಬರುತ್ತಿವೆ. ನನ್ನನ್ನು ಎಷ್ಟೇ ಟ್ರೋಲ್ ಮಾಡಿ ಆದರೆ ನಾನು ಯಾವಾಗಲೂ ಸತ್ಯದ ಪರವಾಗಿಯೇ ನಿಂತಿದ್ದೇನೆ. ಮುಂದೆಯೂ ಹಾಗೆಯೇ ಮುಂದುವರಿಯುತ್ತೇನೆ. ನನ್ನ ಪಾಲಿಗೆ ನನ್ನ ಆತ್ಮಗೌರವ, ಘನತೆ ಹಾಗೂ ಪತ್ರಕರ್ತೆಯಾಗಿ ವರದಿ ಮಾಡುವ ಮತ್ತು ಪ್ರಶ್ನೆಗಳನ್ನು ಕೇಳುವ ನನ್ನ ಹಕ್ಕು ಅತ್ಯಂತ ಮುಖ್ಯವಾದುದು. ಇದು ಕೇವಲ ವೈಯಕ್ತಿಕ ಹಕ್ಕಲ್ಲ. ಇವು ಭಾರತದ ಸಂವಿಧಾನವು ನೀಡಿರುವ ಹಕ್ಕುಗಳು. ಇವುಗಳನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಲೇಬೇಕು. ನಾನು ಕ್ರಿಮಿನಲ್ ದೂರು ದಾಖಲಿಸಿದ್ದೇನೆ. ಕಾನೂನು ತನ್ನ ಕೆಲಸವನ್ನು ಮಾಡುತ್ತದೆ. ನಿಷ್ಪಕ್ಷಪಾತ ತನಿಖೆ ನಡೆಯುತ್ತದೆ ಎಂಬ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಹೇಳಿದರು.
ಪತ್ರಕರ್ತೆ ರಿಚಾ ಮಾಡಿರುವ ಆರೋಪವನ್ನು ಕಾಂಗ್ರೆಸ್ ನಿರಾಕರಿಸಿದೆ. ಗರ್ಭಾವಸ್ಥೆಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಅಪಾಯಕಾರಿ. ರಾಹುಲ್ ಗಾಂಧಿ ಅವರು ಮಧ್ಯಾಹ್ನ 3- 4 ಗಂಟೆ ಸುಮಾರಿಗೆ ಆಕೆಯನ್ನು ತಳ್ಳಿದರು ಎಂದು ಹೇಳಲಾಗುತ್ತದೆ. ಆದರೆ ಆಕೆ ರಾತ್ರಿ 8.30ಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೂ ಮೊದಲು ಆಕೆಯ ಸಹೋದರಿ ಬಿಜೆಪಿ ಶಾಸಕರ ಕಚೇರಿಗೆ ತೆರಳಿದ್ದಳು. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಮಾಡದ ಎಕ್ಸ್-ರೇ ಪರೀಕ್ಷೆಯನ್ನು ಆಕೆಗೆ ಮಾಡಿಸಲಾಗಿದೆ ಎಂದು ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ ತಿಳಿಸಿದ್ದಾರೆ.
ಕೋಲ್ಕತ್ತಾ ಕಾಲ್ತುಳಿತ ಪ್ರಕರಣ; ಸಾವಿನ ಸಂಖ್ಯೆ 19ಕ್ಕೆ ಏರಿಕೆ, 7 ಮಂದಿ ಬಂಧನ
ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿ, ಪತ್ರಕರ್ತೆ ಅವರಿಗೆ ಸಹಾಯ ಮಾಡದ ಕಾಂಗ್ರೆಸ್ ಕಾರ್ಯಕರ್ತರು ಈಗ ಅವರ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.